ಮುದಗಲ್‌(ಮೇ.16): ಪಟ್ಟಣದಲ್ಲಿ ಪ್ರೀತಿಯ ವಿಚಾರವಾಗಿ ಯುವಕನನ್ನು ಹುಡುಗಿ ತಂದೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಯುವಕನ ಸೋದರ ನೀಡಿದ ದೂರಿನನ್ವಯ ಮುದಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೊಲೆಯಾದವನನ್ನು ಪಟ್ಟಣದ ಹಳೇ ಪೇಟೆಯ ನಿವಾಸಿ ಮೈಬೂಬ್‌ ಸಾಬ್‌ ಜಂಬಾಳಿ(24) ಎಂದು ಗುರುತಿಸಲಾಗಿದ್ದು, ಪರಸ್ಪರ ಪ್ರೀತಿಸಿದ್ದರಿಂದ ಹುಡುಗಿಯ ತಂದೆ ಹಾಗೂ ಯುವಕನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. 

ರಾಯಚೂರು: ಕೊರೋನಾ ಸೋಂಕಿತ ವ್ಯಕ್ತಿಗಳೊಂದಿಗೆ ಜನರ ನಂಟಿನ ಕಗ್ಗಂಟು

ಪಟ್ಟಣ ಸಮೀಪದ ಪೈಗಂಬರ ನಗರದ ಹೊರವಲಯದಲ್ಲಿ ಯುವಕನನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು, ಲಿಂಗಸಗೂರು ಡಿವೈಎಸ್‌ಪಿ ಹುಲ್ಲೂರು, ಮಸ್ಕಿ ಸಿಪಿಐ ದೀಪಕ್‌ ಭೂಸರೆಡ್ಡಿ, ಮುದಗಲ್‌ ಠಾಣೆ ಪಿಎಸ್‌ಐ ಡಾಕೇಶ್‌, ಮಸ್ಕಿ ಪಿಎಸ್‌ಐ ಸಣ್ಣ ವೀರೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿ ಸೇರಿದಂತೆ 9 ಜನರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.