ಕಾಮಗಾರಿಯಾಗಿ ಕೆಲವೇ ತಿಂಗಳು: ಕಿತ್ತು ಬರ್ತಿದೆ ಕಾಂಕ್ರೀಟು
ಸರ್ಕಾರ ಸಾರ್ವಜನಿಕರ ಅನುಕೂಲಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಿಸಿದೆ. ಆದರೆ, ಅಲ್ಲಿನ ಕಾಂಕ್ರೀಟ್ ಕಾಮಗಾರಿ ಮಾತ್ರ ಕಳಪೆಯಾಗಿದ್ದು, ಬಸ್ ಸಂಚಾರ ಆರಂಭವಾದ ಕೆಲವೇ ತಿಂಗಳಲ್ಲಿ ಕಿತ್ತು ಬರುತ್ತಿದೆ.
ಮಡಿಕೇರಿ(ನ.09): ಸರ್ಕಾರ ಸಾರ್ವಜನಿಕರ ಅನುಕೂಲಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಿಸಿದೆ. ಆದರೆ, ಅಲ್ಲಿನ ಕಾಂಕ್ರೀಟ್ ಕಾಮಗಾರಿ ಮಾತ್ರ ಕಳಪೆಯಾಗಿದ್ದು, ಬಸ್ ಸಂಚಾರ ಆರಂಭವಾದ ಕೆಲವೇ ತಿಂಗಳಲ್ಲಿ ಕಿತ್ತು ಬರುತ್ತಿದೆ.
ಸುಮಾರು 4.90 ಕೋಟಿ ರುಪಾಯಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಇದರ ಕಾಂಕ್ರೀಟ್ ಕಾಮಗಾರಿ ಇತ್ತೀಚೆಗೆ ಪೂರ್ಣಗೊಂಡಿದ್ದು, ಬಸ್ ನಿಲ್ದಾಣದ ಒಳಗೆ ಪ್ರವೇಶ ದ್ವಾರದಲ್ಲಿ ರಸ್ತೆಗೆ ಸಂಪರ್ಕಿಸುವ ನೆಲದ ಕಾಂಕ್ರೀಟ್ ಕಾಮಗಾರಿಯನ್ನು ಕಳಪೆ ಗುಣಮಟ್ಟದಲ್ಲಿ ಮಾಡಲಾಗಿರುವ ಕಾರಣ ಹಾಕಿರುವ ಕಾಂಕ್ರೀಟ್ ಕಿತ್ತು ಹೋಗುತ್ತಿದ್ದು, ಕಾಂಕ್ರೀಟ್‌ಗೆ ಬಳಸಲಾಗಿರುವ ಜಲ್ಲಿ ಕಲ್ಲುಗಳು ಮೇಲೆದ್ದು ಕಾಣುತ್ತಿವೆ ಅಲ್ಲದೆ ಗುಂಡಿಯಾಗಿ ಪರಿವರ್ತನೆಯಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.
ಕೊಡಗು: ಜಿಲ್ಲೆಯಾದ್ಯಂತ ನಿಷೇಧಾಜ್ಞೆ, ಮದ್ಯ ಮಾರಾಟವಿಲ್ಲ
ಕಾಮಗಾರಿಯನ್ನು ಅಲ್ಪವೆಚ್ಚದಲ್ಲಿ ಮಾಡಲಾಗಿದ್ದು, ಕಳಪೆ ಕಾಂಕ್ರೀಟ್ ನೆಲಹಾಸು ಕಾಮಗಾರಿ ನಡೆಸಲಾಗಿದೆ. ಇದರಿಂದ ಬಸ್‌ಗಳ ಸಂಚಾರ ಆರಂಭವಾದಾಗಿನಿಂದ ಸ್ವಲ್ಪ, ಸ್ವಲ್ಪವಾಗಿ ಕಿತ್ತು ಬರಲು ಪ್ರಾರಂಭವಾಗಿದೆ. ಪ್ರವೇಶ ದ್ವಾರದ ಬಳಿಯಿರುವ ಚರಂಡಿಯಲ್ಲಿ ಕೊಳಚೆ ನೀರು ಹರಿದು ಹೋಗಲು ಸಾಧ್ಯವಾಗದೇ ಅಲ್ಲೇ ನಿಂತಿರುವ ಕಾರಣ ಸೊಳ್ಳೆ ಸಂತಾನೋತ್ಪತ್ತಿ ಹೆಚ್ಚಾಗಿದ್ದು, ಮಾರಣಾಂತಿಕ ರೋಗಗಳು ಕೂಡ ಹರಡುವ ಭೀತಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಕಾಡತೋಡಗಿದೆ.
ಇದೆಲ್ಲದಕ್ಕೂ ನಗರಸಭೆಯ ಬೇಜವಾಬ್ದಾರಿ ಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಖಾಸಗಿ ಬಸ್ ನಿಲ್ದಾಣ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕಾಮಗಾರಿಯಲ್ಲಿ ಸಾಕಷ್ಟುದುರುಪಯೋಗವಾಗಿದೆ ಎಂದು ಆರೋಪಿಸಿ, ಜಿಲ್ಲಾಧಿಕಾರಿಗಳು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಲಹೆಯೊಂದಿಗೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ: ಈಶ್ವರಪ್ಪ
ಕಾಮಗಾರಿ ಪೂರ್ಣಗೊಂಡು ಸಚಿವರಿಂದ ಕಳೆದ ಮೂರು ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿತು. ಸುಮಾರು 4ರಿಂದ 5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಬಸ್ ನಿಲ್ದಾಣದ ಕಾಮಗಾರಿ ಕಳಪೆಯಿಂದ ಕೂಡಿದೆ. ಕಳಪೆ ಗುಣಮಟ್ಟದ ಕಾಂಕ್ರೀಟ್ ನೆಲಹಾಸು ಕಿತ್ತು ಬರುತ್ತಿದ್ದು, ಜಲ್ಲಿ ಕಲ್ಲುಗಳೂ ಮೇಲೆಯೆ ಕಾಣುತ್ತಿವೆ. ಅಧಿಕಾರಿಗಳ ಬಳಿ ಕೇಳಿದರೆ ಇನ್ನೂ ಕಾಮಗಾರಿ ಪ್ರಾರಂಭ ಆಗಿಲ್ಲ. ಇದು ತಾತ್ಕಾಲಿಕವಾಗಿ ಹಾಕಲಾಗಿದೆ ಎಂದು ಪೊಳ್ಳು ನೇಪ ಹೇಳುತ್ತಿದ್ದಾರೆ.
ಖಾತೆ ಬದಲಾವಣೆ ಇಚ್ಛೆ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ
ಈ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀ ವಿವೇಕಾನಂದ ಜನಸೇವಾ ಸಂಘದ ಸ್ವಾಮೀ ವಿವೇಕಾನಂದ ಜನಸೇವಾ ಸಂಘ ಗಣೇಶ್ ಕಡಗದಾಳು ಹೇಳಿದ್ದಾರೆ.
ಕಾಮಗಾರಿಯನ್ನು ಇನ್ನೂ ಪ್ರಾರಂಭ ಮಾಡಲಾಗಿಲ್ಲ, ಮಳೆ ಬರುತ್ತಿದ್ದ ಕಾರಣ ನಗರಸಭಾ ಸಿಬ್ಬಂದಿಯ ಸಹಾಯದೊಂದಿಗೆ ತಾತ್ಕಾಲಿಕವಾಗಿ ಹಾಕಲಾಯಿತು. ಇದಕ್ಕೆ ಕಾಮಗಾರಿ ವೆಚ್ಚವನ್ನು ಬಳಸಲಾಗಿಲ್ಲ. ಮುಂಬರುವ ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ನಗರ ಸಭಾ ಪೌರಾಯುಕ್ತ ಮಡಿಕೇರಿ ರಮೇಶ್ ಹೇಳಿದ್ದಾರೆ.