ಯುವಕರು ಪ್ರಜ್ಞಾಪ್ರಭುತ್ವದಲ್ಲಿ ನಂಬಿಕೆ ಬೆಳೆಸಿಕೊಂಡು ಹಕ್ಕು ಚಲಾಯಿಸಬೇಕು: ಅಣ್ಣಾಮಲೈ

ಬೆಂಗಳೂರು, ಬಾಂಬೆ, ಚೆನೈನಂತಹ ಮಹಾನಗರಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಯುವಕರು ತಮ್ಮ ಒಂದು ಮತದಿಂದ ಏನಾಗುತ್ತದೆ ಎಂಬ ಭಾವನೆಯೊಂದಿಗೆ ಮತವನ್ನು ಚಲಾಯಿಸುತ್ತಿಲ್ಲ.  ಇದನ್ನು ದೂರ ಮಾಡಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಉಡುಪಿಯಲ್ಲಿ ಹೇಳಿದ್ದಾರೆ, 

Youth must to strengthen democracy says Annamalai gow

ಉಡುಪಿ (ಮಾ.29): ಪ್ರಸ್ತುತ ಭಾರತ ದೇಶದಲ್ಲಿ 67% ಯುವಕರಿದ್ದಾರೆ. ಈ ಯುವಕರಲ್ಲಿ ಹೆಚ್ಚಿನವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ. ಅವರಲ್ಲಿ ಪ್ರಜಾಪ್ರಭುತ್ವದ ಬಗೆಗೆ ಜ್ಞಾನವನ್ನು ವೃದ್ದಿಸಿ, ಮುಂದಿನ ಪೀಳಿಗೆಗೆ ಉತ್ತಮ ನಾಯಕರಾಗಿ ರೂಪುಗೊಳಿಸಲು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅಭಿಪ್ರಾಯಪಟ್ಟರು. ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ನಡೆದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸ್ವಾತಂತ್ರ್ಯ ನಂತರದಲ್ಲಿ ಸಂಯುಕ್ತ ಭಾರತ ವಿಷಯದ ಕುರಿತಾಗಿ ಸಂವಾದ ನಡೆಸಿದರು. 

ಬೆಂಗಳೂರು, ಬಾಂಬೆ, ಚೆನೈನಂತಹ ಮಹಾನಗರಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಯುವಕರು ತಮ್ಮ ಒಂದು ಮತದಿಂದ ಏನಾಗುತ್ತದೆ ಎಂಬ ಭಾವನೆಯೊಂದಿಗೆ ಮತವನ್ನು ಚಲಾಯಿಸುತ್ತಿಲ್ಲ. ಈ ಭಾವನೆಯನ್ನು ಯುವಕರು ದೂರ ಮಾಡಬೇಕು. ಪ್ರಜ್ಞಾಪ್ರಭುತ್ವದಲ್ಲಿ ನಂಬಿಕೆಯನ್ನು ಬೆಳೆಸಿಕೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವದ ಮೇಲೆ ಯುವಜನಾಂಗದ ಒಂದು ವರ್ಗಕ್ಕಿರುವ ಸಿಟ್ಟನ್ನು ದೂರ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಭಾರತದ ರಾಜಕಾರಣದಲ್ಲಿ ರಾಜಕೀಯ ನಾಯಕರಿಗೆ ಜನನ ದಿನಾಂಕ ಇದೆ. ಆದರೆ ಮರಣ ದಿನಾಂಕ ಇಲ್ಲ. ಇಳಿ ವಯಸ್ಸಿನಲ್ಲಿಯೂ ತಾನು ಯುವಕನೆಂದು ಹೇಳುತ್ತಾ ಅಧಿಕಾರಕ್ಕೆ ಆಸೆ ಪಡುತ್ತಾರೆ. ಇದರಿಂದಾಗಿ ಎರಡನೇ ಪೀಳಿಗೆಯ ನಾಯಕತ್ವಕ್ಕೆ ಅವಕಾಶ ಸಿಗುತ್ತಿಲ್ಲ ಎಂದವರು ಹೇಳಿದರು. 

ಇಂದಿನ ಪೀಳಿಗೆಯ ಮಕ್ಕಳಿಗೆ ಜೀವನದ ಅನುಭವವನ್ನು ಪಡೆಯಲು ಸಮಾಜ ಅವಕಾಶವನ್ನು ನೀಡುತ್ತಿಲ್ಲ. ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಇಂದಿನ ಮಕ್ಕಳು ಸಂಪೂರ್ಣವಾಗಿ ವೀಕ್ಷಸಿದರೇ, ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ದುಃಖ ಅರಿವಾಗುತ್ತದೆ. ಹಾಗೆಯೇ ಮಗು ಹುಟ್ಟಿದಾಗ, ಕುಟುಂಬದ ಸಂಭ್ರಮವನ್ನು ನೋಡಿದರೇ ಜೀವನದಲ್ಲಿ ಹುಟ್ಟು ಮತ್ತು ಸಾವಿನ ಮೌಲ್ಯದ ಅರಿವಾಗುತ್ತದೆ ಎಂದರು.

ಯುವ ಜನಾಂಗಕ್ಕೆ ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳಲು ಸಮಾಜ ಅವಕಾಶವನ್ನು ಒದಗಿಸಿಕೊಡಬೇಕು. ಉತ್ತಮ ಅಂಕವೊಂದೇ ನೆಮ್ಮದಿಯ ಜೀವನಕ್ಕೆ ಮಾನದಂಡ ಅಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಸೋಲನ್ನು ಅನುಭವಿಸಿದ ನಂತರವೇ ಗೆಲುವಿನ ಮೌಲ್ಯ ತಿಳಿಯಬಹುದು ಎಂದರು. 

ಸೋಶಿಯಲ್ ಮೀಡಿಯಾ ಇನ್ ಫ್ಲೆನ್ಸರ್ ಗಳಿಂದ ಪ್ರಭಾವಿತರಾಗದೇ ತಮ್ಮ ತನವನ್ನು ಕಟ್ಟಿಕೊಳ್ಳಬೇಕು. ಸಂತೋಷ ಮತ್ತು ದುಃಖ ಎರಡಕ್ಕೂ ಡ್ರಗ್ಸ್ ಪಾರ್ಟಿ, ರೇವ್ ಪಾರ್ಟಿ ನಡೆಸಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಡ್ರಗ್ಸ್ ಮುಕ್ತ ದೇಶವನ್ನು ಮಾಡಲು ನಾವೆಲ್ಲಾ ಪಣತೊಡೋಣ ಎಂದು ಕರೆ ನೀಡಿದರು. 

2014 ರಿಂದ ಭಾರತದ ಜಗತ್ತಿನ ಬಲಾಡ್ಯ ದೇಶಗಳೊಂದಿಗೆ ಉತ್ತಮ ಬಾಂಧವ್ಯದ ಜೊತೆಗೆ ಶಕ್ತಿಶಾಲಿಯಾಗಿದೆ. 2023 ರಲ್ಲಿ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಏಕಕಾಲಕ್ಕೆ ಯುದ್ದ ಮಾಡಲು ಸಕ್ಷಮವಾಗಿದೆ. ಕಳೆದ 9 ವರ್ಷದಲ್ಲಿ ದೇಶದೊಳಗೆ ಆಂತರಿಕ ಭದ್ರತೆ ಸಧೃಡವಾಗಿದ್ದು, ಈಶಾನ್ಯ ಭಾರತ ಮತ್ತು ಮಧ್ಯ ಭಾರತದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಕಾಶ್ಮೀರಕ್ಕೆ 1 ಕೋಟಿ ಜನರು ಪ್ರವಾಸಕ್ಕೆಂದು ಭೇಟಿ ನೀಡಿದ್ದಾರೆ. ಇದು 370 ರದ್ದಾದ ನಂತರದ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಬಳ್ಳಾರಿ ಪಾಲಿಕೆಗೆ 23 ವರ್ಷದ ಯುವತಿ ಮೇಯರ್‌: ರಾಜ್ಯದ ಕಿರಿಯ ಮೇಯರ್‌ ಹೆಗ್ಗಳಿಕೆ

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ 8,000 ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ನೀಡಲಾಗಿದ್ದು, ಭಾರತದ ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ಸೌಲಭ್ಯ ದೊರಕಿದೆ. 11 ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. 2014 ರಲ್ಲಿ 64% ಇದ್ದ ಎಲ್.ಪಿ.ಜಿ ಸಂಪರ್ಕವು 2023 ರಲ್ಲಿ 99.98% ಕ್ಕೆ ಏರಿದೆ, 46 ಕೋಟಿ ಮಹಿಳೆಯರು ಬ್ಯಾಂಕ್ ಖಾತೆ ತೆರೆದಿರುವುದು ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಎಂದು ನುಡಿದರು.

SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, ಈ ಬಾರಿಯೂ 10 % ಗ್ರೇಸ್ ಮಾರ್ಕ್ಸ್! ಯಾವೆಲ್ಲ ವಿಷಯಕ್ಕೆ ಸಿಗಲಿದೆ?

ಪಿಪಿಸಿ ಆಡಳಿತ ಮಂಡಳಿ ಸದಸ್ಯ ಕರುಣಾಕರ್ ಸಂವಾದ ನಿರೂಪಿಸಿದರು. ಕ್ಯಾ| ಬ್ರಿಜೇಶ್ ಚೌಟ ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಶ್ರೀರಕ್ಷಾ ಹೆಗಡೆ ಪ್ರಾರ್ಥಿಸಿದರು. ದಾಮೋದರ ಶರ್ಮ ಅತಿಥಿಯನ್ನು ಪರಿಚಯಿಸಿ, ವೇದಿಕೆ ಕಾರ್ಯಕ್ರಮ ನಿರೂಪಿಸಿದರು.

Latest Videos
Follow Us:
Download App:
  • android
  • ios