Asianet Suvarna News Asianet Suvarna News

ಕನ್ನಡ ಭಾಷೆ ಉತ್ತುಂಗಕ್ಕೇರಲು ಯುವಪೀಳಿಗೆ ಶ್ರಮಿಸಬೇಕು: ಹಿರೇಮಗಳೂರು ಕಣ್ಣನ್‌

ಕನ್ನಡವನ್ನು ಕನ್ನಡಿಯಾಗಿಸಿ , ಕನ್ನಡದ ಮನಸ್ಸುಗಳ ಚೆನ್ನುಡಿಯಾಗಿಸಿ ,ಬೆನ್ನುಡಿಯಾಗಿಸಿ , ಮುನ್ನುಡಿಯಾಗಿಸಬೇಕು. ಕನ್ನಡದ ನೆಲ, ಜಲ, ಭಾಷೆಗಳು ಉತ್ತುಂಗಕ್ಕೇರಲು ಇಂದಿನ ಯುವ ಪೀಳಿಗೆ ಪ್ರಯತ್ನಿಸಬೇಕು ಎಂದು ಹೀರೆಮಗಳೂರು ಕಣ್ಣನ್‌ ಹೇಳಿದರು.

Young generation should work hard for Kannada language to rise sasy kannan rav
Author
First Published Dec 2, 2022, 7:50 AM IST

ಕಾರ್ಕಳ (ಡಿ.2) : ಕನ್ನಡವನ್ನು ಕನ್ನಡಿಯಾಗಿಸಿ , ಕನ್ನಡದ ಮನಸ್ಸುಗಳ ಚೆನ್ನುಡಿಯಾಗಿಸಿ ,ಬೆನ್ನುಡಿಯಾಗಿಸಿ , ಮುನ್ನುಡಿಯಾಗಿಸಬೇಕು. ಕನ್ನಡದ ನೆಲ, ಜಲ, ಭಾಷೆಗಳು ಉತ್ತುಂಗಕ್ಕೇರಲು ಇಂದಿನ ಯುವ ಪೀಳಿಗೆ ಪ್ರಯತ್ನಿಸಬೇಕು ಎಂದು ಹೀರೆಮಗಳೂರು ಕಣ್ಣನ್‌ ಹೇಳಿದರು. ಅವರು ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹಿರ್ಗಾನ ಲಕ್ಷ್ಮೇಪುರ ಮಹಾಲಕ್ಷ್ಮೇ ದೇವಸ್ಥಾನದಲ್ಲಿ ಮಂಗಳವಾರ ನಡೆದ ಕ್ರಿಯೇಟಿವ್‌ ನುಡಿಹಬ್ಬ 2022 ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸೃಜನಶೀಲ ಮನಸ್ಸುಗಳನ್ನು ರೂಪಿಸಲು ಕ್ರಿಯೇಟಿವ್‌ ಕಾಲೇಜು ನಿಮಗೆ ಬಾಗಿಲು ತೆರೆದಿದೆ. Üನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸತ್ೊ್ರಜೆಗಳಾಗಿ ,ಓದಿನಮೂಲಕ ಸೃಜನಶೀಲ ವ್ಯಕ್ತಿತ್ವವು ನಿಮ್ಮದಾಗಲಿ. ತಂದೆ ತಾಯಿ ಮಕ್ಕಳ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿಯಾಗದಂತೆ ನೋಡಿಕೊಳ್ಳಿ ಎಂದು ವಿದ್ಯಾರ್ಥಿ ಗಳಿಗೆ ಹಿತವಚನ ನುಡಿದರು. ನಿನಾದ ಪತ್ರಿಕೆಯ ಮೂಲಕ ಮಕ್ಕಳ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಿದ್ದೀರಿ, ಕನ್ನಡ ಸಾಹಿತ್ಯ ಉಳಿಯಲು ಹಾಗೂ ಉಳಿಸಲು ಇಂತಹ ಅಭಿರುಚಿಗಳೆ ಸಾಕ್ಷಿ ಎಂದು ಕಾಲೇಜಿನ ಸಂಸ್ಥಾಪಕರನ್ನು ಕೊಂಡಾಡಿದರು.

POCSO: ನೈಜ ಆರೋಪಿಯನ್ನ ಬಂಧಿಸದ ಪೊಲೀಸರು: 5 ಲಕ್ಷ ರು. ಪರಿಹಾರ ಆದೇಶಿಸಿದ ಕೋರ್ಟ್

ಪ್ರಾಂಶುಪಾಲ ಗಣಪತಿ ಭಟ್‌ ಮಾತನಾಡಿ ಕ್ರಿಯೇಟಿವ್‌ ಕಾಲೇಜು ಅಯೋಜಿಸಿರುವ ನುಡಿಹಬ್ಬ ಕಾರ್ಯಕ್ರಮ ಭಾಷೆ, ಸಾಹಿತ್ಯಕ್ಕೆ ದಾರಿದೀಪವಾಗಿದೆ ಎಂದರು.

ಅಮೃತ್‌ ರೈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಉಡುಪಿ ಕ್ರಿಯೇಟಿವ್‌ ಕಾಲೇಜು ಕಾಲೇಜಿನ ಸ್ಟ್ಯಾನಿ ಲೋಬೊ , ಡಾ. ಗಣನಾಥ್‌ ಶೆಟ್ಟಿ, ಅಮೃತ್‌ ರೈ , ಆದರ್ಶ ಎಂ.ಕೆ., ವಿಮಲ್‌ ರಾಜ್‌ ಜಿ,., ಗಣಪತಿ ಭಟ್‌ ಕೆ.ಎಸ್‌. ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ನಿನಾದ ಪತ್ರಿಕೆಯ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

Muslim College ವಕ್ಫ್ ಬೋರ್ಡ್ ಕಾಲೇಜುಗಳಲ್ಲಿ ಎಲ್ಲ ಸಮುದಾಯದವರ ಅಭ್ಯಾಸಕ್ಕೂ ಅವಕಾಶ: ಶಾಫಿ ಸಅದಿ ಹೇಳಿಕೆ

ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಅನು ಬೆಳ್ಳೆ ಅವರ ಬೊಂಬಿನ ಬೇಲಿ ಪುಸ್ತಕ ಬಿಡುಗಡೆ ಮಾಡಲಾಯಿತು. ನಿವೃತ್ತ ಶಿಕ್ಷಕಿ ಪೂರ್ಣಿಮಾ ಶೆಣೈ ಅವರನ್ನು ಸನ್ಮಾನಿಸಲಾಯಿತು. ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಅಶ್ವಥ್‌ ಎಸ್‌.ಎಲ್‌. ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಮಕೃಷ್ಣ ನಿರೂಪಿಸಿದರು.

Follow Us:
Download App:
  • android
  • ios