ಸ್ಕಿನ್ ಗ್ಲೋ ಆಗಲು ದೇಸೀ ತುಪ್ಪವೆಂಬ ಮನೆ ಮದ್ದು....
ತುಪ್ಪ ಕೊಲೆಸ್ಟರಾಲ್ ಹೆಚ್ಚಿಸುತ್ತದೆ. ಹೃದ್ರೋಗಕ್ಕೆ ಕಾರಣವಾಗಬಲ್ಲದು ಎಂಬ ಇಲ್ಲಸಲ್ಲದ ತಪ್ಪು ತಿಳುವಳಿಕೆ ಇವೆ. ಆದರೆ, ದೇಸೀ ಹಾಲಿನ ತುಪ್ಪ ಬಳಸಿದರೆ ತ್ವಚೆ ಆರೋಗ್ಯದೊಂದಿಗೆ ಹಲವು ರೋಗಗಳನ್ನೂ ದೂರ ಮಾಡುತ್ತೆ.
ತುಪ್ಪ ಆರೋಗ್ಯಕ್ಕೆ ಅಗತ್ಯ. ಅದರಲ್ಲಿಯೂ ಘಮ ಘಮಿಸುವ ಪರಿಮಳ ಆಹಾರಕ್ಕೆ ಟೇಸ್ಟ್ ನೀಡುತ್ತದೆ. ಉತ್ತಮ ಆರೋಗ್ಯಕ್ಕಾಗಿ ಬಾಲ್ಯದಿಂದಲೇ ಪ್ರತಿದಿನವೂ ತುಪ್ಪ ನೀಡುತ್ತಾರೆ. ಇದೆ ತುಪ್ಪ ತ್ವಚೆಯ ಅಂದ ಹೆಚ್ಚಿಸುತ್ತದೆ. ತ್ವಚೆಯ ಮೇಲೆ ಹೇಗೆ ಪರಿಣಾಮ ಬೀರುತ್ತೆ ತುಪ್ಪ?
- ಉಗುರು ಬೆಚ್ಚನೆ ತುಪ್ಪವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ನಂತರ ಮುಖ ತೊಳೆಯಿರಿ. ಇದರಿಂದ ಮುಖದ ಮಾಯಿಶ್ಚರೈಸರ್ ಹೆಚ್ಚುತ್ತದೆ.
- ನೀರು ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ಸ್ನಾನ ಮಾಡಿ. ಇದರಿಂದ ಸಾಫ್ಟ್ ಸ್ಕಿನ್ ನಿಮ್ಮದಾಗುತ್ತದೆ.
- ಹಸಿ ಹಾಲು, ಕಡ್ಲೆ ಹಿಟ್ಟು ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ವಾಷ್ ಮಾಡಿ. ಇದರಿಂದ ಸ್ಕಿನ್ ಹೊಳೆಯುತ್ತದೆ.
- ಹಸಿಹಾಲು ಮತ್ತು ತುಪ್ಪವನ್ನು ಸೇರಿಸಿ ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತೊಳೆದು ಕೊಳ್ಳಿ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
- ತುಟಿ ಒಡೆದಿದ್ದರೆ ಪ್ರತಿದಿನ ರಾತ್ರಿ ತುಟಿಗೆ ತುಪ್ಪ ಹಚ್ಚಿ ಮಸಾಜ್ ಮಾಡಿ. ಇದರಿಂದ ಸುಕೋಮಲ ತುಟಿ ನಿಮ್ಮದಾಗುತ್ತದೆ. ಜೊತೆಗೆ ಡಾರ್ಕ್ ಲಿಪ್ಸ್ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಪ್ರತಿದಿನ ತುಪ್ಪದಿಂದ ಶರೀರವನ್ನು ಮಸಾಜ್ ಮಾಡುವುದರಿಂದ ವೃದ್ಧಾಪ್ಯದ ಲಕ್ಷಣಗಳು ಕಾಣಿಸುವುದಿಲ್ಲ.
- ಡ್ರೈ ಸ್ಕಿನ್ ಸಮಸ್ಯೆ ನಿವಾರಿಸಿ, ಸ್ಕಿನ್ ಮಾಯಿಶ್ಚರೈಸ್ ಹೆಚ್ಚಿಸುತ್ತದೆ.
- ಮಲಗುವ ಮುನ್ನ ನಿಯಮಿತವಾಗಿ ಕಣ್ಣಿನ ಕೆಳಗೆ ಕೊಂಚ ತುಪ್ಪ ಹಚ್ಚಿ ಮಸಾಜ್ ಮಾಡಿದರೆ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ಮೂಡದಂತೆ ತಡೆಯಬಹುದು.
- ನ್ಯಾಚುರಲ್ ಮಾಯಿಶ್ಚರೈಸರ್ ಆಗಿರುವ ತುಪ್ಪ ಸೇವಿಸಿದರೆ, ಸಾಫ್ಟ್ ಸ್ಕಿನ್ ನಿಮ್ಮದಾಗುತ್ತದೆ.
- ಒಡೆದ ಕೂದಲ ಸಮಸ್ಯೆ ನಿವಾರಿಸಲು ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಕೂದಲ ತುದಿಗೆ ಹಚ್ಚಿ. ನಂತರ ಉತ್ತಮ ಶಾಂಪೂ ಬಳಸಿ ವಾಷ್ ಮಾಡಿ.
- ದೇಸೀ ತುಪ್ಪವನ್ನು ಕೂದಲಿಗೆ ಹಚ್ಚುತ್ತಿದ್ದರೆ ಕೂದಲಿನ ಸಮಸ್ಯೆ, ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ತುಪ್ಪ ಮತ್ತು ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ಸ್ನಾನ ಮಾಡಬೇಕು.