ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷ: ಎದ್ನೊ ಬಿದ್ನೊ ಅಂತ ಓಡಿದ ರೈತರು!
ಬತ್ತ ಕಟಾವಿನ ವೇಳೆ ಪ್ರತ್ಯಕ್ಷವಾದ ಮೊಸಳೆ|ಮುಸ್ಟೂರು ಗ್ರಾಮದಲ್ಲಿ ಉಮೇಶ ಭೈರಿ ಅವರ ಭತ್ತದ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ|ಲಸ ಮಾಡುತ್ತಿದ್ದ ಕಾರ್ಮಿಕರು ಬೆಚ್ಚಿಬಿದ್ದು ಓಡಿ ಹೋಗಿದ್ದಾರೆ| ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ತುಂಗಭದ್ರಾ ನದಿಗೆ ಬಿಟ್ಟಿದ್ದಾರೆ|
ಕೊಪ್ಪಳ[ನ.3]: ಗಂಗಾವತಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಉಮೇಶ ಭೈರಿ ಅವರ ಭತ್ತದ ಹೊಲದಲ್ಲಿ ಕಟಾವು ಮಾಡುವಾಗ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೆಚ್ಚಿಬಿದ್ದು ಓಡಿ ಹೋದ ಘಟನೆ ಶನಿವಾರ ಸಂಭವಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಭತ್ತ ಕೊಯ್ಯುವ ಯಂತ್ರದ ಶಬ್ದ ಕೇಳಿಸಿದ್ದರಿಂದ ಭತ್ತದ ಗದ್ದೆಯಲ್ಲಿಯೇ ಅವಿತುಕೊಂಡಿದ್ದ ಮೊಸಳೆಹೊರ ಬಂದಿತು. ಅದು ಭತ್ತ ಕೊಯ್ಯುವ ಯಂತ್ರವನ್ನೇ ಹಿಂಬಾಲಿಸುತ್ತಿದ್ದಂತೆ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಯಂತ್ರ ಚಾಲಕ ಸೇರಿದಂತೆ ಎಲ್ಲರೂ ಕಾಲಿಗೆ ಬುದ್ದಿ ಹೇಳಿ, ಅಲ್ಲಿಂದ ಓಡಿ ಹೋದರು. ಸುಮಾರು ಐದು ಅಡಿ ಇದ್ದ ಮೊಸಳೆ ಇದಾಗಿತ್ತು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ತುಂಗಭದ್ರಾ ನದಿಗೆ ಬಿಟ್ಟಿದ್ದಾರೆ.