ಮೈಸೂರು(ಡಿ.31): ಮೈಸೂರಿನಲ್ಲಿ ವರ್ಷಾಂತ್ಯ ಕಳೆಯುವುದಕ್ಕೆ ಹಾಗೂ ಹೊಸ ವರ್ಷ ಸ್ವಾಗತಿಸುವುದಕ್ಕೆ ಸಾವಿರಾರು ಮಂದಿ ಆಗಮಿಸಿದ್ದಾರೆ. ಇಯರ್‌ ಎಂಡ್‌ ಜೋಶ್‌ನಲ್ಲಿರುವ ಮೈಸೂರಿನಲ್ಲಿ ಈಗಾಗಲೇ ಶೇ. 90ರಷ್ಟು ಹೋಟೆಲ್‌ಗಳೂ ಬುಕ್ ಆಗಿವೆ.

ಮೈಸೂರಿನಲ್ಲಿ ಇಯರ್​ ಎಂಡ್ ಜೋಷ್ ಹೆಚ್ಚಿದ್ದು, ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟದಲ್ಲಿ ಜನಜಂಗುಳಿ ಹೆಚ್ಚಾಗಿದೆ.

ಸಾ.ರಾ. ಹೇಳಿದವರಿಗೆ ಎಚ್‌ಡಿಕೆ ಪಟ್ಟ : ಜಿಟಿಡಿ ಹೊಸ ಬಾಂಬ್

ವರ್ಷಾಂತ್ಯ ಸವಿಯಲು ಸಾಂಸ್ಕೃತಿಕ ನಗರಕ್ಕೆ ಆಗಮಿಸಿರುವ ಪ್ರವಾಸಿಗರು ಅರಮನೆ ಅಂಗಳದಲ್ಲಿ ಮಾಗಿ ಉತ್ಸವದ ರಂಗು ಕಣ್ತುಂಬಿಕೊಂಡಿದ್ದಾರೆ. ಫಲ ಪುಷ್ಪ ಪ್ರದರ್ಶನವೂ ನಡೆಯುತ್ತಿದ್ದು ಇದೂ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವೀಕ್ಷಣೆಗಾಗಿ ಜನ ಮುಗಿಬೀಳುತ್ತಿದ್ದಾರೆ. ಮೈಸೂರಿನ ಶೇ.90ರಷ್ಟು ಹೋಟೆಲ್​ಗಳು ಬುಕ್ ಆಗಿದ್ದು, ಪ್ರವಾಸೋದ್ಯಮ ವಹಿವಾಟುಗಳು ಉತ್ತುಂಗದಲ್ಲಿದೆ.

ಮೈಸೂರಿನಲ್ಲಿ ಮತ್ತೆ ರಂಗೇರಿದೆ ಚುನಾವಣಾ ಅಖಾಡ : ಸಾ ರಾ ಮಹೇಶ್ ಮಹತ್ವವ ಮೀಟಿಂಗ್