ಶಿವಮೊಗ್ಗ [ಡಿ.11): ರಾತ್ರಿ ವೇಳೆ ತಾವು ತಲುಪಬೇಕಾದ ಸ್ಥಳವನ್ನು ನಿಗದಿತ ವೇಳೆಯಲ್ಲಿ ತಲುಪಲು ಸಾಧ್ಯವಾಗದೆ ಬಸ್, ರೈಲ್ವೆ ನಿಲ್ದಾಣದಲ್ಲಿ ಸಿಲುಕಿಕೊಂಡ ಮಹಿಳೆಯರ ನೆರವಿಗೆ ಶಿವಮೊಗ್ಗ ಪೊಲೀಸ್ ಧಾವಿಸಲಿದೆ. ಇಂತಹ ಮಹಿಳೆಯರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ನೆರವು ನೀಡಲಿದೆ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ದೂರದ ಸ್ಥಳದಿಂದ ಪ್ರಯಾಣ ಮಾಡಿ ಜಿಲ್ಲೆಯ ಯಾವುದೇ ಬಸ್ ನಿಲ್ದಾಣ ತಲುಪಿದ ಮಹಿಳೆಯರು ಬಳಿಕ ನಿಗದಿತ ಸ್ಥಳಕ್ಕೆ ಹೋಗಲು ಸಾಧ್ಯವಾಗದೆ ಕಾಯುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಸಂಶಯ ಮತ್ತು ಕೊರತೆ ಕಂಡು ಬಂದಲ್ಲಿ, ಸಾರ್ವಜನಿಕ ವಾಹನಗಳಲ್ಲಿ ಹೋಗಲು ಅನುಮಾನ ಎದುರಾದಲ್ಲಿ ಪೊಲೀಸ್ ಇಲಾಖೆಯ ದೂರವಾಣಿ ಸಂಖ್ಯೆ 9480803300 ಮತ್ತು ಸಹಾಯವಾಣಿ 112 ಕರೆ ಮಾಡಿದರೆ, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಂತಹ ಮಹಿಳೆಯರನ್ನು ಆಟೋ ಅಥವಾ ಸಾರ್ವಜನಿಕ ವಾಹನದ ಮೂಲಕ ಅವರ ಮನೆಗೆ ತಲುಪಿಸಲು ನೆರವು ನೀಡಲಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಟೋ ಇನ್ನಿತರ ವಾಹನಗಳ ಸಂಖ್ಯೆ ಯನ್ನು ಪಡೆದುಕೊಂಡು ಸುರಕ್ಷತೆ ಖಾತ್ರಿ ಪಡಿಸಿಕೊಂಡು ಕಳುಹಿಸಿಕೊಡಲಿದ್ದಾರೆ. ಮನೆ ತಲುಪಿದ ಮೇಲೆ ಮಹಿಳೆಯರು ಪೊಲೀಸ್ ಇಲಾಖೆ ನೀಡಿದ ಸಂಖ್ಯೆಗೆ ಕರೆ ಮಾಡಿ ತಾವು ಸುರಕ್ಷಿತವಾಗಿ ತಲುಪಿದ ಕುರಿತು ಮಾಹಿತಿ ನೀಡಬೇಕಾಗುತ್ತದೆ.