ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಧ್ವಜಸ್ತಂಭ ನೆಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಸ್ ನಿಲ್ದಾಣದ ವಕ್ಕುಂದ ಗ್ರಾಮದ ಮುಂದೆ ಧ್ವಜಸ್ತಂಭ ನೆಡಲು ಪ್ರಜ್ವಲ್ ಹಾಗೂ ಸ್ನೇಹಿತರು ತಯಾರಿ ನಡೆಸಿದ್ದರು. ಈ ವೇಳೆ ಸರ್ವಿಸ್ ವೈಯರ್ ತಾಕಿದ್ದರಿಂದ ವಿದ್ಯುತ್ ಪ್ರವಹಿಸಿ ಪ್ರಜ್ವಲ್ ಮೃತಪಟ್ಟಿದ್ದಾನೆ. 

ಬೆಳಗಾವಿ(ಅ.29):  ಧ್ವಜಸ್ತಂಭ ನೆಡುವ ವೇಳೆ ವಿದ್ಯುತ್ ಪ್ರವಹಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಪ್ರಜ್ವಲ್ ಚನ್ನಗೌಡ ಮುನೇಪ್ಪನವರ(18) ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ. 

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಧ್ವಜಸ್ತಂಭ ನೆಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಸ್ ನಿಲ್ದಾಣದ ವಕ್ಕುಂದ ಗ್ರಾಮದ ಮುಂದೆ ಧ್ವಜಸ್ತಂಭ ನೆಡಲು ಪ್ರಜ್ವಲ್ ಹಾಗೂ ಸ್ನೇಹಿತರು ತಯಾರಿ ನಡೆಸಿದ್ದರು. ಈ ವೇಳೆ ಸರ್ವಿಸ್ ವೈಯರ್ ತಾಕಿದ್ದರಿಂದ ವಿದ್ಯುತ್ ಪ್ರವಹಿಸಿ ಪ್ರಜ್ವಲ್ ಮೃತಪಟ್ಟಿದ್ದಾನೆ. 

ಬೆಳಗಾವಿ: ಮನೆಯ ಮುಂದಿನ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ, ತಂದೆ, ಮಗ ಸಾವು..!

ತಕ್ಷಣ ಸ್ಥಳೀಯರು ಪ್ರಜ್ವಲ್‌ನನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪ್ರಜ್ವಲ್ ಕೊನೆಯುಸಿರೆಳಿದಿದ್ದಾನೆ. ಬೈಲಹೊಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.