Asianet Suvarna News Asianet Suvarna News

ಧ್ವಜದ ಮಧ್ಯೆ ಜೀಸೆಸ್ ಸ್ಟಿಕ್ಕರ್, ಹಿಂದೂ ಪರ ಕಾರ್ಯಕರ್ತರಿಂದ ಆಕ್ರೋಶ

ಏನೋ ಮಾಡಲು ಹೋಗಿ ಇನ್ನೇನು ಮಾಡಿದ್ರು, ಅನ್ನೋ ಹಾಗೇ ಮನೆಯ ಮೇಲೆ ಧ್ವಜ ಹಾರಿಸೋ ಭರದಲ್ಲಿ ಧ್ವಜದ ಮಧ್ಯೆ  ಜೀಸಸ್ ಎನ್ನುವ ಸ್ಟಿಕ್ಕರ ಅಂಟಿಸೋ ಮೂಲಕ ಯುವಕನೊಬ್ಬ ಎಡವಟ್ಟು ಮಾಡಿಕೊಂಡಿದ್ದಾನೆ.

Youth arrested in ballari  who hoists tricolor with Jesus  sticker replacing  Ashok Chakra gow
Author
Bengaluru, First Published Aug 14, 2022, 2:57 PM IST

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಆ.14): ಆತ ಅಮಾಯಕನೋ ಅಥವಾ ತಿಳಿದು ತಿಳಿದು ಈ ಕೆಲಸ ಮಾಡಿದನೋ ಗೊತ್ತಿಲ್ಲ. ಆದ್ರೇ ಆತ ಮಾಡಿರೋದು ಮಾತ್ರ ಧ್ವಜಕ್ಕೆ ಅವಮಾನ. ಏನೋ ಮಾಡಲು ಹೋಗಿ ಇನ್ನೇನು ಮಾಡಿದ್ರು, ಅನ್ನೋ ಹಾಗೇ ಮನೆಯ ಮೇಲೆ ಧ್ವಜ ಹಾರಿಸೋ ಭರದಲ್ಲಿ ಧ್ವಜದ ಮಧ್ಯೆ  ಜೀಸಸ್ ಎನ್ನುವ ಸ್ಟಿಕ್ಕರ ಅಂಟಿಸೋ ಮೂಲಕ ಎಡವಟ್ಟು ಮಾಡಿಕೊಂಡಿ ದ್ದಾನೆ. ವಿಚಾರ  ತಿಳಿಯುತ್ತಿದ್ದಮತೆ ಹಿಂದು ಕಾರ್ಯಕರ್ತರು ಆರೋಪಿ ಮನೆಯ ಮುಂದೆ ಪ್ರತಿಭಟನೆ ಮಾಡಲು ಮುಂದಾದಾಗ ಬಳ್ಳಾರಿಯ ಗಾಂಧಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಮನೆ ಮನೆಯ ಮೇಲೆ ಧ್ವಜಾರೋಹಣ ಮಾಡಲು ಕೇಂದ್ರ ಸರ್ಕಾರ  ಆದೇಶ ಮಾಡಿದೆ. ಆ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿಯೂ ಎರಡುವರೆ ಲಕ್ಷ ಮನೆಯ ಮೇಲೆ ಧ್ವಜ ಹಾರಿಸೋ ನಿಟ್ಟಿನಲ್ಲಿ ಜಿಲ್ಲಾಡಳಿತ  ಮೂರು ದಿನಗಳ ಕಾಲ ಅಲ್ಲಲ್ಲಿ ಅದ್ಭುತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಂತೆ ಬಳ್ಳಾರಿಯ ಬಹುತೇಕ ಮನೆಗಳ ಮೇಲೆ  ಕಳೆದ ಮೂರು ದಿನಗಳಿಂದ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದೆ. ಆದ್ರೇ, ಬಳ್ಳಾರಿ ನಗರದ ಹೃದಯ ಭಾಗದಲ್ಲಿರೋ ಗಣೇಶ್ ಕಾಲೋನಿ ಮನೆಯ ಮಾಲೀಕರಾದ ರಘು ಎನ್ನುವವರು ಧ್ವಜ ಹಾರಿಸೋ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾನೆ. 

ಕಳೆದೆರೆಡು ದಿನಗಳಿಂದ ರಘು ತಮ್ಮ ಮನೆಯ ಮೇಲೆ ಧ್ವಜವೊಂದು ಹಾರಾಡುತ್ತಿದೆ. ಆದ್ರೇ, ಧ್ವಜದ ಮಧ್ಯೆ ಬಿಳಿ ಬಣ್ಣದ ಮೆಲೆ ಜೀಸೆಸ್ ಎನ್ನುವ ಸ್ಟಿಕ್ಕರ್ ಅಂಟಿಸಲಾಗಿತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ರಾಷ್ಟಧ್ವಜಕ್ಕೆ ಮಾಡಿದ ಅವಮಾನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ರು.

ಎಚ್ಚತ್ತುಕೊಂಡ ಪೊಲೀಸರಿಂದ ಕೂಡಲೇ ಸ್ಟಿಕ್ಕರ ತೆರವು:  ಇನ್ನೂ ವಿಷಯ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಗಾಂಧಿನಗರ ಪೊಲೀಸರು ಮೊದಲಿಗೆ ರಘು ಅವರಿಂದಲೇ ಧ್ವಜದ ಮೇಲಿರೋ ಸ್ಟಿಕ್ಕರ್ ತೆಗೆಸಿದ್ರು. ಸ್ಥಳದಲ್ಲಿಯೇ ಹಿಗ್ಗಾಮಗ್ಗ ತರಾಟೆ ತೆಗೆದು ಕೊಳ್ಳುವ ಮೂಲಕ ರಘು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.  ಧ್ವಜದ ಮೇಲೆ ಈ ರೀತಿ ಬರೆಯಬಾರದೆಂದು ಕನಿಷ್ಠ ಜ್ಞಾನ ನಿಮಗಿಲ್ಲವೇ ಎಂದು ಬೈದರು. ಆದ್ರೇ, ಇದರ ಬಗ್ಗೆ ನನಗೇನು ಗೊತ್ತಿಲ್ಲ ಮಕ್ಕಳು ಸ್ಟಿಕ್ಕರ್ ಅಂಟಿಸಿರಬಹು ದೆಂದು ಆರೋಪಿ ರಘು ಸಮಜಾಯಿಷಿ ನೀಡಲು ಮುಂದಾದ್ರು. ಆದ್ರೇ, ಇದ್ಯಾವುದಕ್ಕೂ ಜಗ್ಗದ ಹಿಂದೂ ಪರ ಕಾರ್ಯಕರ್ತರು ಕೂಡಲೇ ರಘು ಅವರನ್ನು ಬಂಧಿಸಿವಂತೆ  ಒತ್ತಾಯಿಸಿದ್ರು.  

ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ತಾಯಿ ಬೆಂಬಲ: ಮಕ್ಕಳಿಗೆ ರಾಷ್ಟ್ರಧ್ವಜ ಹಂಚಿದ ಶತಾಯುಷಿ

ಆಕ್ರೋಶ ಹೆಚ್ಚಾಗುತ್ತಿದ್ಧಂತೆ ಕೂಡಲೇ ವಶಕ್ಕೆ ಪಡೆದ ಪೊಲೀಸರು: ಇನ್ನೂ ಧ್ವಜವನ್ನೇನು ತೆರವು ಮಾಡಿದ್ದಾರೆ. ಆದ್ರೇ, ಇದೆಲ್ಲವೂ ತಿಳಿದು ಮಾಡಿದ್ದಾರೆ. ಬೇಕು ಅಂತಲೇ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇಂತಾಹವರಿಗೆ ಶಿಕ್ಷೆಯಾಗಬೇಕೆಂದು ಹಿಂದು ಪರ ಸಂಘಟನೆ ಮುಖಂಡ ಆಶೋಕ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನೂ ವಿಷಯ ವಿಕೋಪಕ್ಕೆ ಹೋಗಿ ಮತ್ತೊಂದು  ವಿವಾದ ಆಗೋದನ್ನು ತಡೆದ ಪೊಲೀಸರು ಕೂಡಲೇ ರಘೂ ಅವರನ್ನು ವಶಕ್ಕೆ ಪಡೆದ್ರು. ವಿಚಾರಣೆ ವೇಳೆಯೂ ಕೂಡ ರಘು ನನ್ನದೇನು ತಪ್ಪಿಲ್ಲ ಗೊತ್ತಿಲ್ಲದೇ ನಡೆದಿದೆ ಎಂದು ಸಮಜಾಯಿಷಿ ನೀಡಿದ್ದಾನೆ ಎನ್ನಲಾಗುತ್ತಿದೆ.

ಕಲ್ಯಾಣ ನಾಡಿನಲ್ಲಿ ಕಣ್ಮನ ಸೆಳೆಯುತಿದೆ ಬೃಹತ್ ರಾಷ್ಟ್ರ ಧ್ವಜ, ರೈತನ ರಾಷ್ಟ್ರಭಕ್ತಿಗೆ ಸಾರ್ವಜನಿಕರ ಸಲಾಂ..!

 ಅದೇನೆ ಇರಲಿ ರಾಷ್ಟ್ರಧ್ವಜಕ್ಕೆ ಈ ರೀತಿ   ಅವಮಾನ ಮಾಡೋ ಮೂಲಕ ಒಂದು ಸಮುದಾದಯ ಸ್ಟಿಕ್ಕರ್ ಅಂಟಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅಲ್ಲದೇ ಒಮ್ಮೆ ಈ ರೀತಿ ಮಾಡಿದವರಿಗೆ ಶಿಕ್ಷೆಯನ್ನು ಕೊಡದೇ ಇದ್ರೇ ಮತ್ತೆ ಮತ್ತೆ ಈ ರೀತಿಯ ತಪ್ಪುಗಳು ನಡೆಯುತ್ತವೆ ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದು ಹಿಂದೂ ಪರ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

Follow Us:
Download App:
  • android
  • ios