ಕೊಪ್ಪಳ[ಅ.16]: ಐದು ವಾಹನಗಳು ಡಿಕ್ಕಿ ಹೊಡೆದ ಘಟನೆ ತಾಲೂಕಿನ ಹೊಸ‌ ಲಿಂಗಾಪೂರ ಬಳಿ ಅ. 15 ರಂದು ರಾತ್ರಿ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಊಟಕ್ಕೆಂದು ಚಾಲಕ ರಸ್ತೆ ಬದಿ ಲಾರಿ ನಿಲ್ಲಿಸಿದ್ದ, ಈ ವೇಳೆ ಲಾರಿಗೆ ಟಿಪ್ಪರ್ ವೊಂದು ಡಿಕ್ಕಿ ಹೊಡೆದಿದೆ.  ಅದಾದ ಬಳಿಕ ಹಿಂದೆ ಬರ್ತಿದ್ದ ಮೂರು ಟಿಪ್ಪರ್ ಗಳು ಡಿಕ್ಕಿ ಹೊಡೆದಿವೆ. ಒಟ್ಟು ಐದು ವಾಹನಗಳು ಡಿಕ್ಕಿ ಹೊಡೆದಿವೆ. ಇದರಿಂದ ಸುಮಾರು ಒಂದು ಗಂಟೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಮುನಿರಾಬಾದ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.