Asianet Suvarna News Asianet Suvarna News

ಬೆಳಗಾವಿ: ಚಿಲ್ಲರೆ ಹಣಕ್ಕಾಗಿ ಮಹಿಳಾ ಕಂಡಕ್ಟರ್‌ ಮೇಲೆ ಯುವಕನಿಂದ ಹಲ್ಲೆ

ಯಮನಾಪೂರ ಗ್ರಾಮದಿಂದ ಬಸನಲ್ಲಿ ಸಂಚರಿಸುತ್ತಿದ್ದ ಯುವಕ ಮಹಿಳಾ ನಿರ್ವಾಹಕಿಯೊಂದಿಗೆ ಬಸ್‌ನಲ್ಲಿ ಚಿಲ್ಲರೆ ಕೊಡುವ ವಿಚಾರದಲ್ಲಿ ಯುವಕ ಗಲಾಟೆ ನಡೆಸಿದ್ದಾನೆ. ಅಲ್ಲದೇ ಯುವಕ ಅವ್ಯಾಚ್ಛ ಶಬ್ಧಗಳಿಂದ ನಿಂದಿಸುವಾಗ ಯಾರಿಗೆ ಬೈಯುತ್ತಿರುವೆ ಎಂದು ಕೇಳಿದ್ದಕ್ಕೆ ಕಪಾಳಮೋಕ್ಷ ಮಾಡಿದ್ದಾನೆ. 

Young Man Assaulted on Women Conductor in Belagavi grg
Author
First Published Apr 30, 2024, 5:06 PM IST

ಬೆಳಗಾವಿ(ಏ.30):  ಚಿಲ್ಲರೆ ಹಣಕ್ಕಾಗಿ ಕರ್ತವ್ಯ ನಿರತ ಮಹಿಳಾ ನಿರ್ವಾಹಕಿ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಇಂದು(ಮಂಗಳವಾರ) ನಗರದ ಚನ್ನಮ್ಮ ವೃತ್ತದಲ್ಲಿ ನಡೆದಿದೆ. 

ನಗರದ 2ನೇ ಘಟಕದಲ್ಲಿ ನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶೋಭಾ ಗಾಣಗಿ ಎಂಬುವರು ಹಲ್ಲೆಗೊಳಗಾದವರು.  ಬೆಳಗಾವಿ ಹಾಗೂ ಹೊನಗಾ ನಡುವೆ ಸಂಚರಿಸುವ ನಗರ ಸಾರಿಗೆ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಸ್ಮಶಾನದಲ್ಲಿ ಅಡ್ಡಾಡಿದ ಸತೀಶ, ಚುನಾವಣೆಯಲ್ಲಿ ದೇವಸ್ಥಾನಕ್ಕೆ ಬಂದಿದ್ಯಾಕೆ? ಯತ್ನಾಳ್ ಕಿಡಿ

ಯಮನಾಪೂರ ಗ್ರಾಮದಿಂದ ಬಸನಲ್ಲಿ ಸಂಚರಿಸುತ್ತಿದ್ದ ಯುವಕ ಮಹಿಳಾ ನಿರ್ವಾಹಕಿಯೊಂದಿಗೆ ಬಸ್‌ನಲ್ಲಿ ಚಿಲ್ಲರೆ ಕೊಡುವ ವಿಚಾರದಲ್ಲಿ ಯುವಕ ಗಲಾಟೆ ನಡೆಸಿದ್ದಾನೆ. ಅಲ್ಲದೇ ಯುವಕ ಅವ್ಯಾಚ್ಛ ಶಬ್ಧಗಳಿಂದ ನಿಂದಿಸುವಾಗ ಯಾರಿಗೆ ಬೈಯುತ್ತಿರುವೆ ಎಂದು ಕೇಳಿದ್ದಕ್ಕೆ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ನಿರ್ವಾಹಕಿಗೆ ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.

Latest Videos
Follow Us:
Download App:
  • android
  • ios