ಕೊಪ್ಪಳ[ನ.10]: ನರೇಂದ್ರ ಮೋದಿ ಪ್ರದಾನಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಅರುಣ ಜೆಟ್ಲಿ ಹಾಗೂ ಸುಷ್ಮಾ ಸ್ವರಾಜ ಅವರನ್ನು ಕುಣಿಗೆ(ಸ್ಮಶಾನಕ್ಕೆ)ಕಳುಹಿಸಿದ್ದಾರೆ ಎಂದು ಜಿಲ್ಲೆಯ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಭಾನುವಾರ ಕಾರಟಗಿ ಪಟ್ಟಣದಲ್ಲಿ ನಡೆದ ಮಹಾತ್ಮಾ ಗಾಂಧಿಜಿ ಸದ್ಭಾವನ ವೇದಿಕೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಗೆ ನಮ್ ಜನ ಯಾಕ್ ವೋಟ್ ಹಾಕ್ತಾರೋ ಗೊತ್ತಿಲ್ಲ. ಮೋದಿ ಜನರಿಗೆ ಉಪಯೋಗವಾಗುವ ಕೆಲಸ ಎನು‌ ಮಾಡಿದ್ದಾನೆ ಹೇಳಿ ? ಎಂದು ಜನರನ್ನ ಪ್ರಶ್ನಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೋದಿ ಬಂದು ಬಿಜೆಪಿಯ ಪ್ರಮುಖರನ್ನು ಕುಣಿಗೆ(ಸ್ಮಶಾನಕ್ಕೆ) ಕಳುಹಿಸಿದ್ದಾರೆ. ಅರಣ್ ಜೆಟ್ಲಿ, ಸುಷ್ಮಾ ಸ್ವರಾಜ್, ವಾಜಪೇಯಿ ಅವರನ್ನು ಮೋದಿ ಕುಣಿಗೆ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

"

ನವೆಂಬರ್ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ