ಬೆಂಗಳೂರು(ಫೆ.16): ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ಯುವಕನೊಬ್ಬನಿಂದ .11.50 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪರಪ್ಪನ ಅಗ್ರಹಾರ ನಿವಾಸಿ ಉಲ್ಲಾಸ್‌ ಎಂಬುವವರು ವಂಚನೆಗೆ ಒಳಗಾಗಿದ್ದು, ಅವರು ಕೊಟ್ಟದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಚೇತನ್‌ರಾಮ್‌ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಆರೋಪಿ ಚೇತನ್‌ರಾಮ್‌ ಆರು ತಿಂಗಳ ಹಿಂದೆ ಉಲ್ಲಾಸ್‌ಗೆ ಪರಿಚಯವಾಗಿದ್ದ. ಅಮೆರಿಕದ ಪ್ರತಿಷ್ಠಿತ ಕಂಪನಿಯಲ್ಲಿ ಹೆಚ್ಚು ವೇತನ ಬರುವ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ ಉಲ್ಲಾಸ್‌ನ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದ. ಬಳಿಕ ಕರೆ ಮಾಡಿ ಉಲ್ಲಾಸ್‌ನನ್ನು ಸಂಪರ್ಕ ಮಾಡಿದ್ದ ಆರೋಪಿ ತನ್ನ ಬಯೋಡೆಟಾ ಕಳುಹಿಸುವಂತೆ ಹೇಳಿದ್ದ.

ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.. ಭೀಮಾತೀರದ ನಿಗೂಢ ಕೊಲೆ ರಹಸ್ಯ!

ನಂತರ ಚೇತನ್‌ರಾಮ್‌ ಕಂಪನಿಗಳ ಹೆಸರಿನಲ್ಲಿ ಯುವಕನಿಗೆ ನಂಬಿಕೆ ಬರುವಂತೆ ಆರೋಪಿ ಇ-ಮೇಲ್‌ ಕಳುಹಿಸಿದ್ದ. ಇದನ್ನು ಉಲ್ಲಾಸ್‌ ನಿಜವೆಂದು ಭಾವಿಸಿ, ಆರೋಪಿ ಬಳಿ ಮಾತನಾಡಿದ್ದ. ಈ ವೇಳೆ ಆರೋಪಿ ಕೆಲಸ ಕೊಡಿಸಲು ಇಂತಿಷ್ಟುಹಣ ವ್ಯಯಿಸಬೇಕಾಗುತ್ತದೆ. ಹಣ ಕೊಡಲು ಒಪ್ಪಿದರೆ ಸಂಸ್ಥೆಯ ಮುಖ್ಯಸ್ಥರ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದ.

ಮೊದಲ ಹಂತದಲ್ಲಿ ವೀಸಾ ಪಡೆಯಲು ಅರ್ಜಿ ಸಲ್ಲಿಸಿದ್ದು, ಪೂರ್ವಾಪರ ಪರಿಶೀಲನೆ ದೆಹಲಿಯಲ್ಲಿ ನಡೆಯಲಿದೆ, ಹಾಗಾಗಿ ದೆಹಲಿಗೆ ಹೋಗಬೇಕು ಎಂದು .1.50 ಲಕ್ಷ ಪಡೆದಿದ್ದ. ಕೆಲ ದಿನಗಳ ನಂತರ ಕರೆ ಮಾಡಿ ಅಮೆರಿಕದಲ್ಲಿ ಕೆಲಸ ಖಚಿತವಾಗಿದೆ ಎಂದಿದ್ದ. ಖುದ್ದಾಗಿ ಯುವಕನನ್ನು ಭೇಟಿ ಮಾಡಿದ್ದ ಚೇತನ್‌ರಾಮ್‌, ಮುಂದಿನ ತಿಂಗಳು ಅಲ್ಲಿಗೆ ಹೋಗಬೇಕಾಗಬಹುದು.

ಹೆಚ್ಚಿದ ಸೈಬರ್ ಕ್ರೈಂ: ಸ್ವಲ್ಪ ಎಚ್ಚರ ತಪ್ಪಿದ್ರೂ ಪಂಗನಾಮ..! ಹುಷಾರ್

ಸಿದ್ಧತೆ ಮಾಡಿಕೊಳ್ಳುವಂತೆ ಯುವಕನಿಗೆ ತಿಳಿಸಿದ್ದ. ಈ ವೇಳೆ ಯುವಕನಿಂದ ಕ್ರೆಡಿಟ್‌ ಕಾರ್ಡ್‌ ಪಡೆದುಕೊಂಡು ಹೋಗಿದ್ದ. ಕೆಲ ದಿನಗಳ ನಂತರ .10 ಲಕ್ಷ ಡ್ರಾ ಮಾಡಿಕೊಂಡಿದ್ದಾನೆ. ಈ ಕುರಿತು ವಿಚಾರಿಸಲು ಮುಂದಾದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ವಂಚನೆಯಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.