ತುಮಕೂರು(ಮೇ.08): ಸಾಯುವ ಮುನ್ನ ವಿಡಿಯೋ ಮಾಡಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. 

ಕೋಡ್ಲಹಳ್ಳಿ ಗ್ರಾಮದ ನಂದೀಶಯ್ಯ ಎಂಬುವರ ಮಗನಾದ ಮಧು(25) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾನೆ. ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಡ್ಲಹಳ್ಳಿ ಗ್ರಾಮದ ವಾಸಿಯಾದ ಮೃತ ಮಧು ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದ ಎಂದು ತಿಳಿದು ಬಂದಿದೆ.

ಅಂದು ಮದ್ಯ ಸಿಗದೆ ಪರದಾಟ, ಈಗ ಅತಿಯಾಗಿ ಕುಡಿದು ಸಾವು..!

ಕೊರೋನಾದಿಂದ ಲಾಕ್‌ಡೌನ್ ಆದ ಹಿನ್ನಲೆಯಲ್ಲಿ ಮೃತ ಮಧು ಒಂದು ವಾರದ ಹಿಂದೆ ತನ್ನ ಸ್ವಗ್ರಾಮ ಕೋಡ್ಲಹಳ್ಳಿಗೆ ಬಂದಿದ್ದ. ಹಣಕಾಸಿನ ಸಮಸ್ಯೆಯಿಂದ ಇಂದು ಬೆಳಿಗ್ಗೆ ಮಾವತ್ತೂರು ಕೆರೆ ಸಮೀಪದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ತನ್ನ ಅಣ್ಣನಿಗೆ ಕಳುಹಿಸಿ ಎಂದು ಹೇಳಿದ್ದಾನೆ. ಸಾಯೋಕು ಮುನ್ನ ಮೃತ ಮಧು ಸಂಬಂಧಿಕರಿಗೆ ವಿಡಿಯೋ‌ ಕಳಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.