ಮೈಸೂರು(ನ.26): ಕರಾವಳಿಯ ಪ್ರಸಿದ್ಧ ಯಕ್ಷಗಾನ ಕಲೆಯಲ್ಲಿ ಪ್ರಧಾನಿ ಮೋದಿ ಅವರು ಜೀವನ ಯಶೋಗಾಥೆ ಮೂಡಿ ಬರಲಿದೆ. ಇದೊಂದು ಹೊಸ ಪ್ರಯತ್ನವಾಗಿದ್ದು, ಮೋದಿ ಯಕ್ಷಗಾನ ಕಥಾ ಪ್ರಸಂಗವಾದ ನರೇಂದ್ರ ವಿಜಯ ಕೃತಿ ಬಿಡುಗಡೆಯಾಗಿದೆ.

ಯಕ್ಷಗಾನದಲ್ಲಿ ಪ್ರಧಾನಿ ಮೋದಿ ಯಶೋಗಾಥೆ ಪ್ರಸ್ತುತವಾಗಲಿದ್ದು, ಮೋದಿ ಜೀವನಕ್ಕೆ ಯಕ್ಷಗಾನ ರೂಪ ದೊರೆಯಲಿದೆ. ಮೋದಿ ಯಕ್ಷಗಾನ ಕಥಾ ಪ್ರಸಂಗವಾದ
ನರೇಂದ್ರ ವಿಜಯ ಪುಸ್ತಕವನ್ನು ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದಾರೆ.

'ಕಟೀಲು ಕಲಾವಿದರ ಮೇಲೆ ದಬ್ಬಾಳಿಕೆ, ಸುಳ್ಳು ಹೇಳೋದು ಅಸ್ರಣ್ಣರಿಗೆ ಶಿಸ್ತೇ'..?

ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರೀ ಅವರು ಈ ಕೃತಿ ರಚಿಸಿದ್ದು, ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಹುಣಸೂರು ಬಿಜೆಪಿ ಅಭ್ಯರ್ಥಿ ಅಡಗೂರು ವಿಶ್ವನಾಥ್, ಶಾಸಕ ನಾಗೇಂದ್ರ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ.

ಪಟ್ಲ ಸತೀಶ್‌ ವಜಾಕ್ಕೆ ಕಾರಣ ಕೊಟ್ಟ ಕಟೀಲು ಮೇಳ ಸಂಚಾಲಕ, ಹೇಳಿದ್ದೇನು..?