ಕೋಲಾರ(ಅ.27): ಕೇಂದ್ರ ಸರ್ಕಾರ ಸುಂಕ ರಹಿತ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದಿಗೆ ಅವಕಾಶ ನೀಡುವುದನ್ನು ವಿರೋಧಿಸಿ ನ.4ರಂದು ದೇಶಾದ್ಯಂತ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ರೈತರು, ಹಾಲು ಉತ್ಪಾದಕರು ಬೆಂಬಲ ನೀಡಬೇಕು’ ಎಂದು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜೆ.ಸಿ.ಬೈಯ್ಯರೆಡ್ಡಿ ಮನವಿ ಮಾಡಿದ್ದಾರೆ.

ನಿತ್ಯ 80 ಲಕ್ಷ ಲೀ. ಹಾಲು ಉತ್ಪಾದನೆ

ನಗರದ ಸಹಕಾರ ಯೂನಿಯನ್‌ ಸಭಾಂಗಣದಲ್ಲಿ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿ ರೈತರು ಮತ್ತು ಕೃಷಿ ಕೂಲಿಕಾರರ ಕುಟುಂಬಗಳು ಪ್ರತಿ ನಿತ್ಯ ಸುಮಾರು 80ರಿಂದ 85 ಲಕ್ಷ ಲೀಟರ್‌ ಹಾಲನ್ನು ಉತ್ಪಾದನೆ ಮಾಡುತ್ತಿದ್ದಾರೆ. ಕೃಷಿ ಬಿಕ್ಕಟ್ಟಿನ ಫಲವಾಗಿ ಹಾಲು ಉತ್ಪಾದಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದನೆಯು ನಷ್ಟದಾಯಕವಾಗಿ ಪರಿವರ್ತನೆಯಾಗುತ್ತಿದ್ದರೂ ಅದಾಯದ ಕಾರಣದಿಂದ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅಪಾಯಕಾರಿ ಆರ್‌ಸಿಇಪಿ ಒಪ್ಪಂದ

ದೇಶದೆಲ್ಲೆಡೆ ಹಾಲಿನ ಉತ್ಪಾದನೆ ಹೆಚ್ಚಿದೆ. ಆದರೆ, ಉತ್ಪಾದನೆಗೆ ತಕ್ಕಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲ. ಈ ಕಾರಣಕ್ಕೆ ಸಾಕಷ್ಟುರಾಜ್ಯಗಳಲ್ಲಿ ವಾರದಲ್ಲಿ ಒಂದು ದಿನ ಹಾಲು ಖರೀದಿ ಮಾಡುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರವು ವಿಶ್ವ ವಾಣಿಜ್ಯ ಒಪ್ಪಂದಕ್ಕಿಂತಲೂ ಅಪಾಯಕಾರಿಯಾದ ಆರ್‌ಸಿಇಪಿ ಒಪ್ಪಂದ ಜಾರಿ ಮಾಡಲು ಹೊರಟಿದೆ’ ಎಂದು ದೂರಿದ್ದಾರೆ.

ಸರ್ಕಾರ ವರ್ಗಾವಣೆ ದಂಧೆ ಬಿಟ್ಟು ಬೇರೇನೂ ಮಾಡ್ತಿಲ್ಲ: ಕೈ ಶಾಸಕ ಕಿಡಿ

ಹಾಲಿನ ದರ ಹೆಚ್ಚು ಮಾಡಬೇಕು ಎಂದು ಒತ್ತಾಯ ಮಾಡುತ್ತಿರುವ ಸಂದರ್ಭದಲ್ಲಿ, ಇದಕ್ಕೆ ವಿರುದ್ಧವಾಗಿ ಬಹು ರಾಷ್ಟ್ರೀಯ ಕಂಪನಿಗಳನ್ನು ತೃಪ್ತಿಪಡಿಸಲು ಶೇ.64 ಆಮದು ಸುಂಕವನ್ನು ತೆಗೆಯುವ ಮೂಲಕ ಅಗ್ಗದ ವಿದೇಶಿ ಹಾಲು ಮತ್ತು ಉತ್ಪನ್ನಗಳನ್ನು ರಪ್ತು ಮಾಡಿಕೊಳ್ಳಲು ಮುಂದಾಗಿದ್ದಾರೆ. ರೈತ ವಿರೋಧಿ ಆರ್‌ಸಿಇಪಿ ಒಪ್ಪಂದ ಮಾಡಿಕೊಳ್ಳಲು ಕೇಂದ್ರ ಸರ್ಕಾರ ತುದಿಗಾಲಿನ ಮೇಲೆ ನಿಂತಿದ್ದು, ಇದರ ವಿರುದ್ಧ ಹೋರಾಟ ರೂಪಿಸಬೇಕಾಗ ಅಗತ್ಯವಿದೆ ಎಂದಿದ್ದಾರೆ.

ಒಪ್ಪಂದಕ್ಕೆ ಕೇಂದ್ರ ಸಹಿಮಾಡದಿರಲಿ

ಹೈನೋದ್ಯಮಕ್ಕೆ ಕಂಟಕವಾದ ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿ ನ.4ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ರೈತರು, ಹಾಲು ಉತ್ಪಾದಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಕೆಪಿಆರ್‌ಎಸ್‌ ತಾಲೂಕು ಘಟಕದ ಅಧ್ಯಕ್ಷ ಎನ್‌.ಎನ್‌.ಶ್ರೀರಾಮ್‌, ಉಪ್ಪುಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗೋಪಾಲಗೌಡ ಹಾಜರಿದ್ದರು.

ಯಾರೂ ಅಡ್ಡಿ ಪಡಿಸಲು ಸಾಧ್ಯವಿಲ್ಲ: BJP ಸೇರುವ ಸುಳಿವು ನೀಡಿದ JDS ಶಾಸಕ