ಆಲಮೇಲ[ಸೆ.14]: ಭೀಮಾ ನದಿ ಪ್ರವಾಹದ ನೀರಲ್ಲಿ ಯುವಕನೊಬ್ಬ ತನ್ನ ಬೈಕ್ ಅನ್ನು ಹೊತ್ತು ಸಾಗಿರುವ ಘಟನೆ ವಿಜಯಪುರ ಜಿಲ್ಲೆಯ ಅಲಮೇಲದಲ್ಲಿ ಶುಕ್ರವಾರ ನಡೆದಿದೆ.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬುಧವಾರ ಸಂಜೆ 28 ಸಾವಿರ ಕ್ಯು. ನೀರನ್ನು ನದಿಗೆ ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಶುಕ್ರವಾರ ಸಂಪೂರ್ಣ ಜಲಾವೃತವಾಗಿ ಸಂಪರ್ಕ ಕಳೆದುಕೊಂಡಿದೆ.

ಕಪ್ಪೆಗಳ ಭಾವನೆ ಕಸಿದ ಮೂಢನಂಬಿಕೆ: ಮದುವೆಯಾದ 2 ತಿಂಗಳಿಗೇ ವಿಚ್ಚೇದನ ಮಾಡ್ಸಿದ್ರು!

ಶುಕ್ರವಾರ ನಸುಕಿನ ಜಾವದಲ್ಲಿ ತಾರಾಪುರ ಗ್ರಾಮದ ಸೇತುವೆ ಮೇಲೆ ನೀರು ನಿಂತಿದ್ದ ಪ್ರಮಾಣ ಏಕಾಏಕಿಯಾಗಿ ಹೆಚ್ಚಾಗಿತ್ತು. ಈ ವೇಳೆ ತಾರಾಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಅನ್ನು ತಲೆ ಮೇಲೆ ಹೊತ್ತು ಪ್ರವಾಹ ನೀರು ದಾಟಿದ ವಿಡಿಯೋವೊಂದು ಈಗ ವೈರಲ್ ಆಗಿದೆ.