ಸರ್ಕಾರದಿಂದ ಪಂಚಮಸಾಲಿ 2ಎ ಮೀಸಲಾತಿ ಭರವಸೆ ಸಿಕ್ಕಲ್ಲಿ ಹೋರಾಟ ಮುಂದೆ ಹಾಕುತ್ತೇವೆ ಪಂಚಮಸಾಲಿ ಹೋರಾಟ ಹೋರಾಟದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್‌  

ಗದಗ (ಸೆ.27) : ಸರ್ಕಾರದಿಂದ ಪಂಚಮಸಾಲಿ (Panchamasali) 2ಎ ಮೀಸಲಾತಿ ಭರವಸೆ ಸಿಕ್ಕಲ್ಲಿ ಹೋರಾಟ ಮುಂದೆ ಹಾಕುತ್ತೇವೆ ಎಂದು ಹೋರಾಟದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್‌ (Basanagouda patil yatnal ) ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ಟೋಬರ್‌ ಒಂದರಂದು ನಡೆಯಲಿರುವ ಹೋರಾಟದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಪಂಚಮಸಾಲಿ ಪಂಚಾಯತ್‌ ನಂತರ ಅ.1ಕ್ಕೆ ಬೆಂಗಳೂರಿನಲ್ಲಿ(Bengaluru) ಹೋರಾಟ ನಡೆಯಲಿದೆ. 

ಮೊದಲ ಬಾರಿಗೆ ಯಡಿಯೂರಪ್ಪಗೆ ಜೈ ಎಂದ ಯತ್ನಾಳ್‌..!

ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಈಗಾಗಲೇ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ಭರವಸೆ ಸಿಕ್ಕಲ್ಲಿ ಹೋರಾಟ ಮುಂದೂಡಲಾಗುವುದು. ನಾವು ಒಂದನೇ ತಾರೀಕು ಹೋರಾಟ ಮಾಡ್ತೀವಿ ಅಂತ ಹಟ ಹಿಡಿದಿಲ್ಲ. ಕಾಲಮಿತಿಯಲ್ಲಿ ಕೆಲಸ ಆಗುವುದಿಲ್ಲ ಎನ್ನುವುದು ಗೊತ್ತಿದೆ. ಸಿ.ಸಿ. ಪಾಟೀಲ, ಮುಖ್ಯಮಂತ್ರಿ ಮೇಲೆ ವಿಶ್ವಾಸವಿದೆ ಎಂದರು.

ಸ್ವಾಮೀಜಿ ಡೆಡ್ ಲೈನ್ : 

ಮೀಸಲಾತಿ ಹೋರಾಟವನನ್ನ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಅಕ್ಟೋಬರ್ 1ರಂದು ಸರ್ಕಾರದಿಂದ ಸಂದೇಶ ಬರದಿದ್ದರೆ ಮತ್ತೆ ಧರಣಿ ನಡೆಸಲಿದ್ದೇವೆ ಅಂತ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಹೇಳಿದ್ದಾರೆ. 

ಮೀಸಲಾತಿ ಸಿಗುವರೆಗೂ ಹೋರಾಟ ನಿಲ್ಲದು: ಜಯಮೃತ್ಯುಂಜಯ ಸ್ವಾಮೀಜಿ

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಅ. 1ರಂದು ಬೆಂಗಳೂರಿನಲ್ಲಿ ಸತ್ಯಾಗ್ರಹವನ್ನ ನಡೆಸುತ್ತೇವೆ. ಈ ಹಿನ್ನೆಲೆಯಲ್ಲಿ ಸಚಿವ ಸಿ.ಸಿ. ಪಾಟೀಲ, ಶಾಸಕ ಬಸನಗೌಡ ಯತ್ನಾಳ, ವಿಜಯಾನಂದ ಕಾಶಪ್ಪನವರ್ ಮಾತನಾಡಲಿದ್ದಾರೆ. ಉಳಿದ ರಾಜಕಾರಣಿಗಳ ಮೇಲೆ ನಮಗೆ ನಂಬಿಕೆ ಇಲ್ಲ‌.‌ ಯತ್ನಾಳ್, ಸಿ.ಸಿ. ಪಾಟೀಲರ ಮೇಲೆ ನಂಬಿಕೆ ಇದೆ‌ ಅಂತ ತಿಳಿಸಿದ್ದಾರೆ. 

ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಎರಡು ಸುತ್ತು ಮಾತಾಡಿದ್ದು ಭರವಸೆ ಮೂಡಿದೆ. ನಮ್ಮ ಹೋರಾಟ ಬೆಂಗಳೂರು ತಲಪುವವರೆಗೆ ಸಂದೇಶದ ನಿರೀಕ್ಷೆಯಲ್ಲಿದ್ದೇವೆ‌. ಇವತ್ತು ಸಂಜೆಯೊಳಗೆ ಸಿಎಂ ಜೊತೆ ಸಮಾಜದ ನಾಯಕರು ಚರ್ಚೆ ಮಾಡಲಿದ್ದಾರೆ. ಇನ್ನೂ ಎರಡು ಮೂರು ದಿನ ಟೈಮ್ ಇದೆ. ಮೀಸಲಾತಿ ಘೋಷಣೆ ಮಾಡಿದ್ರೆ ಸಿಎಂಗೆ ಅಭಿನಂದಿಸುತ್ತೇವೆ. ಇಲ್ಲದಿದ್ದರೆ ಮತ್ತೆ ನಮ್ಮ ಹೋರಾಟ ಮುಂದುವರಿಸುತ್ತೇವೆ ಅಂತ ಹೇಳಿದ್ದಾರೆ. 

ಅ.1 ರೊಳಗಾಗಿ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು

ಕಾನೂನಾತ್ಮಕ ಚಿಂತನೆಗಳಿದ್ರೆ ಮತ್ತೊಂದು ಸುತ್ತಿನ ಮಾತುಕಥೆ ನಡೆಸಲಿ. ಅ. 1 ರೊಳಗಾಗಿ ಸರ್ಕಾರ ಸ್ಪಷ್ಟವಾದ ಬಗ್ಗೆ ಉತ್ತರ ಕೊಡಬೇಕು. ಮುಖ್ಯಮಂತ್ರಿಗಳು ಗದಗಗಿಗೆ ಇಂದೇ ಬರಲಿದ್ದಾರೆ. ಅವರು ಭೇಟಿಯಾದ್ರೆ ಚರ್ಚೆ ಮಾಡ್ತೇನೆ. ಸಂಜೆಯೊಳಗಾಗಿ ಮುಖ್ಯಮಂತ್ರಿಗಳು ಭೇಟಿಯಾಗಬಹುದು. ಸಿಎಂ ಜೊತೆ ಯತ್ನಾಳ, ಸಿಸಿ ಪಾಟೀಲ ಮಾತನಾಡುತ್ತಾರೆ ಅಂತ ಶ್ರೀ ಹೇಳಿದ್ದಾರೆ.