ಕೊಡಗು(ಏ.09): ಕೊಡಗು ಜಿಲ್ಲೆ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಯುವಕನೋರ್ವ ದುರ್ಮರಣವನ್ನಪ್ಪಿದ್ದು, ಆ ಸಾವಿನ ಸುದ್ದಿ ಕೇಳಿ ಇತ್ತ ಆತನ ಅಜ್ಜಿಯೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಕೊಡಗು ಜಿಲ್ಲೆಯ ಐಗೂರಿನ ರಮ್ಲಾನ್ ಎಂಬುವವರ ಪುತ್ರ  ಮುಬಾಸಿರ್ (18) ಹೊಸತೋಟ ಸಮೀಪದ ಹಾರಂಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಗುರುವಾರ (ಏ.08)  ಸ್ನೇಹಿತರ ಜೊತೆ ಈಜಲು ತೆರಳಿದ್ದ ಮುಬಾಸಿರ್ ಮೃತದೇಹ  ಇಂದು ಮುಂಜಾನೆ ಪತ್ತೆಯಾಗಿದೆ.   

ಒಂಟಿ ಮನೆಯ ಬಾತ್ ರೂಂ ನಲ್ಲಿ ವೃದ್ಧೆಯ ಹೆಣ.. ಸಾಲ ಮತ್ತು ಕೊರೋನಾ! ..

ಇತ್ತ ಮೊಮ್ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಅಜ್ಜಿ ರುಖಿಯಾ (62) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಎರೆಡೆರಡು ಆಘಾತ ಕುಟುಂಬದ ಮೇಲೆರಗಿದೆ.

ಕೊಡಗು ಜಿಲ್ಲೆ  ಸುಂಟಿಕೊಪ್ಪ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.