ಯಾದಗಿರಿ: ಕಾಲುವೆಗೆ ಬಿದ್ದ ಕುದುರೆ, ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕ
ಕುದುರೆ ಬಿದ್ದದ್ದನ್ನ ನೋಡಿ ಅಗತೀರ್ಥ ಗ್ರಾಮದ ಯುವಕ ಮೌನೇಶ ಎಂಬಾತನು ತನ್ನ ಪ್ರಾಣದ ಹಂಗು ತೊರೆದು ಕಾಲುವೆಗಿಳಿದು ಕುದುರೆಯನ್ನ ಸುರಕ್ಷಿತವಾಗಿ ದಡ ಸೇರಿಸಿದ್ದಾನೆ. ಈ ಯುವಕನ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾದಗಿರಿ(ಸೆ.05): ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದ ಕುದುರೆಯನ್ನು ಯುವಕನೊಬ್ಬ ರಕ್ಷನೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ.
ಅಗ್ನಿ ಗ್ರಾಮದ ಹೊರವಲಯದ ನಾರಾಯಣಪುರ ಡ್ಯಾಂನ ಮೇಲ್ಸೆತುವೆ ಮೇಲಿಂದ ಆಯತಪ್ಪಿ ತುಂಬಿದ ಕಾಲುವೆಗೆ ಕುದುರೆ ಬಿದ್ದಿತ್ತು.
ಆಫ್ರಿಕಾದಲ್ಲಿ ಫುಡ್ ಟೆಕ್ನಿಶಿಯನ್, ಭಾರತದಲ್ಲಿ ಉದ್ಯಮಿ: ಬಾವಬಾಬ್ ಹಣ್ಣು ಬಳಸಿ ಆರೋಗ್ಯ ವರ್ಧಕ ಉತ್ಪನ್ನ !
ಕುದುರೆ ಬಿದ್ದದ್ದನ್ನ ನೋಡಿ ಅಗತೀರ್ಥ ಗ್ರಾಮದ ಯುವಕ ಮೌನೇಶ ಎಂಬಾತನು ತನ್ನ ಪ್ರಾಣದ ಹಂಗು ತೊರೆದು ಕಾಲುವೆಗಿಳಿದು ಕುದುರೆಯನ್ನ ಸುರಕ್ಷಿತವಾಗಿ ದಡ ಸೇರಿಸಿದ್ದಾನೆ. ಈ ಯುವಕನ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.