Asianet Suvarna News Asianet Suvarna News

ಮಂಗಳೂರಲ್ಲಿ ಮೋದಿ ಕುರಿತ ಯಕ್ಷಗಾನ ಪ್ರದರ್ಶನ : ಏನಿತ್ತು ಕಥೆಯಲ್ಲಿ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಕಾಲ್ಪನಿಕ ಕಥೆಯನ್ನೊಳಗೊಂಡ ‘ನರೇಂದ್ರ ವಿಜಯ’ ಯಕ್ಷಗಾನ ಇದೀಗ ಪ್ರಥಮ ಪ್ರದರ್ಶನ ಕಂಡಿದೆ. 
 

Yakshagana play on PM Narendra Modi in Mangaluru
Author
Bengaluru, First Published Jan 6, 2020, 9:06 AM IST

ಮಂಗಳೂರು [ಜ.06]: ಇತ್ತೀಚೆಗಷ್ಟೇ ಮೈಸೂರಿನಲ್ಲಿ ಬಿಡುಗಡೆಯಾಗಿ ರಾಜ್ಯದ ಗಮನ ಸೆಳೆದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಕಾಲ್ಪನಿಕ ಕಥೆಯನ್ನೊಳಗೊಂಡ ‘ನರೇಂದ್ರ ವಿಜಯ’ ಯಕ್ಷಗಾನ ಇದೀಗ ಪ್ರಥಮ ಪ್ರದರ್ಶನ ಕಂಡಿದೆ. 

ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರಿ ಮತ್ತು ಬಳಗ, ಗಾಯತ್ರಿ ಯಕ್ಷಗಾನ ಮಂಡಳಿ ನಗರದ ಟಿ.ವಿ.ರಮಣರೈ ಸಭಾಂಗಣದಲ್ಲಿ ಭಾನುವಾರ ಯಕ್ಷಗಾನ ಪ್ರದರ್ಶನ ನೀಡಿತು.

ಮೋದಿ ಭಾಷಣದ 'ತಮಾಷೆ ಪೆಟ್ಟಿಗೆ' ಕತೆ ಹೇಳಿದ ಸಿದ್ದರಾಮಯ್ಯ...

‘ನರೇಂದ್ರ ವಿಜಯ’ ಪುಸ್ತಕವನ್ನು ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರಿ ಬರೆದಿದ್ದಾರೆ. ಅದರಲ್ಲಿ ನರೇಂದ್ರ ಮೋದಿಯವರ ಬಾಲ್ಯ, ಜೀವನ ಶೈಲಿ, ರಾಜಕೀಯ ಹಿನ್ನೆಲೆ ಸೇರಿದಂತೆ ಅವರ ಬದುಕಿನ ಹಲವು ಘಟ್ಟಗಳು ಪ್ರಸ್ತಾಪವಾಗಿವೆ. 

ದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿ 4 ಮಂತ್ರ...

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕುರಿತಾಗಿಯೂ ಪ್ರಸಂಗದಲ್ಲಿ ವಿಶೇಷ ಪಾತ್ರ ಚಿತ್ರಣವಿತ್ತು. ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ನಡೆದ ಪಲ್ಲಟಗಳು, ನೋಟು ಅಮಾನ್ಯ ಹಾಗೂ ಪರಿಣಾಮ, ಸರ್ಜಿಕಲ್‌ ಸ್ಟ್ರೈಕ್ ಮೊದಲಾದ ವಿಚಾರಗಳೂ ಯಕ್ಷಗಾನದಲ್ಲಿ ಪ್ರಸ್ತಾಪಗೊಂಡವು.

Follow Us:
Download App:
  • android
  • ios