Karnataka Election 2023: ಮತದಾನಕ್ಕೆಂದು ಲಂಡನ್ನಿಂದ ಬೀದರ್ಗೆ ಬಂದ ಯುವಕ..!
ಇದೊಂದು ಪ್ರಜಾಪ್ರಭುತ್ವದ ಅತ್ಯುನ್ನತ ಗೌರವ ಅಷ್ಟೇ ಅಲ್ಲ ನಮ್ಮನ್ನು ಅತ್ಯುತ್ತಮ ಜವಾಬ್ದಾರಿಯುತ ನಾಗರಿಕನನ್ನಾಗಿ ರೂಪಿಸಿಕೊಳ್ಳಲು ಇರುವ ಅವಕಾಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಆದೀಶ ವಾಲಿ
ಬೀದರ್(ಮೇ.11): ರಾಜ್ಯದ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತ ಚಲಾವಣೆಯ ಹುಮ್ಮಸ್ಸು, ಸಿಕ್ಕಿರುವ ಹಕ್ಕು ಚಲಾವಣೆಗಾಗಿ ದೂರದ ಲಂಡನ್ನಿಂದ ತಾಯ್ನಾಡಿಗೆ ಬೀದರ್ನ ಆದೀಶ ರಜನೀಶ ವಾಲಿ ಬಂದು ಮತ ಚಲಾಯಿಸಿದ್ದಾರೆ.
ಲಂಡನ್ನಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಿ ಮತ್ತಷ್ಟು ಉನ್ನತ ಶಿಕ್ಷಣ, ಯುವಕರ ಪರ ಸಂಘಟನಾತ್ಮಕ ಕಾರ್ಯಗಳತ್ತ ಹೆಜ್ಜೆ ಇಟ್ಟಿರುವ ಆದೀಶ ರಜನೀಶ ವಾಲಿ ಬುಧವಾರ ಬೆಳ್ಳಂಬೆಳಗ್ಗೆ ಮತ ಚಲಾಯಿಸಿ ರೋಮಾಂಚನ ತಂದಿತು ಎಂದಿದ್ದಾರೆ.
KARNATAKA ELECTIONS 2023: ಗುಪ್ತ ಮತದಾನದ ನಿಯಮ ಉಲ್ಲಂಘನೆ: ವೋಟ್ ಹಾಕಿದ ವಿಡಿಯೋ, ಫೋಟೋ ವೈರಲ್!
ಲಂಡನ್ ಯುತ್ ಕೌನ್ಸಿಲ್ ಸದಸ್ಯರೂ ಆಗಿರುವ ಆದೀಶ ವಾಲಿ ತಮ್ಮ ಮತದಾನ ಕುರಿತಂತೆ ಕನ್ನಡಪ್ರಭಕ್ಕೆ ಮಾತನಾಡಿ, ಇದೊಂದು ಪ್ರಜಾಪ್ರಭುತ್ವದ ಅತ್ಯುನ್ನತ ಗೌರವ ಅಷ್ಟೇ ಅಲ್ಲ ನಮ್ಮನ್ನು ಅತ್ಯುತ್ತಮ ಜವಾಬ್ದಾರಿಯುತ ನಾಗರಿಕನನ್ನಾಗಿ ರೂಪಿಸಿಕೊಳ್ಳಲು ಇರುವ ಅವಕಾಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುವ ಪೀಳಿಗೆ ಮತದಾನ ಮಾಡುವ ಮೂಲಕ ಸಮಾಜ ಹಾಗೂ ರಾಜ್ಯದ ಅಭಿವೃದ್ಧಿಗಿರುವ ಅವಕಾಶಗಳ ಕುರಿತಾಗಿ ಧ್ವನಿಯಾಗಬೇಕು. ಅತ್ಯುತ್ತಮ ವ್ಯಕ್ತಿಯನ್ನು ಆರಿಸಿ ಕಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ನುಡಿದರು.
130 ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಬರಲಿದೆ : ಡಾ. ಜಿ. ಪರಮೇಶ್ವರ್
ಮತದಾನಕ್ಕೆಂದು ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಲಂಡನ್ನಿಂದ ಬೀದರ್ಗೆ ಬಂದಿರುವ ಆದೀಶ ಬುಧವಾರ ಮೇ 10ರಂದು ಬೆಳ್ಳಂಬೆಳಗ್ಗೆ 7ಕ್ಕೆ ಕೃಷಿ ಇಲಾಖೆಯ ಕಟ್ಟಡದ ಮತಗಟ್ಟೆಯಲ್ಲಿ ಅಜ್ಜ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ಅವರೊಂದಿಗೆ ಮತಗಟ್ಟೆಗೆ ತೆರಳಿ ತಮ್ಮ ಪ್ರಥಮ ಮತದಾನ ಮಾಡಿದ್ದು ಅವರನ್ನು ರೋಮಾಂಚನಗೊಳಿಸಿದೆ.
ಕನ್ನಡ ಧ್ವಜ ಎತ್ತಿ ಹಿಡಿದು ಕನ್ನಡಿಗರ ಹಿರಿಮೆಯನ್ನು ಹೆಚ್ಚಿಸಿದ್ದ ಆದೀಶ:
ಇನ್ನು ಆದೀಶ ರಜನೀಶ ವಾಲಿ ಇತ್ತೀಚೆಗೆ ಲಂಡನ್ನಲ್ಲಿ ಸ್ನಾತಕೋತ್ತರ ಪದವಿ ಸ್ವೀಕಾರ ಸಂದರ್ಭದಲ್ಲಿ ಕನ್ನಡ ಧ್ವಜವನ್ನು ಎತ್ತಿ ಹಿಡಿದು ಕನ್ನಡಿಗರ ಹಿರಿಮೆಯನ್ನು ಹೆಚ್ಚಿಸಿದ್ದರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯದ ಹಿರಿಯ ನಾಯಕರು, ಲಕ್ಷಾಂತರ ಕನ್ನಡಿಗರ ಮೆಚ್ಚುಗೆ ಗಳಿಸಿದ್ದ ಅಷ್ಟೇ ಅಲ್ಲ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಸದಸ್ಯತ್ವ ನೀಡುವ ಘೋಷಣೆಯನ್ನೂ ಮಾಡಿತ್ತು ಎಂಬುವದನ್ನು ಇಲ್ಲಿ ಸ್ಮರಿಸಬಹುದು.