Asianet Suvarna News Asianet Suvarna News

ತುಮಕೂರು : ರಾಮನಿಗಾಗಿ ರಕ್ತದಾನ ಮಾಡಿದ ಯುವಕರು

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ತಾಲೂಕಿನಾದ್ಯಂತ ಹತ್ತು ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ಅನ್ನದಾನ, ಪಾನಕ ಕೋಸಂಬರಿ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಿದವು. ಆದರೆ ಇಲ್ಲಿಯ ರಾಘವೇಂದ್ರ ನಗರದ ಶ್ರೀರಾಮಾಂಜನೇಯ ಯುವಕರ ಬಳಗದ ಸದಸ್ಯರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಇತರರಿಗೆ ಮಾದರಿಯಾಗಿ ವಿನೂತವಾಗಿ ಆಚರಿಸಿದರು.

Youths Organized Blood Donation Camp Due To Ram Pratistapan snr
Author
First Published Jan 24, 2024, 10:43 AM IST

ತುರುವೇಕೆರೆ : ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ತಾಲೂಕಿನಾದ್ಯಂತ ಹತ್ತು ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ಅನ್ನದಾನ, ಪಾನಕ ಕೋಸಂಬರಿ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಿದವು. ಆದರೆ ಇಲ್ಲಿಯ ರಾಘವೇಂದ್ರ ನಗರದ ಶ್ರೀರಾಮಾಂಜನೇಯ ಯುವಕರ ಬಳಗದ ಸದಸ್ಯರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಇತರರಿಗೆ ಮಾದರಿಯಾಗಿ ವಿನೂತವಾಗಿ ಆಚರಿಸಿದರು.

ತುಮಕೂರಿನ ರೆಡ್ ಸರ್ಕಲ್ ರಕ್ತ ಕೇಂದ್ರದ ಸಹಯೋಗದೊಂದಿಗೆ ಶ್ರೀರಾಮಾಂಜನೇಯ ಯುವಕ ಬಳಗದ ಸದಸ್ಯರು ರಾಮ ಹಬ್ಬದ ಪ್ರಯುಕ್ತ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಕಿರಣ್ ಕುಮಾರ್ ಮತ್ತು ಭವ್ಯ ನಾಗೇಶ್ ನೇತೃತ್ವದಲ್ಲಿ ಇಲ್ಲಿಯ ನ್ಯಾಯಾಲಯದ ಮುಂಭಾಗ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸುಮಾರು ೫೦ ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿ ರಾಮಹಬ್ಬವನ್ನು ವಿಶೇಷವಾಗಿ ಆಚರಿಸಿದರು. ರಕ್ತ ಅಪರೂಪವಾದ ವಸ್ತುವಾಗಿದೆ. ಕೃತಕವಾಗಿ ತಯಾರು ಮಾಡಲಾಗದಂತಹ ದ್ರವವಾಗಿದೆ. ಜೀವ ರಕ್ಷಕವಾಗಿರುವ ರಕ್ತದ ದಾನದಿಂದ ೫೦ ಕ್ಕೂ ಹೆಚ್ಚು ಪ್ರಾಣಗಳು ಉಳಿದರೆ ನಿಜವಾದ ರಾಮೋತ್ಸವ ಆಚರಿಸಿದಂತೆ ಆಗುತ್ತದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಕಿರಣ್ ಕುಮಾರ್ ಹೇಳಿದರು.

ರಕ್ತದಾನದಿಂದ ಜೀವದಾನ

 ಶಿರಾ :  ರಕ್ತವು ಪ್ರಕೃತಿ ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ರಕ್ತದಾನ ಎಂದರೆ ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಂತೆ. ನಾವು ನೀಡುವ ರಕ್ತ ಇನ್ನೊಂದು ದಿನ ಬೇರೆಯವರಿಗೆ ಸಹಾಯವಾಗುತ್ತದೆ ಎಂದು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಮೇಜರ್‌ ಅನಿಲ್‌ ಕುಮಾರ್‌ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ರೆಡ್‌ ಕ್ರಾಸ್‌ ಘಟಕ ಹಾಗೂ ಶಿರಾ ರೋಟರಿ ಸ್ಯಾಟಲೈಟ್‌ ಕ್ಲಬ್‌ ಸಹಯೋಗದೊಂದಿಗೆ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು. 18 ವರ್ಷದ ಮೇಲ್ಪಟ್ಟಮತ್ತು 45 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿರುವ ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು ಎಂದು ತಿಳಿಸಿದರು.

ಈ ಶಿಬಿರದಲ್ಲಿ ತುಮಕೂರು ಜಿಲ್ಲಾ ರಕ್ತ ನಿಧಿ ಕೇಂದ್ರದಿಂದ 40 ಯೂನಿಟ್‌ ರಕ್ತವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಯಿತು. ಶಿರಾ ರೋಟರಿ ಸ್ಯಾಟಲೈಟ್‌ ಕ್ಲಬ್‌ ಚೇರ್ಮನ್‌ ಡಿ.ಎಸ್‌.ಕೇಶವ, ರೊಟೇರಿಯನ್‌ ಕೆವಿ ಕುಮಾರಸ್ವಾಮಿ, ಕಾಲೇಜಿನ ರೆಡ್‌ ಕ್ರಾಸ್‌ ಘಟಕದ ಆಯಿಷ, ಡಾ. ಶೇಕ್‌ ಸೇರಿದಂತೆ ಹಲವರು ಹಾಜರಿದ್ದರು. 

ಮದುವೆಯ ಆರತಕ್ಷತೆ ಸಮಾರಂಭದಲ್ಲೂ ರಕ್ತದಾನ

ಬಳ್ಳಾರಿ(ಆ.27): ಮಹಾರಕ್ತದಾನಿ ಎಂದೇ ಹೆಸರಾಗಿರುವ ನಗರದ ಎಸ್‌ಬಿಐ ಬ್ಯಾಂಕ್‌ ನೌಕರ ಬಿ. ದೇವಣ್ಣ ಅವರು ಪುತ್ರನ ಮದುವೆಯ ಆರತಕ್ಷತೆ ಸಮಾರಂಭದಲ್ಲೂ ರಕ್ತದಾನ ಏರ್ಪಡಿಸುವ ಮೂಲಕ ಮಾನವೀಯ ಕಾಳಜಿ ಮೆರೆದಿದ್ದಾರೆ.

ನಗರದ ಬಲಿಜ ಭವನದಲ್ಲಿ ಜರುಗಿದ ಬಿ.ದೇವಣ್ಣನವರ ಪುತ್ರ ಕೆ.ಶ್ರೀಕಾಂತ್‌ ಹಾಗೂ ಹೇಮಾಶ್ರೀ ದಂಪತಿ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ದೇವಣ್ಣನವರ ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ಒಟ್ಟು 51 ಜನರು ರಕ್ತದಾನ ಮಾಡಿದರು.

ಲೋಕಸಭೆಗೆ ಶ್ರೀರಾಮುಲು ಸ್ಪರ್ಧಿಸುವುದು ಸೂಕ್ತ: ಸೋಮಶೇಖರ ರೆಡ್ಡಿ

ಅಷ್ಟೇ ಅಲ್ಲ, ಮಗನ ಮದುವೆ ಸಮಾರಂಭ ನಿಮಿತ್ತ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ .10 ಸಾವಿರ ಹಾಗೂ ಶಾಂಭವಿ ಭಜನಾ ಟ್ರಸ್ಟ್‌ಗೆ .51 ಸಾವಿರ ದೇಣಿಗೆ ನೀಡಿ ಸಮಾಜಮುಖಿ ಕೆಲಸಕ್ಕೆ ದೇವಣ್ಣ ನೆರವಾದರು.
ಶ್ರೀಕಾಂತ -ಹೇಮಾಶ್ರೀ ಮದುವೆಗೆ ಆಗಮಿಸಿದ್ದ ಕುಟುಂಬ ಸದಸ್ಯರು ಹಾಗೂ ಬಂಧುಮಿತ್ರರು ಮದುವೆ ಸಮಾರಂಭದ ಬಿಡುವಿಲ್ಲದ ಕೆಲಸದ ನಡುವೆಯೂ ರಕ್ತದಾನ ಶಿಬಿರಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡ ದೇವಣ್ಣನರ ಸೇವಾ ಕಾರ್ಯ ಕಂಡ ಅನೇಕರು, ಆರತಕ್ಷತೆಯ ಸಮಾರಂಭದ ಬಳಿಕ ತಾವೂ ರಕ್ತದಾನ ಮಾಡಿ ಸಾರ್ಥಕಭಾವ ಕಂಡುಕೊಂಡರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕಮ್ಮರಚೇಡು ಮಠದ ಶ್ರೀಕಲ್ಯಾಣಸ್ವಾಮಿ ದೇವಣ್ಣ ಕುಟುಂಬ ಸದಸ್ಯರ ಸೇವಾ ಕಾರ್ಯ ಶ್ಲಾಘಿಸಿದರು.

Follow Us:
Download App:
  • android
  • ios