ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸಿ ಅಲ್ಲಿ ರಸ್ತೆ ನಿರ್ಮಿಸಿಕೊಡುವ ಮೂಲಕ ಮಡಿಕೇರಿಯ ತಹಸೀಲ್ದಾರ್ ಒಬ್ಬರು ಮಾದರಿಯಾಗಿದ್ದಾರೆ. ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ಕೆ ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತವಾಗಿದೆ.

ಮಡಿಕೇರಿ(ಅ.20): ದಶಕಗಳಿಂದ ರಸ್ತೆ ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮದ ನಿತಿನ್‌ ಗಣಪತಿ ಅವರ ಕಾಫಿ ತೋಟ ಹಾಗೂ ಸರ್ಕಾರಿ ಹಾಸ್ಟೆಲ್‌ಗೆ ತೆರಳಲು ತಹಸೀಲ್ದಾರ್‌ ಸಮ್ಮಖದಲ್ಲಿ ನೂತನ ರಸ್ತೆ ನಿರ್ಮಾಣ ಮಾಡಲಾಯಿತು.

ಸುಂಟಿಕೊಪ್ಪ ಹೋಬಳಿ ಚೇರಳ ಶ್ರೀಮಂಗಲ ಗ್ರಾಮದ ನಿತಿನ್‌ ಗಣಪತಿಯವರ ಕೊಳಂಬೆ ಕಾಡು ತೋಟಕ್ಕೆ ಮತ್ತು ಸರ್ಕಾರಿ ಹಾಸ್ಟೆಲ್‌ಗೆ ತೆರಳಲು ಗ್ರಾಮ ನಕ್ಷೆಯಂತೆ ರಸ್ತೆ ಸಂಪರ್ಕವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದರು.

ತೀರ್ಥೋದ್ಭವಕ್ಕೆ ವಿಶ್ ಮಾಡದ ಎಂಪಿ: ಪ್ರತಾಪ್ ಎಲ್ಲಿದ್ದೀಯಪ್ಪ ವೈರಲ್!

ಇದನ್ನು ಮನಗಂಡ ಅಧಿಕಾರಿಗಳು ಪೆರಂಬ ಕೊಲ್ಲಿ ತೋಟದ ಮಾಲೀಕ ಗೋವಿಂದನ್‌ ಒತ್ತುವರಿ ಮಾಡಿ ಕೊಂಡಿದ್ದ ಸರ್ಕಾರಿ ಕಡಂಗ ಜಾಗ ಸರ್ವೆ ನಂ. 229, 230, 192, 232/1, 232/2, 190, ಹಾಗೂ 191/7ರ ಮೂಲಕ ಹಾದುಹೋಗಿರುವ 600 ಮೀಟರ್‌ 20 ಅಡಿ ಅಗಲದ ಜಾಗವನ್ನು ತಹಸೀಲ್ದಾರ್‌ ಗೋವಿಂದರಾಜು ನೇತೃತ್ವದಲ್ಲಿ ತೆರವು ಗೊಳಿಸಿ ರಸ್ತೆ ನಿರ್ಮಿಸಲಾಯಿತು.

ಸುಮಾರು 70 ವರ್ಷಗಳಿಂದ ಕೊಳಂಬೆ ಕಾಡು ತೋಟಕ್ಕೆ ಮತ್ತು ಸರ್ಕಾರಿ ಹಾಸ್ಟೆಲ್‌ಗೆ ತೆರಳಲು ದಾರಿಯಿಲ್ಲದೆ ಬೇರೆಯವರ ತೋಟದೊಳಗಿನಿಂದ ಹಾದು ಹೋಗುವಂತ ಪರಿಸ್ಥಿತಿ ತ್ತು. ಈಗ ಈ ಭಾಗದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಸುಂಟಿಕೊಪ್ಪ ಕಂದಾಯ ಪರಿ ವೀಕ್ಷಕರಾದ ಶಿವಪ್ಪ ಗ್ರಾಮ ಲೆಕ್ಕಿಗ ವಿ.ಎ.ನಸ್ಸೀಮ, ಸರ್ವೆಯರ್‌ ಹರೀಶ ಚಂದ್ರ, ಮಂಜುನಾಥ್‌ ಠಾಣಾಧಿಕಾರಿ ಗ್ರಾಮಸ್ಥರು ಹಾಜರಿದ್ದರು.