ತೀರ್ಥಹಳ್ಳಿ ಗರ್ಭಿಣಿ ನರ್ಸ್ ರೂಪಾಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಸಿಎಂ
ಗರ್ಭಧಾರಣೆ ಎನ್ನುವುದು ಮಹಿಳೆಗೆ ಒಂದು ಕನಸು ನನಸಾಗುವ ಕಾಲ. ಗರ್ಭದಲ್ಲಿರುವ ಮಗು ಯಾವಾಗ ಭೂಮಿ ಮೇಲೆ ಬರುವುದು ಎಂದು ಆಕೆ ಕಾಯುತ್ತಾ ಇರುವಳು. ಹೀಗಾಗಿ ಗರ್ಭಧಾರಣೆಯ ಆ 9 ತಿಂಗಳು ತುಂಬಾ ಕಠಿಣವಾಗಿರುವುದು. ಗರ್ಭಧಾರಣೆ ವೇಳೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಇಂತಹ ಸಂದರ್ಭದಲ್ಲಿ 9 ತಿಂಗಳ ತುಂಬು ಗರ್ಭಿಣಿಯಾಗಿರುವ ವೈದ್ಯಕೀಯ ಸಿಬ್ಬಂದಿಯೊಬ್ಬರು ತಮ್ಮ ಕಷ್ಟ-ನೋವುಗಳುನ್ನು ಬದಿಗಿಟ್ಟು ನಿರಂತರವಾಗಿ ಜನರ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದಾರೆ. ಅದು ಕೊರೋನಾ ಎನ್ನುವ ಹೆಮ್ಮಾರಿ ಮಧ್ಯೆ
ಈ ಕೊರೋನಾ ಭೀತಿಯ ನಡುವೆಯೇ 9ತಿಂಗ್ಳು ಗರ್ಭಿಣಿಯಾಗಿರುವ ಈ ವೈದ್ಯಕೀಯ ಸಿಬ್ಬಂದಿ ತಮ್ಮ ಸಂಕಷ್ಟವನ್ನೆಲ್ಲ ಮರೆತು ಜನಸೇವೆಯೇ ಜನಾರ್ಧನ ಸೇವೆ ಎನ್ನುವಂತೆ ರೋಗಿಗಳ ಸೇವೆ ಮತ್ತು ಅವರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಎಂಬ ಮಾಹಾಮಾರಿಗೆ ಹೆದರಿ ಜನರು ರಸ್ತೆಗಿಳಿಯಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಈ ಕೊರೋನಾ ವಾರಿಯರ್, ತಾವು ತುಂಬು ಗರ್ಭಿಣಿ ಎಂಬುದನ್ನು ಮರೆತು ತಮಗಾಗುವ ಆಯಾಸವನ್ನೆಲ್ಲಾ ಬದಿಗಿಟ್ಟು, ಜನರ ಆರೋಗ್ಯ ಸೇವೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ಇವರ ಹೆಸರು ರೂಪ ಅಂತ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯೊಬ್ಬರು ರೋಗಿಗಳ ಆರೈಕೆ ಮಾಡುತ್ತಿದ್ದಾರೆ.
ಇವರು ಶಿವಮೊಗ್ಗದ ಗಾಜನೂರು ಗ್ರಾಮದಿಂದ ಸುಮಾರು 60 ಕಿ.ಮೀ. ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್ಸಿನಲ್ಲೇ ಪಯಾಣಿಸಿ, ಸೇವೆ ಮಾಡುತ್ತಿದ್ದಾರೆ.
ಒಂಭತ್ತು ತಿಂಗಳು ಗರ್ಭಿಣಿಯಾಗಿದ್ರೂ ಪ್ರತಿದಿನ ಸುಮಾರು 120 ಕಿ.ಮೀ. ಪ್ರಯಾಣ ಮಾಡುವ ಇವರು ಕೊರೋನಾ ವಾರಿಯರ್ ಏನು ಎನ್ನವುದನ್ನು ತೋರಿಸಿಕೊಟ್ಟಿದ್ದಾರೆ.
ಹ್ಯಾಟ್ಸಾಫ್ ಕೊರೋನಾ ವಾರಿಯರ್, 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ನಿಮ್ಮ ಸೇವೆಗೊಂದು ಸೆಲ್ಯೂಟ್...