* ಶೂಟಿಂಗ್ ಕಾರಲ್ಲಿ ಸಿಕ್ಕ ಶವದ ಗುರುತು ಪತ್ತೆ* ವಿಪರೀತ ಮದ್ಯ ಸೇವಿಸುತ್ತಿದ್ದ ಪೇಂಟರ್* ಬೇಸತ್ತು ಮನೆಯಿಂದ ಹೊರ ಹಾಕಿದ್ದ ತಂದೆ
ಬೆಂಗಳೂರು(ಮೇ.15): ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿ ಚಲನಚಿತ್ರಗಳಿಗೆ ಬಳಸುತ್ತಿದ್ದ ಹಳೇ ಕಾರಿನಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಮೃತದೇಹದ(Dead Body) ಗುರುತು ಶನಿವಾರ ಸಿಕ್ಕಿದ್ದು, ಕಾರಿನಲ್ಲಿ ಮೃತಪಟ್ಟವನು(Death) ಅಗ್ರಹಾರ ದಾರಸರಹಳ್ಳಿಯ ಕಂಠೀರವ ನಗರದ ನಿವಾಸಿ ಲೋಹಿತ್ (33) ಎಂದು ಹೇಳಲಾಗಿದೆ.
ಮೃತ ವ್ಯಕ್ತಿ ಧರಿಸಿದ್ದ ಬಿಳಿಬಣ್ಣದ ಅಂಗಿ, ಜೀನ್ಸ್ ಪ್ಯಾಂಟ್ ಹಾಗೂ ಕೈಯಲ್ಲಿದ್ದ ‘ಕವಿತಾ’ ಹೆಸರಿನ ಹಚ್ಚೆಯಿಂದ ಮೃತ ಕುಟುಂಬದವರು ಗುರುತು ಪತ್ತೆ ಹಚ್ಚಿದ್ದಾರೆ. ನಾಲ್ಕೈದು ದಿನಗಳ ಹಿಂದೆ ವಿಪರೀತ ಮದ್ಯ(Alcohol) ಸೇವಿಸಿ ಕಾರಿನಲ್ಲಿ ಮಲಗಿದ್ದಾಗ ಲೋಹಿತ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು(Police) ಹೇಳಿದ್ದಾರೆ.
Koppal: ಗುಂಡಿಯಲ್ಲಿ ಬಿದ್ದು 15 ವರ್ಷದ ಬಾಲಕಿ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!
ಮೃತ ಲೋಹಿತ್ ಪೆಂಟರ್ ಕೆಲಸ ಮಾಡಿಕೊಂಡಿದ್ದು, ತನ್ನ ಕುಟುಂಬದ ಜತೆ ಕಂಠೀರವ ನಗರದಲ್ಲಿ ನೆಲೆಸಿದ್ದ. ಪುತ್ರನ ಮದ್ಯ ವ್ಯಸನದಿಂದ ಬೇಸರಗೊಂಡ ಆತನ ತಂದೆ, ಕೆಲ ದಿನಗಳ ಹಿಂದೆ ಬೈದಿದ್ದರು. ಇದರಿಂದ ಕೋಪಗೊಂಡ ಆತ, ಮನೆ ಬಿಟ್ಟು ಬಂದಿದ್ದ. ನಂತರ ರಾಜಾಜಿನಗರದ ಕೈಗಾರಿಕಾ ಪ್ರದೇಶದ ರಸ್ತೆ ಬದಿ ನಿಂತಿದ್ದ ಚಲನಚಿತ್ರಗಳಿಗೆ ಬಳಸುತ್ತಿದ್ದ ಹಳೆಯ ಕಾರಿನಲ್ಲೇ ವಾಸ್ತವ್ಯ ಹೂಡಿದ ಆತ, ಆ ಕಾರಿನಲ್ಲಿ ಕಂಠಮಟ ಮದ್ಯ ಸೇವಿಸಿದ್ದಾನೆ. ಆಗ ಹೃದಯಾಘಾಕ್ಕೀಡಾಗಿ(Heart Attack) ಲೋಹಿತ್ ಕೊನೆಯುಸಿರೆಳೆದಿದ್ದಾನೆ.
ಮೃತಪಟ್ಟು ನಾಲ್ಕೈದು ದಿನಗಳ ಬಳಿಕ ಕಾರಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಶುಕ್ರವಾರ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಮಗ ಕಣ್ಮರೆಯಿಂದ ಕಂಗಲಾಗಿದ್ದ ಲೋಹಿತ್ ಕುಟುಂಬದವರು, ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಅಪರಿಚಿತನ ಮೃತದೇಹ ಪತ್ತೆಯಾದ ಮಾಹಿತಿ ತಿಳಿದು ಮಾಗಡಿ ರಸ್ತೆ ಠಾಣೆಗೆ ಬಂದಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಮೃತದೇಹವನ್ನು ಅವರಿಗೆ ತೋರಿಸಿದಾಗ ಗುರುತು ಪತ್ತೆ ಹಚ್ಚಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
