ಸಿಟ್ಟಿಗೆದ್ದ ಮಾವ ತಂಗಿಯ ಪುಟ್ಟ ಮಗಳನ್ನೇ ಇರಿದು ಕೊಂದ

ಸಿಟ್ಟಿಗೆದ್ದ ಸೋದರ ಮಾವ ತನ್ನ ಸ್ವಂತ ತಂಗಿಯ ಮಗಳನ್ನೇ ಇರಿದು ಕೊಂಡಿದ ಭೀಕರ ಘಟನೆ ನಡೆದಿದೆ. ಜಗಳದ ಸಿಟ್ಟಿಗೆ ಪುಟ್ಟ ಬಾಲಕಿ ಬಲಿಯಾಗಿದ್ದಾಳೆ. 

Youth killed his sister Daughter in Shivamogga

ಶಿವಮೊಗ್ಗ [ಡಿ.15]: ಮಾನಸಿಕ ಅಸ್ವಸ್ತನಾದ ಯುವಕನೋರ್ವನ ಸಿಟ್ಟಿಗೆ ಐದು ವರ್ಷದ ಬಾಲಕಿ ಬಲಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ ಜಿಲ್ಲೆ ಗಾಡಿಕೊಪ್ಪದಲ್ಲಿ ಮಾನಸಿಕ ಅಸ್ವಸ್ತ ಯುವಕ ಸಂತೋಷ್ [23] ಎಂಬಾತ ತನ್ನ ತಂದೆ ಜಯಣ್ಣರೊಂದಿಗೆ ಜಗಳವಾಡಿದ್ದಾರೆ. ಈ ಜಗಳ ವಿಕೋಪಕ್ಕೆ ಹೋಗಿದ್ದು, ಈತನ ತಂಗಿ ಮಗಳಾದ ರಜನಿಗೆ [5] ಚಾಕುವಿನಿಂದ ಇರಿದಿದ್ದಾರೆ. 

ಚಾಕು ಇರಿತದಿಂದ ಬಾಕಲಿ ರಜನಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. 

ಬಸ್ ಸ್ಟಾಪ್ ನಿಂದ ಮನೆಗೆ ಡ್ರಾಪ್ : ಮಹಿಳೆಯರಿಗೆ ಪೊಲೀಸರಿಂದ ಹೊಸ ಸೇವೆ !

ಸಂತೋಷ್ ಹಲವು ಸಮಯದಿಂದ ಮಾನಸಿಕ ಅಸ್ವಸ್ತತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಿದ್ದರೂ ಕೂಡ ಫಲಕಾರಿಯಾಗಿರಲಿಲ್ಲ. 

ಸದ್ಯ ಈ ಸಂಬಂಧ ಇಲ್ಲಿನ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios