ಕೊಪ್ಪಳ[ನ.6]: ಟ್ರ್ಯಾಕ್ಟರ್‌ವೊಂದು ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, ಐದು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಬಳಿಯ ವಣಗೇರಿ ರಸ್ತೆಯಲ್ಲಿ ಇಂದು[ಬುಧವಾರ] ನಡೆದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತ ಮಹಿಳೆಯನ್ನು ಶರಣವ್ವ ಶರಣಪ್ಪ ಹಾಸಗಲ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹನುಮಪ್ಪ ಉಪ್ಪಾರ, ಖಾದರಬೀ, ನಿಂಗಪ್ಪ, ಪರಸಪ್ಪ ಹಾಗೂ ಶರಣಪ್ಪ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಕೂಲಿ ಕಾರ್ಮಿಕರಾಗಿದ್ದರು. ಇವರು ರ‍್ಯಾವಣಕಿ ಗ್ರಾಮಕ್ಕೆ ಜಮೀನು ಕೆಲಸಕ್ಕೆಂದು ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.