ಕೊಪ್ಪಳದಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚುತ್ತಿದೆ ಹುಚ್ಚು ನಾಯಿ: ಬೆಚ್ಚಿಬಿದ್ದ ಜನತೆ
ಹುಚ್ಚು ನಾಯಿ ದಾಳಿ| 14 ಜನರಿಗೆ ಗಾಯ|ಬಾಲಕನ ಮೇಲೆಯೂ ದಾಳಿ ಮಾಡಿದ ನಾಯಿ| ನಾಯಿಯ ಕಡಿತಕ್ಕೆ ಓಣಿಯಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ| ಕೆಲವರಿಗೆ ಸಣ್ಣ ಪುಟ್ಟ ಗಾಯ| ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ| ಕೆಲವರು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ|
ಕೊಪ್ಪಳ[ನ.6]: ಇಲ್ಲಿನ ಕುವೆಂಪು ನಗರ ಮತ್ತು ವಡ್ಡರ ಓಣಿಯಲ್ಲಿ ಹುಚ್ಚು ನಾಯಿಯೊಂದು ಮಂಗಳವಾರ ದಾಳಿ ಮಾಡಿ ಐವರು ಮಹಿಳೆಯರು ಸೇರಿದಂತೆ 14 ಜನರಿಗೆ ಕಚ್ಚಿದೆ. ಐವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಹುಚ್ಚು ನಾಯಿಯೊಂದು ಓಣಿಯಲ್ಲಿ ಓರ್ವ ಬಾಲಕ, ಐವರು ಮಹಿಳೆಯರು ಸೇರಿದಂತೆ 8 ಜನ ಪುರುಷರಿಗೆ ಕಚ್ಚಿದೆ. ನಾಯಿ ಬೆನ್ನಟ್ಟಿಕೊಂಡು ಹೋಗುವ ವೇಳೆಯಲ್ಲಿ ಸಿಕ್ಕ ಸಿಕ್ಕವರನ್ನೆಲ್ಲ ಕಡಿದಿದೆ. ಎದುರಿಗೆ ಬರುತ್ತಿದ್ದ ಬಾಲಕನ ಮೇಲೆಯೂ ದಾಳಿ ಮಾಡಿದ ನಾಯಿ, ಮನಬಂದಂತೆ ಓಡಾಡಿದೆ. ನಾಯಿಯ ಕಡಿತಕ್ಕೆ ಓಣಿಯಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಾಯಿ ಕಡಿತದಲ್ಲಿ ಯಶವಂತ(5),ಚಂದ್ರಪ್ಪ(47) ,ಲಕ್ಷ್ಮಣ(28),ಗಂಗಮ್ಮ (25),ಹುಲುಗಪ್ಪ (48)ಅವರಿಗೆ ತೀವ್ರ ಗಾಯಗಳಾಗಿವೆ. ಉಳಿದಂತೆ ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿದ ಬೀದಿ ನಾಯಿಗಳು:
ಜಿಲ್ಲಾದ್ಯಂತ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ನಗರಸಭೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ನಗರಸಭೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿಯೂ ಬೀದಿ ಜಾನುವಾರುಗಳನ್ನು ಹೊರ ಹಾಕುತ್ತೇವೆ, ಹಂದಿಗಳನ್ನು ಹೊರಸಾಗಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆ ನೀಡುವ ನಗರಸಭೆ ಇದುವರೆಗೂ ಅದ್ಯಾವುದನ್ನು ಕಾರ್ಯಗತ ಮಾಡಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.