Asianet Suvarna News Asianet Suvarna News

ಮಂಡ್ಯ: ಲವ್, ಸೆಕ್ಸ್ ದೋಖಾ, ಪ್ರೀತಿಸಿ ಎಲ್ಲ ರೀತಿಯಲ್ಲಿ ಬಳಸಿಕೊಂಡು ಯುವತಿಗೆ ಕೈಕೊಟ್ಟ ಯುವಕ..!

ಕಳೆದ ಎಂಟು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಮದುವೆಯಾಗುವಂತೆ ಒತ್ತಾಯಿಸಿದ ಪ್ರಿಯತಮೆಯಿಂದ ಅಂತರ ಕಾಯ್ದುಕೊಳ್ಳಲು ಪ್ರಿಯಕರ ಮುಂದಾಗಿದ್ದಾನೆ. ಬೇರೆ ಬೇರೆ ಕಾರಣ ಹೇಳಿಕೊಂಡು ಮದುವೆ ಮುಂದೆ ಆಗುವುದಾಗಿ ಭರವಸೆ ನೀಡಿದ್ದನಂತೆ ಯುವಕ. 

Young Man Cheat to Woman in Mandya grg
Author
First Published Jan 9, 2024, 10:09 AM IST

ಮಂಡ್ಯ(ಜ.09):  8 ವರ್ಷ ಪ್ರೀತಿಸಿ ಎಲ್ಲ ರೀತಿಯಲ್ಲಿ ಬಳಸಿಕೊಂಡು ಯುವಕನೊಬ್ಬ ಯುವತಿಗೆ ವಂಚಿಸಿದ ಆರೋಪವೊಂದು ಕೇಳಿ ಬಂದಿದೆ. ಅನ್ಯಜಾತಿ ನೆಪವೊಡ್ಡಿ ಪ್ರಿಯತಗೆ ಕೈ ಕೊಟ್ಟಿದ್ದಾನೆ ಪ್ರಿಯಕರ. ಕೈ ಕೊಟ್ಟ ಪ್ರಿಯಕರನಿಗಾಗಿ ಮನೆ ಮುಂದೆಯೇ ಯುವತಿ ಕುಳಿತಿದ್ದಾಳೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಬಳ್ಳಗೆರೆ ಗ್ರಾಮದ ಮಂಜು.ಬಿ.ಆರ್ ಎಂಬಾತನೇ ಯುವತಿಯನ್ನ ನಂಬಿಸಿ ವಂಚನೆ ಮಾಡಿರುವ ಯುವಕನಾಗಿದ್ದಾನೆ. 

ನಂಜನಗೂಡಿನ ರೂಪಾ(ಹೆಸರು ಬದಲಾಯಿಸಲಾಗಿದೆ) ನಂಬಿ ಮೋಸ ಹೋದ ಯುವತಿಯಾಗಿದ್ದಾಳೆ. ಕಳೆದ ಎಂಟು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಮದುವೆಯಾಗುವಂತೆ ಒತ್ತಾಯಿಸಿದ ಪ್ರಿಯತಮೆಯಿಂದ ಅಂತರ ಕಾಯ್ದುಕೊಳ್ಳಲು ಪ್ರಿಯಕರ ಮುಂದಾಗಿದ್ದಾನೆ. ಬೇರೆ ಬೇರೆ ಕಾರಣ ಹೇಳಿಕೊಂಡು ಮದುವೆ ಮುಂದೆ ಆಗುವುದಾಗಿ ಭರವಸೆ ನೀಡಿದ್ದನಂತೆ ಯುವಕ. 

ನನ್ನಮ್ಮನ ಜೊತೆಯೇ ಗಂಡನ ರಾಸಲೀಲೆ, ಏನ್ಮಾಡೋದು ಕೇಳ್ತಿದ್ದಾಳೆ ಹೆಂಡತಿ?

ಇದೀಗ ಪ್ರಿಯಕರ ಮಂಜು ಪ್ರೀತಿಸಿದಾಕೆ ಬಿಟ್ಟು ಮತ್ತೊಂದು ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿದ್ದಾನೆ. ವಿಷಯ ತಿಳಿದ ಪ್ರಿಯತಮೆ ಇದೀಗ ಪ್ರಿಯಕರನೊಂದಿಗೆ ಮದುವೆಗೆ ಪಟ್ಟು ಹಿಡಿದಿದ್ದಾಳೆ. ಪ್ರಿಯಕರ ಮಂಜನ ಮನೆ ಮುಂದೆ ಕುಳಿತು ಮದುವೆ ಆಗುವಂತೆ ಆಗ್ರಹಿಸಿದ್ದಾಳೆ. ನ್ಯಾಯಕ್ಕಾಗಿ ಗೋಗರೆದರು ಮಂಜ ಹಾಗೂ ಕುಟುಂಬಸ್ಥರು ಕ್ಯಾರೆ ಎನ್ನುತ್ತಿಲ್ಲ. 

Follow Us:
Download App:
  • android
  • ios