ಮೈಸೂರು [ಡಿ.28]:  ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಜೆಡಿಎಸ್‌ ವರಿಷ್ಠರ ವಿರುದ್ಧ ಅಸಮಾಧಾನ ಮುಂದುವರೆಸಿದ್ದಾರೆ. ಇಲ್ಲಿಯ ತನಕ ಮೈಸೂರಿನಲ್ಲಿ ನಡೆದ ಮೇಯರ್‌ ಚುನಾವಣೆಯಲ್ಲಿ ಯಾವತ್ತೂ ನನ್ನನ್ನು ಪರಿಗಣಿಸಿಲ್ಲ. 

ಮಾಜಿ ಸಚಿವ ಸಾ.ರಾ. ಮಹೇಶ್‌ ಹೇಳಿದವರನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೇಯರ್‌ ಅಥವಾ ಉಪಮೇಯರ್‌ ಮಾಡಿದ್ದಾರೆ. ಹೀಗಾಗಿ ಹೈಕಮಾಂಡ್‌ ಯಾರಿಗೆ ವೋಟ್‌ ಹಾಕಿ ಅನ್ನುತ್ತೋ ಅವರಿಗೆ ನಾನು ವೋಟ್‌ ಹಾಕುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಗೆ ಈಗಾಗಲೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪಕ್ಷದ ಹೈಕಮಾಂಡ್‌ ಯಾರನ್ನು ಆಯ್ಕೆ ಮಾಡುತ್ತದೋ ಅವರಿಗೆ ವೋಟ್‌ ಹಾಕುತ್ತೇನೆ. ಮತ ಚಲಾಯಿಸಲು ಹಕ್ಕುಳ್ಳ ಸದಸ್ಯ ಅಷ್ಟೇ. ನನ್ನ ಬಳಿ ಯಾರೂ ಬಂದಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಲ್ಲ ನಾನು ಉಸ್ತುವಾರಿ ಸಚಿವನಾಗಿದ್ದಾಗಲೂ ನನ್ನನ್ನು ಯಾರೂ ಪರಿಗಣಿಸಿಲ್ಲ. ನನ್ನ ಹತ್ತಿರ ಬಂದ ಕೆ.ಟಿ. ಚಲುವೇಗೌಡರನ್ನು ಮೇಯರ್‌ ಮಾಡಿ ಅಂತ ಹೇಳಿದ್ದೆ. ಆದು ಆಯಿತಾ? ಸಾ.ರಾ. ಮಹೇಶ್‌ ಹೇಳಿದವರಿಗೆ ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.