ಕುರ್ಚಿ ಕಳೆದುಕೊಂಡ ನಂತರ ಪಾಪ ಅವರಿಗೆ ನಿದ್ದೆ ಬರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಟೀಕಿಸಿದ್ದಾ​ರೆ.  ಮೈತ್ರಿ ಸರ್ಕಾರದ ಪತನಕ್ಕೆ ಕಾರಣವೇ ಸಿದ್ದರಾಮಯ್ಯ ಅಂತಾ ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಮಡಿಕೇರಿ(ಅ.26): ಕೋಲಾರದಲ್ಲಿ ಕಳೆದ ಸಂಸತ್‌ ಚುನಾವಣೆಯಲ್ಲಿ ‘ನನ್ನ ಸೋಲಿಗೆ ರಮೇಶ್‌ ಕುಮಾರ್‌ ಕಾರಣ’ಎಂದು ಪರಾಭವಗೊಂಡ ಸ್ವ ಪಕ್ಷದ ಕೆ.ಎಚ್‌.ಮುನಿಯಪ್ಪ ಅವರೇ ಹೇಳುತ್ತಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಬೇರೆಯವರ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ರಾಜ್ಯಕ್ಕೆ ಬಂದಿರುವ ದುರ್ದೈವ. ಕುರ್ಚಿ ಕಳೆದುಕೊಂಡ ನಂತರ ಪಾಪ ಅವರಿಗೆ ನಿದ್ದೆ ಬರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಟೀಕಿಸಿದ್ದಾ​ರೆ.

ಮಡಿಕೇರಿ ತಾಲೂಕಿನ ಕಣಂರ್‍ಗೇರಿಯಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ನಿರ್ಮಿಸಿದ್ದ 35 ಆಶ್ರಯ ಮನೆಗಳನ್ನು ಶುಕ್ರ​ವಾರ ಹಸ್ತಾಂತರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದ್ದಾರೆ.

ತನ್ನನ್ನೇ ಪ್ರಶ್ನಿ​ಸಿ​ಕೊ​ಳ್ಳ​ಲಿ:

ಯಾವುದೇ ಹೇಳಿಕೆಗಳನ್ನು ಕೊಡುವ ಮೊದಲು ​ವೈಯಕ್ತಿಕವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ತಮಗೆ ತಾವೇ ಪ್ರಶ್ನೆಗಳನ್ನು ಹಾಕಿಕೊಳ್ಳಲಿ. ಅವರೇ ಒಬ್ಬರು ಪಕ್ಷಾಂತರಿಯಾಗಿದ್ದುಕೊಂಡು ಪಕ್ಷಾಂತರ ಶಾಸಕರ ಬಗ್ಗೆ ಮಾತನಾಡ್ತಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವೇ ಸಿದ್ದರಾಮಯ್ಯ ಅಂತಾ ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಎಂದ​ರು.

ಬಿಜೆಪಿ-ಕೆಜೆಪಿ ವಿಭಜನೆಯಾದ ನಂತರ ಆಕಸ್ಮಿಕವಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆ ಅವಧಿಯಲ್ಲಿ 5 ವರ್ಷಗಳು ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನಾವು ಹಿಂದುಳಿದವವರು ಹಾಗೂ ದಲಿತರ ಪರ ಇದ್ದೇವೆ ಎಂದು ಕೇವ​ಲ ಭಾಷಣವನ್ನಷ್ಟೆಮಾಡಿದ್ದು ಬಿಟ್ಟರೆ ಬೆರೇನು ಮಾಡಲಲಿಲ್ಲ ಎಂದು ಕುಟುಕಿದ್ದಾರೆ.

ಮಂಡ್ಯ: 'ಈಶ್ವರಪ್ಪ ತಮ್ಮ ಹಿರಿತನಕ್ಕೆ ತಕ್ಕಂತೆ ಮಾತನಾಡಲಿ'

ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರದ ಹೀನಾಯ ಸ್ಥಿತಿಗೆ ಕಾರಣವೇ ಸಿದ್ದರಾಮಯ್ಯ. ಹಿಂದುಳಿದ ವರ್ಗಗಳ ಜಾತಿ ಜನಗಣತಿಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ 188 ಕೋಟಿ ರು. ವ್ಯಯ ಮಾಡಿದರು. ಜಾತಿ ಗಣತಿಯ ವರದಿ ಸಿದ್ಧವಾ​ಗಿದ್ದು, ಸಿಎಂ ಅನುಮತಿ ಕೊಟ್ಟರೆ ಬಿಡುಗಡೆ ಮಾಡುತ್ತೇವೆ ಎಂದು ಆ ಸಂಸ್ಥೆಯ ಅಧ್ಯಕ್ಷರಾಗಿದ್ದ ಕಾಂತರಾಜು ಅವರೆ ಒಮ್ಮೆ ನನಗೆ ಹೇಳಿದ್ದರು. ವಿಧಾನ ಪರಿಷತ್‌ನಲ್ಲೂ ಜಾತಿ ಗಣತಿಯನ್ನು ನಾಳೆ, ನಾಡಿದ್ದು ಬಿಡುಗಡೆ ಮಾಡುತ್ತೇವೆ ಎಂದೆಲ್ಲಾ ಹೇಳಿದ್ದು ಬಿಟ್ಟರೆ ಅದನ್ನು ಬಿಡು​ಗಡೆ ಮಾಡಲೇ ಇಲ್ಲ. ಇದೀಗ ಹಿಂದುಳಿದವರ ಬಗ್ಗೆ ಜೋರಾಗಿ ಮಾತನಾಡುತ್ತಿದ್ದು, ಹಿಂದುಳಿದವರ ಪರವಾಗಿ ಬಿಜೆಪಿ ಸರ್ಕಾರದ ಇಲ್ಲವೆಂದು ಆರೋಪಿಸುತ್ತಾ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಸೈಕ್ಲೋನ್ ಕ್ಯಾರ್ ಎಫೆಕ್ಟ್: ಎಡೆಬಿಡದ ಮಳೆಗೆ ತತ್ತರಿಸಿದ ಕೊಡಗು...