ನವೆಂಬರ್‌ನಲ್ಲಿ ಯೆಲ್ಲೋ ಮೆಟ್ರೋ ಮಾರ್ಗ ಟ್ರಯಲ್ ಟೆಸ್ಟ್ ?: ಜಯದೇವ ಬಳಿ ಏಷ್ಯಾದಲ್ಲೇ ದೊಡ್ಡ ಸ್ಟೇಷನ್
ಬೊಮ್ಮಸಂದ್ರದಿಂದ ಆರ್.ವಿ.ರಸ್ತೆವರೆಗೆ ಮೆಟ್ರೋ ಕಾಮಗಾರಿ ಈಗಾಗಲೇ ಉದ್ಘಾಟನೆ ಆಗಬೇಕಿತ್ತು. ಆದರೆ ಇದುವರೆಗೂ ಕೂಡ ನಾಲ್ಕು ಬಾರಿ ಮುಂದೂಡಿದ್ದು, ತ್ವರಿತವಾಗಿ ಕಾಮಗಾರಿ ಮಾಡಲು ಸೂಚಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಆನೇಕಲ್ (ಅ.07): ಬೊಮ್ಮಸಂದ್ರದಿಂದ ಆರ್.ವಿ.ರಸ್ತೆವರೆಗೆ ಮೆಟ್ರೋ ಕಾಮಗಾರಿ ಈಗಾಗಲೇ ಉದ್ಘಾಟನೆ ಆಗಬೇಕಿತ್ತು. ಆದರೆ ಇದುವರೆಗೂ ಕೂಡ ನಾಲ್ಕು ಬಾರಿ ಮುಂದೂಡಿದ್ದು, ತ್ವರಿತವಾಗಿ ಕಾಮಗಾರಿ ಮಾಡಲು ಸೂಚಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಅವರು ಬೊಮ್ಮಸಂದ್ರ ಮೆಟ್ರೋ ರೈಲು ನಿಲ್ದಾಣದ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಯೆಲ್ಲೋ ಮಾರ್ಗದ ಮೆಟ್ರೋ ಕಾಮಗಾರಿ ಪರಿಶೀಲನೆ ನಡೆಸಲಾಗಿದೆ.
ಜನರಿಗೆ ಓಡಾಡಲು ಮೆಟ್ರೋ ಒಳ್ಳೆಯ ಲೈಫ್ ಲೈನ್ ಆಗಿದ್ದು, ಹಳದಿ ಮಾರ್ಗ ದಕ್ಷಿಣ ಬೆಂಗಳೂರಿನ ಪ್ರಮುಖ ಭಾಗ ಆಗಿದೆ. ಬೊಮ್ಮಸಂದ್ರದಿಂದ ಆರ್.ವಿ. ರಸ್ತೆವರೆಗೆ 18 ಕಿಲೋ ಮೀಟರ್ ಇದ್ದು,16 ಮೆಟ್ರೋ ಸ್ಟೇಷನ್ ಗಳು ಬರುತ್ತವೆ. 2017 ರಲ್ಲಿ ಕಾಮಗಾರಿ ಪ್ರಾರಂಭಗೊಂಡಿದ್ದು, 2021ಕ್ಕೆ ಪೂರ್ಣ ಗೊಳಿಸುತ್ತೇವೆಂದು ಅಧಿಕಾರಿಗಳು ಹೇಳಿದ್ದರು. ಆದರೆ ಲ್ಯಾಂಡ್ ಅಕ್ವಜೇಷನ್, ಕೋರ್ಟ್ ಪ್ರಕರಣ, ಕೊವೀಡ್ ನಿಂದಾಗಿ ಕಾಮಗಾರಿ ವಿಳಂಬವಾಗಿದೆ. 2024 ರ ಫೆಬ್ರವರಿಯಲ್ಲಿ ಪೂರ್ಣಗೊಳಿಸುತ್ತೇವೆಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿಗೆ ಮೆಟ್ರೋ ಹಳದಿ ಮಾರ್ಗ ಸೇವೆಗೆ ನೀಡಲು ಕ್ರಮವಹಿಸಿ: ಸಂಸದ ತೇಜಸ್ವಿ ಸೂರ್ಯ
ಅಧಿಕಾರಿಗಳ ಜೊತೆ ನಾನೂ ಚರ್ಚೆ ಮಾಡುವ ಸಲುವಾಗಿ ಬೊಮ್ಮಸಂದ್ರದಿಂದ ಪರಿಶೀಲನೆಯನ್ನು ಮಾಡಲು ಪ್ರಾರಂಭಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ ಸೇರಿ ಪ್ರತಿಯೊಂದು ನಿಲ್ದಾಣವನ್ನು ಕೂಡ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು. ಬೊಮ್ಮಸಂದ್ರದಿಂದ ಆರ್.ವಿ.ರಸ್ತೆಯವರೆಗೆ 16 ಸ್ಟೇಷನ್ ಪೈಕಿ 15 ರಲ್ಲಿ 95% ರಷ್ಟು ಸಿವೀಲ್ ಕೆಲಸ ಪೂರ್ಣ ಆಗಿದೆ. ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಅವುಗಳನ್ನು ಕೂಡ ತ್ವರಿತವಾಗಿ ಅಧಿಕಾರಿಗಳು ಮಾಡುವುದಾಗಿ ಹೇಳಿದ್ದಾರೆ.
ಬೊಮ್ಮಸಂದ್ರ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದ್ದಾರೆ. ಇದನ್ನು ಕೂಡ ಮೇಲಿನ ಹಂತದ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದರು. ನವೆಂಬರ್‌ನಲ್ಲಿ ಟ್ರಯಲ್ ಟೆಸ್ಟ್ ಮಾಡಲು ತಯಾರಿ ನಡೆದಿದೆ ಎಂದು ಪರಿಶೀಲನೆಯ ವೇಳೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟೀಟಾಗರ್ ಕಂಪನಿಗೆ ಕಂಟ್ರಾಕ್ಟ್ ಪಡೆದಿದ್ದು ಮೊಲದು ಎರಡು ಟ್ರೇನ್ ಕೊಡುವುದಾಗಿ ಹೇಳಿದೆ ಎನ್ನುವುದಾಗಿ ತಿಳಿಸಿದ್ದು ಈ ಕಂಪನಿ ಯಾವ ರೀತಿ ಟ್ರೈನ್ ಸರಬರಾಜು ಮಾಡುತ್ತದೆ ಎನ್ನುವ ಮಾಹಿತಿಯನ್ನು ಕೂಡ ಪಡೆಯಲಾಗುವುದು ಎಂದರು.
ಅತ್ತಿಬೆಲೆವರೆಗೂ ವಿಸ್ತರಣೆ: ಮೆಟ್ರೋ ಪ್ರತಿ ಬಾರಿ ವಿಳಂಬ ಆಗುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತದೆ. ಈಗಾಗಲೇ ಬೊಮ್ಮಸಂದ್ರದವರೆಗೆ ಮೆಟ್ರೋ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಗಡಿ ಅತ್ತಿಬೆಲೆವರೆಗೂ ಮುಂದುವರೆಸಲು ಈಗಾಗಲೇ ಅಧಿಕಾರಿಗಳು ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಲೋಕಸಭೆಗೆ ಪತ್ನಿ ಡಾ.ಪ್ರಭಾ ಸ್ಪರ್ಧೆ ಚರ್ಚೆ ಆಗಿಲ್ಲ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ಏಷ್ಯಾದಲ್ಲೇ ಅತಿದೊಡ್ಡ ಸ್ಟೇಷನ್: ಇನ್ನು, ಜಯದೇವ ಬಳಿ ಏಷ್ಯಾದಲ್ಲೇ ಅತಿ ದೊಡ್ಡ ಮೆಟ್ರೋ ಸ್ಟೇಷನ್ ನಿರ್ಮಾಣ ಆಗುತ್ತಿದೆ. ಇಲ್ಲಿ ಶೇಕಡ 75ರಷ್ಟು ಕಾಮಗಾರಿ ಮುಗಿದಿದ್ದು ಉಳಿದ 25% ಕಾಮಗಾರಿಯನ್ನು ತೋರಿತವಾಗಿ ಮಾಡಬೇಕಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದರು.