ಮಡಿಕೇರಿ(ಅ.12): ಸೋಮವಾರಪೇಟೆ ತಾಲೂಕಿನ ಕುಂಬೂರು ಗ್ರಾಮದಲ್ಲಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಮನೆಯ ಕೈ ತೋಟದಲ್ಲಿ ಬೆಳೆದಿದ್ದ ಆರು ಗಂಧದ ಮರಗಳನ್ನು ಗುರುವಾರ ರಾತ್ರಿ ಕಳವು ಮಾಡಲಾಗಿದೆ.

ಶಾಸಕರ ಮನೆಗೆ ಬೀಗ ಹಾಕಿರುವ ಅವಕಾಶವನ್ನು ಸದುಯೋಗಪಡಿಸಿಕೊಂಡ ಕಳ್ಳರು, 1 ಲಕ್ಷ ರು. ಗಳಷ್ಟುಬೆಲೆ ಬಾಳುವ ಮರಗಳನ್ನು ಕತ್ತರಿಸಿ, ತೋಟದೊಳಗೆ ಸಾಗಿಸಿದ್ದಾರೆ.

ಮಡಿಕೇರಿಯಲ್ಲಿ ಖೋಟಾ ನೋಟು ಜಾಲ, ಮೂವರ ಬಂಧನ

ಶಾಸಕ ಅಪ್ಪಚ್ಚು ರಂಜನ್‌ ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗಲು ಪತ್ನಿ ಸಮೇತ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವುದರಿಂದ ಮನೆಗೆ ಬೀಗ ಹಾಕಲಾಗಿತ್ತು. ಗೇಟ್‌ ಸಮೀಪದ ಲೈನ್‌ಮನೆಯಲ್ಲಿ ವಾಸವಿದ್ದ ವಾಚ್‌ಮನ್‌ ನಿದ್ರೆಗೆ ಜಾರಿದ ಮೇಲೆ ಕಳ್ಳತನ ಮಾಡಲಾಗಿದೆ.

ಸ್ಥಳಕ್ಕೆ ಸೋಮವಾರಪೇಟೆ ಸರ್ಕಲ್‌ ಇನ್ಸ್‌ಪೆಕ್ಟರ್‌ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್‌, ಆರ್‌ಎಫ್‌ಒ ಶಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳವನ್ನು ಕರೆಸಲಾಗಿದೆ. ಠಾಣಾಧಿಕಾರಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸುಂಟಿಕೊಪ್ಪ: ವಿದೇಶಿ ಆಟಗಾರನಿಂದ ಮಕ್ಕಳಿಗೆ ಫುಟ್ಬಾಲ್‌ ತರಬೇತಿ