Asianet Suvarna News Asianet Suvarna News

ಕೊಪ್ಪಳ: ನೀರಲಗಿ 1500 ಎಕರೆಗೆ ನೀರಾವರಿ ಭಾಗ್ಯ

ನೀರಲಗಿ ಏತ ನೀರಾವರಿ ಯೋಜನೆಯ ಮುಂದುವರಿದ ಕಾಮಗಾರಿಯಿಂದ ಈ ಭಾಗದ 1,500 ಎಕರೆ ಪ್ರದೇಶ ನೀರಾವರಿಯಾಗಲಿದೆ| ನೀರಲಗಿ ಏತ ನೀರಾವರಿ ಕಾಮಗಾರಿ ವಿಸ್ತರಣೆಯಾಗುತ್ತಿದೆ| 2 ಕೋಟಿ ವೆಚ್ಚದಲ್ಲಿ ಸುಮಾರು 1,500 ಎಕರೆ ನೀರಾವರಿಯಾಗಲಿದೆ| ಇದರಿಂದ ಅಂತರ್ಜಲ ಹೆಚ್ಚಳವಾಗಲಿದೆ| ಈ ಭಾಗದ ರೈತರಿಗೆ ಈ ಯೋಜನೆಯು ವರದಾನವಾಗಲಿದೆ|

Niralagi Irrigation to 1500 acres in Koppal District
Author
Bengaluru, First Published Oct 20, 2019, 7:39 AM IST

ಕೊಪ್ಪಳ(ಅ.19): ನೀರಲಗಿ ಏತ ನೀರಾವರಿ ಯೋಜನೆಯ ಮುಂದುವರಿದ ಕಾಮಗಾರಿಯಿಂದ ಈ ಭಾಗದ 1,500 ಎಕರೆ ಪ್ರದೇಶ ನೀರಾವರಿಯಾಗಲಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ಅವರು ಹೇಳಿದ್ದಾರೆ. 

ತಾಲೂಕಿನ ನೀರಲಗಿ ಗ್ರಾಮದ ಬಳಿ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀರಲಗಿ ಏತ ನೀರಾವರಿ ಕಾಮಗಾರಿ ವಿಸ್ತರಣೆಯಾಗುತ್ತಿದೆ. ಹಿಂದೆ ಕಾಮಗಾರಿ ನಡೆದಿತ್ತು. ಆದರೆ 2 ಕೋಟಿ ವೆಚ್ಚದಲ್ಲಿ ಸುಮಾರು 1,500 ಎಕರೆ ನೀರಾವರಿಯಾಗಲಿದೆ. ಇದರಿಂದ ಅಂತರ್ಜಲ ಹೆಚ್ಚಳವಾಗಲಿದೆ. ಈ ಭಾಗದ ರೈತರಿಗೆ ಈ ಯೋಜನೆಯು ವರದಾನವಾಗಲಿದೆ. ಶೀಘ್ರದಲ್ಲಿಯೇ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯಿಂದ ಸುಮಾರು 8ಸಾವಿರ ಎಕರೆ ನೀರಾವರಿಯಾಗಲಿದೆ ಎಂದರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಸ್‌.ಬಿ.ನಾಗರಳ್ಳಿ, ತಾಪಂ ಅಧ್ಯಕ್ಷ ಬಾಲಚಂದ್ರನ್‌, ಪ್ರಮುಖರಾದ ವೆಂಕನಗೌಡ ಹಿರೇಗೌಡ್ರ, ಜುಲ್ಲುಸಾಬ್‌ ಖಾದ್ರಿ,ರವಿ ಕುರಗೋಡ, ಕೃಷ್ಣ ಇಟ್ಟಂಗಿ, ಹನುಮರೆಡ್ಡಿ ಹಂಗನಕಟ್ಟಿ, ನಗರಸಭೆ ಸದಸ್ಯ ಅಕ್ಬರ್‌ಪಾಷಾ ಪಲ್ಟನ್‌, ಜಡಿಯಪ್ಪ ಬಂಗಾಳಿ, ಪ್ರಸನ್ನ ಗಡಾದ ಇತರರು ಇದ್ದರು.
 

Follow Us:
Download App:
  • android
  • ios