ಹೈದರಾಬಾದ್[ಡಿ.02]: ಹೈದರಾಬಾದ್ ಪಶುವೈದ್ಯೆಯ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ  ಪ್ರಕರಣವನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆದಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕೂಗು ಕೇಳಿ ಬರುತ್ತಿದೆ. ಹೀಗಿರುವಾಗ ಈ ಪ್ರಕರಣ ಸಂಭಂಧ ದಿನೇ ದಿನೇ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಸದ್ಯ ಪೊಲೀಸರು ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ವೈದ್ಯೆಯ ಸತ್ತ ಬಳಿಕವೂ ಆರೋಪಿಗಳು ಆಕೆಯನ್ನು ರೇಪ್ ಮಾಡಿದ್ದರೆಂಬ ಆಘಾತಕಾರಿ ವಿಚಾರ ಬಯಲಾಗಿದೆ.

ಈಗಾಗಲೇ ವೈದ್ಯೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ನಾಲ್ವರು ಆರೋಪಿಗಳು ಸೇರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ವಿಸ್ಕಿ ಕುಡಿಸಿ ಆಕೆಗೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ನಡೆಸಿದ್ದರೆಂಬ ವಿಚಾರ ಬಹಿರಂಗಗೊಂಡಿತ್ತು. ಆದರೀಗ ಈ ದುರುಳರು ವೈದ್ಯೆಯನ್ನು ಸಾಯಿಸಿದ ಬಳಿಕ, ಆಕೆಯ ಮೃತದೇಹವನ್ನು ಲಾರಿಯೊಳಗೆಸೆದು ಅತ್ಯಾಚಾರ ಮುಂದುವರೆಸಿದ್ದರು ಎನ್ನಲಾಗಿದೆ.

ಮನುಷ್ಯ ರೂಪದ ರಾಕ್ಷಸರಿದ್ದಾರೆ: ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ರೇಪ್ ವಿಡಿಯೋ ಹುಡುತ್ತಿದ್ದಾರೆ!

ಬಳಿಕ ಈ ನಾಲ್ವರೂ ಅಲ್ಲಿಂದ ಹೊರಡಲು ಸಿದ್ದರಾಗಿದ್ದರು. ಆದರೆ ಅಷ್ಟರಲ್ಲೇ ಒಬ್ಬಾತ ತಾವು ಕೆಳಗೆಸೆದಿದ್ದ ವೈದ್ಯೆಯ ಬಟ್ಟೆಯನ್ನು ತಂದಿದ್ದ. ಬಳಿಕ ಶಾದ್ ನಗರ್ ಕಡೆ ಪ್ರಯಾಣ ಬೆಳೆಸಿದ್ದ ಆರೋಪಿಗಳು ವೈದ್ಯೆಯ ಮೃತದೇಹವನ್ನೆಸೆಯಲು ನಿರ್ಜನ ಹಾಗೂ ಕತ್ತಲಿನ ಪ್ರದೇಶವನ್ನು ಹುಡುಕಲಾರಂಭಿಸಿದರು.  

ಚಟ್ನನ್ ಪಳ್ಳಿ ತಲುಪುತ್ತಿದ್ದಂತೆಯೇ ಪೊಲೀಸರು ಗುರುತು ಹಿಡಿಯಬಾರದೆಂದು ಆರೋಪಿಗಳು ವೈದ್ಯೆಯ ದೇಹವನ್ನು ಸುಡಲು ನಿರ್ಧರಿಸಿದ್ದಾರೆ. ಹೀಗಾಗಿ ಹೊದಿಕೆಯೊಂದರಲ್ಲಿ ಮೃತದೇಹವನ್ನು ಸುತ್ತಿ, ಆ ನಿರ್ಜನ ಪ್ರದೇಶದಲ್ಲಿ ಸುಟ್ಟು ಪರಾರಿಯಾಗಿದ್ದಾರೆ.

ಆದರೆ ಪ್ರಕರಣದ ಜಾಡು ಹಿಡಿದ ಪೊಲೀಸರು ಮೃತದೇಹದ ಗುರುತು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದೆದುರು ಹಾಜರುಪಡಿಸಿದ್ದಾರೆ.

ಕಾಗೆಗಳ ಶವ ಸಂಭೋಗ: ಇದೆಂಥಾ ವಿಚಿತ್ರ ನಡವಳಿಕೆಗಳ ಪ್ರಯೋಗ?