ಟ್ರ್ಯಾಕ್ಟರ್ ಪಲ್ಟಿ ನಾಲ್ವರು ಸಾವು| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಮುಕ್ಕುಂಪಿ ಬಳಿ ಘಟನೆ| ಹನುಮಂತಪ್ಪ, ಹುಲಿಗೆಮ್ಮ, ಅಂಬಮ್ಮ ಸೇರಿ ನಾಲ್ವರು ಸಾವು |

ಕೊಪ್ಪಳ, [ಮಾ.01]: ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕುಂಪಿ ಗ್ರಾಮದ ಬಳಿ ಟ್ರ್ಯಾಕ್ಟರ್‌ ಪಲ್ಟಿಯಾಗಿ ನಾಲ್ವರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.

ಹನುಮಂತಪ್ಪ (60), ಹುಲಿಗೇಮ್ಮ(40),ಅಂಬಮ್ಮ(70) ಮೃತರು. ಗಾಯಗೊಂಡಿದ್ದವರನ್ನು ಕೊಪ್ಪಳ ಜಿಲ್ಲಾಸ್ಪತ್ರೆ ಮತ್ತು ಗಂಗಾವತಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 

ಗಂಗಾವತಿ ತಾಲೂಕು ಹೊಸಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಪ್ರತಿಭಟನೆಗಾಗಿ ಕೊಪ್ಪಳಕ್ಕೆ ಬಂದಿದ್ದರು. ಪ್ರತಿಭಟನೆ ಮುಗಿಸಿದದ ಬಳಿಕ ಊರಿನತ್ತ ಹೋಗುವಾಗ ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದೆ.

ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲ‌ನೆ ನಡೆಸಿದ್ದಾರೆ.