ಮಡಿಕೇರಿ(ಅ.27): ಕೊಡಗು ಜಿಲ್ಲೆಯ ಹಲವೆಡೆ ಶನಿವಾರ ಬೆಳಗ್ಗಿನಿಂದಲೇ ಬಿಡುವು ನೀಡದೆ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೆಲ ಕಾಲ ಭಾರಿ ಮಳೆ ಸುರಿಯಿತು.

ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟಏರಿಕೆಯಾಗಿದೆ. ಇದರಿಂದ ಸಂಗಮದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಲು ತೊಡಕುಂಟಾಯಿತು. ಜಿಲ್ಲೆಯ ಸುಂಟಿಕೊಪ್ಪ, ಚೆಟ್ಟಳ್ಳಿ, ಸಿದ್ದಾಪುರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಯಿತು.

ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಕುಮಾರಸ್ವಾಮಿಗಿಲ್ಲ ಆಹ್ವಾನ

ಮಳೆಯಿಂದಾಗಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ನಡೆಯುತ್ತಿರುವ ಸೆಮಿಸ್ಟರ್‌ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮಡಿಕೇರಿಯ ಸಾಯಿ ಕ್ರೀಡಾ ಪ್ರಾ​ಧಿಕಾರದ ಹಾಕಿ ಟಫ್‌ರ್‍ ಮೈದಾನದಲ್ಲಿ ಮಳೆಯ ನಡುವೆಯೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಹಾಕಿ ಲೀಗ್‌ ಪಂದ್ಯಾವಳಿ ನಡೆಯಿತು.

ಕಳೆದ ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ನಷ್ಟಸಂಭವಿಸಿ ಬೆಚ್ಚಿಬಿದ್ದಿದ್ದ ಕೊಡಗಿನ ಜನತೆ ಇದೀಗ ಚೇತರಿಕೆಗೊಳ್ಳುತ್ತಿರುವಾಗಲೇ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಜನ ಆತಂಕ್ಕೆ ಒಳಗಾಗಿದ್ದಾರೆ. ಭಾನುವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಹಬ್ಬ ಕಳೆಗುಂದುವ ಪರಿಸ್ಥಿತಿ ಎದುರಾಗಿದೆ.

ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಮಟ್ಟಏರಿಕೆ