ಬೆಂಗಳೂರು [ಜ.25]: ನಕಲಿ ದಾಖಲೆ ನೀಡಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಕಾನ್‌ಸ್ಟೇಬಲ್‌ ಹುದ್ದೆ ಪಡೆಯಲು ಯತ್ನಿಸಿದ್ದ ಉತ್ತರ ಪ್ರದೇಶ ಮೂಲದ ಆರೋಪಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ವಿಪಿನ್‌ ಶರ್ಮಾ (21) ಬಂಧಿತ. ಪಿಯುಸಿ ವ್ಯಾಸಂಗ ಮಾಡಿರುವ ಆರೋಪಿ ಬಿಎಸ್‌ಎಫ್‌ನ ಕಾನ್‌ಸ್ಟೇಬಲ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಜ.22ರಂದು ಯಲಹಂಕದಲ್ಲಿರುವ ಬಿಎಸ್‌ಎಫ್‌ ಕಚೇರಿಯಲ್ಲಿ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಯುತ್ತಿತ್ತು. ಆರೋಪಿ ವಿಪಿನ್‌ ಶರ್ಮಾ, ಬಲಜೀತ್‌ ಸಿಂಗ್‌ ಎಂಬ ಹೆಸರಿನಲ್ಲಿ ನಕಲಿ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಬೆಂಗಳೂರು ತಹಸೀಲ್ದಾರ್‌ ಅವರು ನೀಡಿದ್ದ ವಾಸ ದೃಢೀಕರಣ ಪತ್ರ ಸಲ್ಲಿಸಿದ್ದ. ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬೇರೊಬ್ಬರ ಹೆಸರಿನಲ್ಲಿ ಆರೋಪಿ ದಾಖಲೆ ಪಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ವ್ಯಾಸಂಗ ಪ್ರಮಾಣ ಪತ್ರವನ್ನು ಸಹ ನಕಲಿ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.

ಮಂಗಳೂರು ಏರ್‌ಪೋರ್ಟ್‌ಗೆ ಮತ್ತೆ ಆದಿತ್ಯ, ಕೃತ್ಯವೆಸಗಿದ ಸ್ಥಳ ಮಹಜರು.

ಹುದ್ದೆ ಪಡೆಯುವ ಸಲುವಾಗಿ ನಕಲಿ ವಾಸಸ್ಥಳ ಪ್ರಮಾಣ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ವಿದ್ಯಾಭ್ಯಾಸದ ನಕಲಿ ಅಂಕಪಟ್ಟಿನೀಡಿ ಸಂದರ್ಶನಕ್ಕೆ ಹಾಜರಾಗಿದ್ದ.

ಡಿಯೋ ಬೈಕಿನ ಮೇಲೆ ಬರುವ ಜಯನಗರದ ಸರಗಳ್ಳ, ಚಾಲಾಕಿ ಮಳ್ಳ...

ತಾನು ಪಿಯುಸಿ ವ್ಯಾಸಂಗ ಮಾಡಿದ್ದು, ವಿದ್ಯಾಭ್ಯಾಸದ ಪ್ರಮಾಣ ಪತ್ರವನ್ನು ಕಳೆದುಕೊಂಡಿದ್ದೇನೆ. ಉತ್ತರ ಪ್ರದೇಶದವರೇ ಆದ ಪರಿಚಯಸ್ಥರಾದ ಮನೋಜ್‌ ಕುಮಾರ್‌ ಮತ್ತು ಜೆ.ಪಿ.ಗಿರಿ ಟ್ಟಾಪುರ್‌ ಬುಲಿಂದ್‌ ಶಹರ್‌ ಎಂಬುವರು .55 ಸಾವಿರ ಹಣ ಪಡೆದು ಈ ದಾಖಲಾತಿಗಳನ್ನು ಒದಗಿಸಿದ್ದರು. ಹೇಗಾದರೂ ಸರಿಯೇ ಹುದ್ದೆ ಪಡೆಯಬೇಕೆಂದು ಈ ರೀತಿ ನಕಲಿ ದಾಖಲೆ ಕೊಟ್ಟಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.