Asianet Suvarna News Asianet Suvarna News

Koppal: ಗುಂಡಿಯಲ್ಲಿ ಬಿದ್ದು 15 ವರ್ಷದ ಬಾಲಕಿ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!

ಆ ಬಾಲಕಿ ಎಂದಿನಂತೆ ತನ್ನ ತಂದೆಗೆ ಊಟ ನೀಡಿ ಮನೆಗೆ ವಾಪಸ್ ಆಗುತ್ತಿದ್ದಳು.‌ಈ ವೇಳೆ ದಾರಿ ಮಧ್ಯೆ ಇದ್ದ ನೀರಿನ ಗುಂಡಿಗೆ ಬಿದ್ದು, ಬಾಲಕಿ ಸಾವನ್ನಪ್ಪಿದ್ದಾಳೆ.‌ 

girl has died after falling into a pit in koppal gvd
Author
Bangalore, First Published May 12, 2022, 5:57 PM IST

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಮೇ.12): ಆ ಬಾಲಕಿ (Girl) ಎಂದಿನಂತೆ ತನ್ನ ತಂದೆಗೆ ಊಟ ನೀಡಿ ಮನೆಗೆ ವಾಪಸ್ ಆಗುತ್ತಿದ್ದಳು.‌ ಈ ವೇಳೆ ದಾರಿ ಮಧ್ಯೆ ಇದ್ದ ನೀರಿನ ಗುಂಡಿಗೆ (Pit) ಬಿದ್ದು, ಬಾಲಕಿ ಸಾವನ್ನಪ್ಪಿದ್ದಾಳೆ (Death).‌ ಆರಂಭದಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದ ಪಾಲಕರಿಗೆ (Parents) ತಡವಾಗಿ ಬಾಲಕಿ‌ ನೀರಿನ ಗುಂಡಿಯಲ್ಲಿ ಬಿದ್ದ ವಿಷಯ ಗೊತ್ತಾಗಿದೆ. ಅಷ್ಟಕ್ಕೂ ಏನಿದು ಬಾಲಕಿ ಸಾವಿನ ಕಥೆ ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಎಲ್ಲಿ ಬಾಲಕಿ ಸಾವನ್ನಪ್ಪಿರುವುದು: ಕೊಪ್ಪಳ‌ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದೆ. ಜೊತೆಗೆ ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಬೃಹತ್ ಕಟ್ಟಡಗಳ ನಿರ್ಮಾಣ ಸಹ ಹೆಚ್ಚಾಗುತ್ತಿವೆ. ಇದೇ ರೀತಿಯಲ್ಲಿ  ನಗರದ ಹೊಸಪೇಟೆ ರಸ್ತೆಯಲ್ಲಿರುವ ಕೆ ಎಸ್ ಆಸ್ಪತ್ರೆ ಮುಂಭಾಗದಲ್ಲಿ ಲಕ್ಷ್ಮಣ ಸಾ ನಿರಂಜನ ಎನ್ನುವರು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪಿಲ್ಲರ್‌ಗಳನ್ನು ಹಾಕಲು ಗುಂಡಿಗಳನ್ನು ತೋಡಿದ್ದು, ಅದರಲ್ಲಿ ನೀರು ತುಂಬಿಕೊಂಡಿದ್ದು, ಅದರಲ್ಲಿ ಬಾಲಕಿ ಬಿದ್ದು ಸಾವನ್ನಪ್ಪಿದ್ದಾಳೆ.

Koppal: ಕುಡಿಯುವ ನೀರು ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲು

ಯಾರು ಬಾಲಕಿ: ನೀರಿನ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಬಾಲಕಿ 15 ವರ್ಷದ ಭೂಮಿಕಾ.‌ ಈಕೆಯ ತಂದೆ ಶಂಭುಲಿಂಗಯ್ಯ ಕೆ ಎಸ್ ಆಸ್ಪತ್ರೆಯ ಮುಂಭಾಗದಲ್ಲಿಯೇ ಪಾನ್ ಶಾಪ್‌ವೊಂದನ್ನು ಇಟ್ಟುಕೊಂಡಿದ್ದು, ಇವರ ಏಕೈಕ ಪುತ್ರಿಯಾಗಿರುವ ಭೂಮಿಕಾ ಇದೀಗ ಸಾವನ್ನಪ್ಪಿದ್ದಾಳೆ.

ಭೂಮಿಯಾ ಗುಂಡಿಯಲ್ಲಿ ಬಿದ್ದದ್ದು ಹೇಗೆ: ಇನ್ನು ಭೂಮಿಕಾ ತಂದೆ ಶಂಭುಲಿಂಗಯ್ಯ ಕೆ ಎಸ್ ಆಸ್ಪತ್ರೆ ಹತ್ತಿರ ಪಾನ್ ಶಾಪ್‌ವೊಂದನ್ನು ಇಟ್ಟುಕೊಂಡಿದ್ದು, ಪ್ರತಿನಿತ್ಯ ಭೂಮಿಕಾ ಪಾನ್ ಶಾಪ್‌ಗೆ ಮನೆಯಿಂದ ಬಂದು ಹೋಗುತ್ತಿದ್ದಳು. ಅದೇ ರೀತಿಯಾಗಿ ಮೊನ್ನೆಯೂ ಸಹ ಭೂಮಿಕಾ ತಂದೆಯ ಪಾನ್ ಶಾಪ್‌ಗೆ ಬಂದಿದ್ದಾಳೆ. ಬಳಿಕ ಎರಡು ಅಡಿಕೆ ಚೀಟ್‌ಗಳನ್ನು ತೆಗೆದುಕೊಂಡು ಮರಳಿ ಮನಗೆ ಹೋಗುವಾಗ ಆಸ್ಪತ್ರೆ ಮುಂಭಾಗದಲ್ಲಿದ್ದ ಗುಂಡಿ ಬಳಿ ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾಳೆ.

ಪಾಲಕರಿಂದ ಮಿಸ್ಸಿಂಗ್ ಕಂಪ್ಲೆಂಟ್: ಇನ್ನು ಭೂಮಿಕಾ ಗುಂಡಿಯಲ್ಲಿ ಬಿದ್ದಿರುವ ವಿಷಯ ಪಾಲಕರಿಗೆ ಗೋತ್ತೇ ಇಲ್ಲ.‌ ಹೀಗಾಗಿ ಬಹಳ ಸಮಯ ಕಳೆದರೆ ಭೂಮಿಕಾ ಮನೆಗೆ ಬರದಿದ್ದಾಗ, ಆಕೆಯನ್ನು ಹುಡುಕಾಡಿದ್ದಾರೆ. ಆದರೆ ಭೂಮಿಕಾ ಎಲ್ಲಿಯೂ ಸಿಕ್ಕಿಲ್ಲ. ಬಳಿಕ‌ ಪಾಲಕರು ನಡೆಸುತ್ತಿದ್ರು. ಮಗಳು ಭೂಮಿಕಾ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದಾರೆ.

ಭೂಮಿಕಾ ಗುಂಡಿಯಲ್ಲಿ ಬಿದ್ದದ್ದು ಗೊತ್ತಾದದ್ದು ಹೇಗೆ: ಇನ್ನು ಬಾಲಕಿ ಭೂಮಿಕಾ  ನಾಪತ್ತೆಯಾದ ಬಳಿಕ ಆಕೆಯ ಪಾಲಕರು ಊರೇಲ್ಲಾ ಹುಡುಕಾಡಲು ಆರಂಭಿಸಿದರು. ಈ ವೇಳೆ ಅವರಿಗೆ ಹೊಳೆದದ್ದು ಕೆ ಎಸ್ ಆಸ್ಪತ್ರೆಯ ಸಿಸಿ ಕ್ಯಾಮರಾ. ಹೇಗೂ ಭೂಮಿಕಾ ಕೆ ಎಸ್ ಆಸ್ಪತ್ರೆಯ ಬಳಿ ಬಂದಿರುವುದನ್ನು ಆಕೆಯ ತಂದೆ ಗಮನಿಸಿದ್ದ.‌ ಹೀಗಾಗಿ ಆಸ್ಪತ್ರೆಯ ಸಿ ಸಿ ಕ್ಯಾಮರಾ ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿ ಪಾಲಕರು ಆಸ್ಪತ್ರೆಯ ಸಿಸಿ ಕ್ಯಾಮರಾ ಚೆಕ್ ಮಾಡಿಸುತ್ತಾರೆ.‌ ಆದರೆ ಆಸ್ಪತ್ರೆಯವರು ಆರಂಭದಲ್ಲಿ ಸಹಕರಿಸುವುದಿಲ್ಲ. ನಂತರ ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಅದರಲ್ಲಿ ಭೂಮಿಕಾ ನೆಡದುಕೊಂಡು ಬಂದು ಗುಂಡಿಯಲ್ಲಿ ಬಿಳುವುದು ಸ್ಪಷ್ಟವಾಗಿ ಗೊತ್ತಾಗಿದೆ.

Koppal: ಕಿತ್ತು ತಿನ್ನುವ ಬಡತನ: ಇಳಿವಯಸ್ಸಲ್ಲೂ ದುಡಿಯುತ್ತಿರುವ 70ರ ವೃದ್ಧೆ..!

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ಇನ್ನು ಭೂಮಿಕಾ ಗುಂಡಿಯಲ್ಲಿ ಬಿದ್ದಿರುವ ವಿಷಯ ತಿಳಿಯುತ್ತಲೆ ಆಸ್ಪತ್ರೆ ಬಳಿ ಆಕೆಯ ಪಾಲಕರು ಸಂಬಂಧಿಕರು ಜಮಾಯಿಸಿದ್ದಾರೆ. ಭೂಮಿಕಾ ಶವ ಹೊರಗಡೆ ತೆಗೆಯುತ್ತಲೆ, ಆಕೆಯ ತಂದೆ, ತಾಯಿ ಹಾಗೂ ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿತ್ತು.

ಸೂಕ್ತ ಪರಿಹಾರಕ್ಕೆ ಭೂಮಿಕಾ ಕುಟುಂಬಸ್ಥರ ಆಗ್ರಹ: ಭೂಮಿಕಾ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಆಕೆಯ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.‌ ನಿವೇಶನದ ಮಾಲೀಕರ ನಿರ್ಲಕ್ಷ್ಯದಿಂದ‌ ಭೂಮಿಕಾ‌ ಸಾವನ್ನಪ್ಪಿದ್ದು, ಆಕೆಯ ಕುಟುಂಬಸ್ಥರಿಗೆ ನಿವೇಶನದ ಮಾಲೀಕರು ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ನಿವೇಶನ ಮಾಲೀಕರ ಎಡವಟ್ಟಿನಿಂದಾಗಿ ಅಮಾಯಕ ಭೂಮಿಕಾ ಸಾವನ್ನಪ್ಪಿದ್ದಾಳೆ.‌ ಇನ್ನಾದರೂ ನಿವೇಶನದ ಮಾಲೀಕರು ಎಚ್ಚೇತ್ತು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕಿದೆ.‌ ಜೊತೆಗೆ  ಭೂಮಿಕಾ ಕುಟುಂಬಸ್ಥರಿಗೆ ಪರಿಹಾರ ನೀಡುವ ಕೆಲಸ ಮಾಡಬೇಕಿದೆ.

Follow Us:
Download App:
  • android
  • ios