ಕೋಲಾರ(ಅ.23): ಕಾಟಾಚಾರಕ್ಕೆ ಹಾಸನ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ, ನಾನು ಉಸ್ತುವಾರಿ ಸಚಿವನಾಗಿ ಅಲ್ಲಿಗೆ ಹೋಗುತ್ತಿದ್ದೇನೆ ಎಂದು ನೀರಾವರಿ ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶಿವಾರಪಟ್ಡಣ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಕ್ಕೆ ಮಾಧುಸ್ವಾಮಿ ಕಾಟಾಚಾರಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ಮಾಡಿದ್ದ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಚಿಲ್ಲರೆ ರಾಜಕೀಯ ಮಾಡೋನಲ್ಲ. ನಾನು ಸಚಿವನಾದ ಮೇಲೆ ಸಾಕಷ್ಟುಗಮನಾರ್ಹ ಕೆಲಸ ಮಾಡಿದ್ದೇನೆ ಎಂದರು.

ಕೂಲಿ ಮಾಡಲು ಹೋಗ್ತಿಲ್ಲ

ಈಗ್ಯಾಕೆ ಕುಮಾರಸ್ವಾಮಿ ಹಾಸನ ಜಿಲ್ಲೆ ಬಗ್ಗೆ ಮಾತಾಡ್ತಿದ್ದಾರೆ. ಹಾಸನಕ್ಕೂ ಕುಮಾರಸ್ವಾಮಿ ಅವರಿಗೂ ಏನೂ ಸಂಬಂಧ. ಅವರು ಹಾಸನ ಜಿಲ್ಲೆ ಬಿಟ್ಟು ಬಹಳ ದಿನಗಳೇ ಆಗಿದೆ. ಅವರಿಗೂ ಹಾಸನಕ್ಕೂ ಏನು ಸಂಬಂಧ. ನಾನು ಹಾಸನಕ್ಕೆ ಕೂಲಿ ಮಾಡಲು ಹೋಗ್ತಿಲ್ಲ, ಮಂತ್ರಿಗಿರಿ ಮಾಡಲು ಹೋಗ್ತಿದ್ದೇನೆ ಎಂದಿದ್ದಾರೆ.

ಕೋಲಾರ: ದೀಪಾವಳಿಗೆ ಚೈನೀಸ್ ಪಟಾಕಿ ಮಾರಾಟವಿಲ್ಲ

ನಾನು ಸಚಿವನಾದ ನಂತರ ಯಾವುದೇ ಘರ್ಷಣೆಗೂ ಅವಕಾಶ ನೀಡದೆ , ಒಳ್ಳೆ ಕೆಲಸ ಮಾಡಿದ್ದೇನೆ,ಸಣ್ಣ ಘರ್ಷಣೆ ಇಲ್ಲದೆ ಎರಡು ಕಡೆ ಜಿಲ್ಲೆಯಲ್ಲಿ ಹೇಮಾವತಿ ನದಿ ಹರಿದಿದೆ.ಇತಿಹಾಸದಲ್ಲಿ ಆ ರೀತಿಯ ಕೆಲಸ ಕುಮಾರಸ್ವಾಮಿ ಮಾಡಿಲ್ಲ ಎಂದು ತಿವಿದರು.

ಸಿದ್ದರಾಮಯ್ಯಗೆ ಭ್ರಮನಿರಸನ

ಸರ್ಕಾರದ ಆಯಸ್ಸು ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು ಯಾರು ಯಾವಾಗ ಸಾಯುತ್ತಾರೆ ಎಂದು ಹೇಗೆ ಹೇಳೋದು. ಮುಂದೇ ಏನು ಆಗುತ್ತೆ ಎಂದು ಯಾರಿಗೆ ಗೊತ್ತಿದೆ ಎಲ್ಲಿವರೆಗೆ ಸರ್ಕಾರ ಇರುತ್ತದೋ ಅಲ್ಲಿವರೆಗೆ ಅಧಿಕಾರ ನಡೆಸುತ್ತೇವೆ. ಸಿದ್ದರಾಮಯ್ಯ ನವರಿಗೆ ಭ್ರಮನಿರಸನವಾಗಿದೆ. ಸಿದ್ದರಾಮಯ್ಯ ನವರು ಮೊದಲು ಸ್ವ ಕ್ಷೇತ್ರದಲ್ಲಿ ಸೋತಿರುವ ಸೋಲನ್ನು ಒಪ್ಪಿಕೊಳ್ಳಲು ಹೇಳಿ ಮ್ಯಾಂಡೇಟ್‌ ಇಲ್ಲದೆ ಈಗ ಮಾತನಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸೀಟು ಗೆದ್ದು ಹೆದರಲು ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಚಿವರಿಗೆ ಮುತ್ತಿಗೆ:

ಕೆ.ಸಿ.ವ್ಯಾಲಿ ನೀರನ್ನು ಮೂರು ಹಂತದ ಶುದ್ದೀಕರಣ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಚಿವರಿಗೆ ಮಾಲೂರು ತಾಲೂಕಿನ ಶಿವಾರಪಟ್ಟಣ ಕೆರೆಯಲ್ಲಿ ಜಿಲ್ಲೆಯ ನೀರಾವರಿ ಹೋರಾಟಗಾರರು ಮುತ್ತಿಗೆ ಹಾಕಿದರು. ಕೆ ಸಿ ವ್ಯಾಲಿ ಏತ ನೀರಾವರಿ ಯೋಜನೆ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರರು ಕೋಲಾರ ನಗರಕ್ಕೆ ನೀರು ಸರಬರಾಜು ಮಾಡುವ ಅಮ್ಮೇರಹಳ್ಳಿ, ಮಡೇರಹಳ್ಳಿ ಹಾಗೂ ಅಮ್ಮಾನಿಕೆರೆಗೆ ನೀರು ಹರಿಸದಂತೆ ಒತ್ತಾಯ ಮಾಡಿದರು. ಕೆ.ಸಿ.ವ್ಯಾಲಿ ನೀರನ್ನು ಪೂರ್ಣ ಶುದ್ದೀಕರಣದ ಖಾತ್ರಿ ಬಳಿಕ ನೀರು ಹರಿಯುವಂತೆ ಒತ್ತಾಯಿಸಿದ್ದಾರೆ. ಸಚಿವರಿಗೆ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸಾಥ್‌ ನೀಡಿದ್ದಾರೆ.

ಕೋಲಾರ: ಮತ್ತೆ ತಲೆ ಎತ್ತಿದ ಫಿಲ್ಟರ್‌ ಮರಳು ದಂಧೆ