ಯುವಕರು ಬಸವಣ್ಣನ ಆದರ್ಶಗಳನ್ನು ಅಳವಡಿಸಿಕೊಳ್ಳಿ: ಎಚ್.ಆಂಜನೇಯ

ಆಧುನಿಕ ಕಾಲಘಟ್ಟದ ಪ್ರಸ್ತುತ ಬದಲಾದ ದಿನಗಳಲ್ಲಿ ಯುವಕರು ಬಸವಾದಿ ಶಿವಶರಣ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದರೆ ನವ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. 

Youths should adopt Basavannas ideals Says H Anjaneya gvd

ಮೊಳಕಾಲ್ಮೂರು (ಫೆ.17): ಆಧುನಿಕ ಕಾಲಘಟ್ಟದ ಪ್ರಸ್ತುತ ಬದಲಾದ ದಿನಗಳಲ್ಲಿ ಯುವಕರು ಬಸವಾದಿ ಶಿವಶರಣ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದರೆ ನವ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ತಾಲೂಕಿನ ಸಿದ್ದಯ್ಯನಕೋಟೆಯಲ್ಲಿ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾಮಠದಲ್ಲಿ ನಡೆಯುತ್ತಿರುವ ಕಾಯಕಯೋಗಿ ಮ.ನಿ.ಪ್ರ.ಬಸವಲಿಂಗ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವದ ಯುವಜನ ಗೋಷ್ಠಿಯಲ್ಲಿ ಮಾತನಾಡಿದರು.

12 ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿದ್ದ ಬಸವಣ್ಣ ಜಾತ್ಯತೀತ ನವಸಮಾಜ ನಿರ್ಮಾಣಕ್ಕೆ ಅವಿರಥ ಹೋರಾಟ ನಡೆಸಿದ್ದರು. ಈ ಹೊತ್ತಿಗೆ ಜಾತಿ ರಹಿತ, ವರ್ಣ ರಹಿತ ಸಮಾಜವನ್ನು ಕಟ್ಟಿದ್ದ ಬಸವಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಮಹಾಂತ ಸ್ವಾಮೀಜಿಯವರ ದಿಟ್ಟ ನಿರ್ಧಾರದಿಂದ ಪ್ರಾರಂಭವಾದ ಸಿದ್ದಯ್ಯನಕೋಟೆ ಶ್ರೀ ಮಠವು ಬಸವಲಿಂಗ ಶ್ರೀಗಳ ಶ್ರಮದಿಂದಾಗಿ ರಾಜ್ಯಮಟ್ಟಕ್ಕೆ ಹೆಸರಾಗಿದೆ. ಮಠದ ಶ್ರೀಗಳು ಶ್ರಮಜೀವಿಗಳು 25 ವರ್ಷಗಳಿಂದ ಸದಾ ಕಾಯಕ ಮಾಡುತ್ತಲೇ ಮಠದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ ಎಂದರು.

ಸಿದ್ದರಾಮಯ್ಯರಿಂದ 1 ಟ್ರಿಲಿಯನ್ ಆರ್ಥಿಕ ರಾಜ್ಯ ಮಾಡುವ ಪ್ರಯತ್ನ: ಸಚಿವ ಈಶ್ವರ ಖಂಡ್ರೆ

ಗಂಗಾವತಿಯ ಡಾ.ರಾಜಶೇಖರ ನಾರನಾಳ್ ಮಾತನಾಡಿ, ವರ್ಗ, ವರ್ಣ, ಲಿಂಗ ಬೇಧ ಎನ್ನದೆ ಸಮಾನತೆಗಳ ಪ್ರಜಾಪ್ರಭುತ್ವದ ಸಂಸತ್ತನ್ನು ಅನುಭವ ಮಂಟಪದ ಮೂಲಕ 12 ಶತಮಾನದಲ್ಲಿಯೇ ರೂಪಿಸಿದ್ದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ ಎಂದರು. ಸಂದರ್ಭದಲ್ಲಿ ಅಥಣಿಯ ಮೋಟಗಿ ಮಠದ ಶ್ರೀ ಚನ್ನಬಸಪ್ಪ ಮಹಾ ಸ್ವಾಮೀಜಿ, ಚಿತ್ತರಗಿ ವಿಜಯ ಮಹಂತೇಶ್ವರ ಸಂಸ್ಥಾನ ಮಠದ ಮ.ನಿ.ಪ್ರ.ಗುರು ಮಹಾಂತ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಸಮಾಜ ಸೇವಕಿ ಜೀವರತ್ನಮ್ಮ, ಚಿತ್ರ ನಿರ್ದೇಶಕ ಜಿ.ಶ್ರೀನಿವಾಸಮೂರ್ತಿ, ಕಾಂಗ್ರೆಸ್ ಮುಖಂಡರಾದ ಬೋಸಯ್ಯ, ಭಕ್ತ ಪ್ರಹ್ಲಾದ್, ಕಲಾವಿದರ ಕಲ್ಯಾಣ ವೇದಿಕೆಯ ಅಧ್ಯಕ್ಷ ಜಿ.ಪಿ.ಸುರೇಶ, ಕೆ.ಬಸಣ್ಣ, ಶ್ರೀ ಮಠದ ಕಾರ್ಯದರ್ಶಿ ಪಿ.ಆರ್.ಕಾಂತರಾಜ್ ಇದ್ದರು.

Latest Videos
Follow Us:
Download App:
  • android
  • ios