ಕೊಪ್ಪಳ [ಅ.28]: ಲಕ್ಷ್ಮಣ ಸವದಿ ಇನ್ನೊಂದು ಸಾರಿ ಸೋತರೆ ಮುಖ್ಯಮಂತ್ರಿಯೇ ಆಗುತ್ತಾರೆ. ಅವರಿಗೆ ಸೋತಷ್ಟು ಅವಕಾಶಗಳು ಜಾಸ್ತಿ ಆಗುತ್ತದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಟಾಂಗ್ ನೀಡಿದ್ದಾರೆ. 

ಕೊಪ್ಪಳದ ಕಾರಟಗಿಯಲ್ಲಿ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಲಕ್ಷ್ಮಣ್ ಸವದಿ ಒಂದು ಸಾರಿ ಸೋತಿದ್ದಕ್ಕೆ ಉಪ ಮುಖ್ಯಮಂತ್ರಿ ಆದರು, ಇನ್ನೊಂದು ಸಾರಿ ಸೋತರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ಹೇಳಿ ತಂಗಡಗಿ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನುವ ಸವದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತಿಚಗಷ್ಟೇ ಮಾಜಿ ಸಚಿವ ತಂಗಡಗಿ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಸಂಗಣ್ಣ ಕರಡಿ ಮತ್ತು ಕನಕಗಿರಿ ಶಾಸಕ ಬಸವರಾಜ್ ದಡೇಸೂಗುರು ಹರಿಹಾಯ್ದಿದ್ದು, ಇವರಿಗೆಲ್ಲಾ ಚಾಲೆಂಜ್ ಹಾಕಿದ್ದಾರೆ.  ಮೊದಲು ಕೇಂದ್ರದಿಂದ ನೆರೆಪರಿಹಾರ ತೆಗೆದುಕೊಂಡು ಬನ್ನು, ಬ್ಯಾನರ್ ಹಾಕಿಸಿ ನಾನೇ ನಿಮ್ಮನ್ನೆಲ್ಲಾ ಅಭಿನಂದಿಸುತ್ತೇನೆ ಎಂದಿದ್ದಾರೆ. 

ನಿಮ್ಮ‌ ಮೇಲೆ ವೈಯಕ್ತಿಕ ದ್ವೇಷ ನನಗಿಲ್ಲ. ವೈಯಕ್ತಿಕ ದ್ವೇಷದಿಂದ ನಿಮ್ಮನ್ನು ಟೀಕಿಸಿಲ್ಲ. ನೀವು ನೆರೆಪರಿಹಾರ ತರುವಲ್ಲಿ ವಿಫಲರಾಗಿದ್ದಿರಿ ಇದಕ್ಕೆ ಟೀಕಿಸಿದ್ದಿನಿ ಎಂದು ಹೇಳಿದ್ದು, ನಾಳೆಯೇ ಪರಿಹಾರ ತಂದಲ್ಲಿ ನಿಮಗೆ ಶುಭಾಶಯ ತಿಳಿಸುತ್ತೇನೆ ಎಂದಿದ್ದಾರೆ.