Kolara Rains; ಕೋಡಿ ಬಿದ್ದ ತಲ್ಲೂರು ಕೆರೆ, ನಟ ಯಶ್ ಗೆ ಧನ್ಯವಾದ ಅರ್ಪಿಸಿದ ಜನತೆ
ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ಅಬ್ಬರಿಸಿದ್ದಾನೆ. ಪರಿಣಾಮ 2016 ರಲ್ಲಿ ನಾಯಕ ನಟ ಯಶ್ ತಮ್ಮ ಯಶೋ ಮಾರ್ಗ ಫೌಂಡೇಶನದ ಮೂಲಕ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯನ್ನು ಅಭಿವೃದ್ಧಿ ಪಡಿಸಿದ್ದ ಕೆರೆ ಕೋಡಿ ಬಿದ್ದಿದೆ.
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಸೆ.30): ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ಅಬ್ಬರಿಸಿದ್ದಾನೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. 2016 ರಲ್ಲಿ ನಾಯಕ ನಟ ಯಶ್ ತಮ್ಮ ಯಶೋ ಮಾರ್ಗ ಫೌಂಡೇಶನದ ಮೂಲಕ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯನ್ನು ಅಭಿವೃದ್ಧಿ ಪಡಿಸಿದ್ದರು. ಕೆರೆ ಅಭಿವೃದ್ಧಿ ಪಡಿಸಿದ ಮೊದಲನೇ ವರ್ಷವೇ ಕೆರೆ ತುಂಬಿತ್ತು. ಆದರೆ ನಿನ್ನೆ ಸುರಿದ ಭಾರೀ ಮಳೆಗೆ ಇದೇ ಮೊದಲ ಬಾರಿಗೆ ಕೆರೆಯಲ್ಲಿ ಕೊಡಿ ಬಿದ್ದಿದೆ. ಇದರಿಂದಾಗಿ ಸಹಜವಾಗಿಯೇ ಈ ಭಾಗದ ರೈತರು ಸಂತಸಗೊಂಡಿದ್ದು, ಯಶ್ ಗೆ ಧನ್ಯವಾದ ಅರ್ಪಿಸಿದ್ದಾರೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಮಳೆ ಹಿನ್ನಲೆಯಲ್ಲಿ ಜಿಲ್ಕೆಯ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಅದರಲ್ಲಿ ವಿಶೇಷವಾಗಿ ಕೊಪ್ಪಳ ತಾಲೂಕಿನ ಹುಲಿಗಿ ಮತ್ತು ಶಿವಪುರ್ ನಡುವಿನ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಅಂಜನಾದ್ರಿ ಹಾಗೂ ಹುಲಗಿ ನಡುವೆ ಸಂಪರ್ಕ ಸ್ಥಗಿತವಾಗಿದೆ. ಇನ್ನು ರಭಸವಾಗಿ ಹರಿಯುವ ಹಳ್ಳದಲ್ಲಿಯೇ ಜನರು ನಡೆದುಕೊಂಡು ಹಾಗೂ ಬೈಕ್ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.
12 ವರ್ಷಗಳ ಬಳಿಕ ತುಂಬಿದ ಕೆಂಪು ಕೆರೆ: ಇನ್ನು ಯಲಬುರ್ಗಾ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಕೆಂಪು ಕೆರೆ ಸಹ ನಿನ್ನೆಯ ಮಳೆಗೆ ಭರ್ತಿಯಾಗಿದೆ.ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಇ ಕೆರೆಯನ್ನು ಅಭಿವೃದ್ದಿ ಮಾಡಲಾಗಿತ್ತು.ಕಳೆದ 12 ವರ್ಷಗಳ ಹಿಂದೆ ಕೆಂಪು ಕೆರೆ ತುಂಬಿತ್ತು.ಅದಾದ ಬಳಿಕ 12 ವರ್ಷಗಳ ಬಳಿಕ ಇದೇ ಮೊದಲನೇ ಬಾರಿಗೆ ಕೆಂಪು ಕೆರೆ ತುಂಬಿ ಕೊಡಿ ಬಿದ್ದಿದೆ.ಇದರಿಂದಾಗಿ ಸಹಜವಾಗಿಯೇ ರೈತರು ಸಂತಸಗೊಂಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ 15 ದಿನಗಳ ಹಿಂದೆ ಸುರಿದಿದ್ದ ಮಳೆಯೇ ರೈತರಿಗೆ ಸಾಕಾಗಿ ಹೋಗಿತ್ತು. ಇದೀಗ ಮತ್ತೇ ಮಳೆ ಆರಂಭವಾಗಿರುವುದು ಸಹಜವಾಗಿಯೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನಾದರೂ ಮಳೆರಾಯ ನಿನ್ನ ರುದ್ರನರ್ತನ ನಿಲ್ಲಿಸಪ್ಪಾ ಎಂದು ಮಳೆರಾಯನಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು ಅಂತು ಸತ್ಯ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು, ನಾಳೆ ಮಳೆ ಸಂಭವ
ಬೆಂಗಳೂರು: ಕಳೆದ ಕೆಲ ದಿನಗಳಿಂದ ಅಬ್ಬರ ಕಳೆದುಕೊಂಡಿದ್ದ ಮುಂಗಾರು ಮತ್ತೆ ಬಿರುಸು ಪಡೆದುಕೊಳ್ಳುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಕೇಂದ್ರ ನೀಡಿದೆ.
ಶುಕ್ರವಾರ ಬೆಳಗ್ಗೆ 8.30ರ ತನಕ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ರಾಯಚೂರು, ದಾವಣಗೆರೆ, ರಾಮನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಚ್’ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ 8.30ರಿಂದ ಶನಿವಾರದವರೆಗೆ ಶಿವಮೊಗ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು, ಬಾಗಲಕೋಟೆ, ಧಾರವಾಡ ಜಿಲ್ಲೆಗೆ ‘ಯೆಲ್ಲೋ ಅಲರ್ಚ್’ ಎಚ್ಚರಿಕೆ ನೀಡಲಾಗಿದೆ.
Bengaluru: ಇನ್ನೂ 1051 ರಸ್ತೆ ಗುಂಡಿ ಭರ್ತಿ ಬಾಕಿ: ತ್ವರಿತವಾಗಿ ಮುಚ್ಚುವಂತೆ ರಾಕೇಶ್ ಸಿಂಗ್ ಸೂಚನೆ
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ನೈಋುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು. ಒಳನಾಡಿನ ಕೆಲವೆಡೆ ಮಳೆಯಾಗಿದ್ದರೆ ಕರಾವಳಿಯಲ್ಲಿ ಒಣಹವೆಯಿತ್ತು.
Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು
ಯಾದಗಿರಿಯ ಕಕ್ಕೆರಿಯಲ್ಲಿ 3 ಸೆಂ.ಮೀ., ಬೀದರ್‌ನ ಹಲಬರ್ಗ 2, ರಾಯಚೂರಿನ ಮಾನ್ವಿ, ಮುದ್ಗಲ್, ಬೀದರ್‌ನ ಹುಮ್ನಾಬಾದ್, ಹಳ್ಳಿಖೇಡ್, ಕಲಬುರಗಿಯ ಚಿಂಚೋಳಿಯಲ್ಲಿ ತಲಾ ಒಂದು ಸೆಂ. ಮೀ. ಮಳೆಯಾಗಿದೆ.