Yashodhara Vaddar Death ಕೇರಳದ ಕೊಚ್ಚಿಯಲ್ಲಿ ನೌಕಾಪಡೆಯ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಹಾನಗಲ್ಲ ತಾಲೂಕಿನ ಉಪ್ಪುಣಸಿ ಗ್ರಾಮದ ಯೋಧರೊಬ್ಬರು ಗುಂಡು ತಗುಲಿ ಮೃತಪಟ್ಟಿದ್ದಾರೆ.
ಹಾನಗಲ್ಲ(ಹಾವೇರಿ) (ಜು.4): ಕೇರಳದ ಕೊಚ್ಚಿಯಲ್ಲಿ ನೌಕಾಪಡೆಯ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಹಾನಗಲ್ಲ ತಾಲೂಕಿನ ಉಪ್ಪುಣಸಿ ಗ್ರಾಮದ ಯೋಧರೊಬ್ಬರು ಗುಂಡು ತಗುಲಿ ಮೃತಪಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಶೋಧರ ವಡ್ಡರ (29)(Yashodhara Vaddar Death) ಮೃತ ಯೋಧ. ಅಂಡಮಾನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಯಶೋಧರ ಕಳೆದ 3 ತಿಂಗಳಿನಿಂದ ಕೊಚ್ಚಿಯಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಾಗಿ ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿದ್ದರು. 2016ರಲ್ಲಿ ಭಾರತೀಯ ನೌಕಾಪಡೆಯ ಯೋಧರಾಗಿ ಯಶೋಧರ ನೇಮಕಗೊಂಡಿದ್ದರು.
ಇದನ್ನೂ ಓದಿ: ಮೌಂಟ್ ಎವರೆಸ್ಟ್‌ನಲ್ಲಿ ಯೋಧನ 'ಗ್ರೀನ್ ಬೂಟ್' ರಹಸ್ಯ ಬಯಲು; ಪರ್ವತಾರೋಹಿಗಳ ದಿಕ್ಸೂಚಿಗೆ 30 ವರ್ಷದ ಬಳಿಕ ಮುಕ್ತಿ!
ಕರ್ತವ್ಯ ನಿರ್ವಹಣೆ ವೇಳೆ ಯೋಧ ಯಶೋಧರ ಗುಂಡು ತಾಗಿ ಮೃತಪಟ್ಟಿದ್ದಾರೆ.ಉಪ್ಪುಣಸಿಗೆ ಯೋಧನ ಪಾರ್ಥೀವ ಶರೀರ ಶನಿವಾರ ಆಗಮಿಸಲಿದೆ. ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರಕ್ಕಾಗಿ ಎಲ್ಲ ಸಿದ್ಧತೆ ನಡೆದಿದೆ.


