Dilip Suvarna Passes Away: ಯಕ್ಷಗಾನ ಸಂಘಟಕ ದಿಲೀಪ್ ಸುವರ್ಣ ನಿಧನ
ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ವ್ಯವಸ್ಥಾಪಕ, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ಮೇಳ ದಿಲೀಪ್ ಸುವರ್ಣ ಕಡಂಬೋಡಿ (63) ಮೇ 1ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮೂಲ್ಕಿ (ಜೂ.04): ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ವ್ಯವಸ್ಥಾಪಕ, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ಮೇಳ ಹಾಗೂ ಕಾಟಿಪಳ್ಳ ಮೇಳದ ಸಂಚಾಲಕರಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ದಿಲೀಪ್ ಸುವರ್ಣ ಕಡಂಬೋಡಿ (63) ಮೇ 1ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ದಿಲೀಪ ಸುವರ್ಣರು ತುಳು ಪ್ರಸಂಗಗಳಲ್ಲಿ ದೈವಗಳ ಪಾತ್ರ ನಿರ್ವಹಣೆಯಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದು, ಶಾಲಾ ವಾಹನ, ಬಸ್ಸು ಮಾಲೀಕರಾಗಿದ್ದು ಯಕ್ಷಗಾನದ ಸೆಳೆತದಿಂದ ಆರ್ಥಿಕವಾಗಿ ಸಂಕಷ್ತಕ್ಕೀಡಾಗಿದ್ದರು.
ಸ್ಯಾಂಡಲ್‌ವುಡ್ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ವಿಧಿವಶ: ಖ್ಯಾತ ಕಿರುತೆರೆ ಹಾಗೂ ಚಲನಚಿತ್ರ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ (56) ಅವರು ತೀವ್ರ ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದಾರೆ. ಎನ್.ಆರ್.ಕಾಲೋನಿಯ ರಾಮಲೀಲಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಮೋಹನ್ ಅವರು, ಸ್ನಾನದ ಕೋಣೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಸಮೀಪದ ರಂಗ ದೊರೈ ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
Bhajan Sopori Passed Away: ಸಂತೂರ್ ಮಾಂತ್ರಿಕ ಪಂಡಿತ್ ಭಜನ್ ಸೊಪೋರಿ ವಿಧಿವಶ
ಮೃತನ ಮೋಹನ್ ಕುಮಾರ್ ಅವರು ಖ್ಯಾತ ನಿರೂಪಕಿ ಹಾಗೂ ನಟಿ ವತ್ಸಲಾ ಮೋಹನ್ ಅವರ ಪತಿ. ಸಿನಿಮಾಟೋಗ್ರಾಫರ್ ಆಗಿಯೂ ಬಹಳ ಅಮೂಲ್ಯವಾದ ಕೆಲಸಗಳನ್ನು ಮಾಡುತ್ತಾ ಬಂದ ಮೋಹನ್ ಅವರು, ತಮ್ಮ ಮಕ್ಕಳ ಸಿನಿಮಾ ಬೊಂಬೆಯಾಟಕ್ಕೆ ಪ್ರಶಸ್ತಿಯನ್ನೂ ಪಡೆದಿದ್ದರು. ನಾಟಕ ರಂಗದಲ್ಲಿ ಮೋಹನ್ ಅವರದು ಬಹಳ ಸಕ್ರಿಯ ಪಾತ್ರ. ಮೃತರು ಸಹೋದ್ಯೋಗಿಗಳು, ಅಭಿಮಾನಿಗಳು, ಸ್ನೇಹಿತರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Singer KK ಸಂಗೀತ ಕಾರ್ಯಕ್ರಮ ನೀಡಿದ ಬೆನ್ನಲ್ಲೇ ಖ್ಯಾತ ಬಾಲಿವುಡ್ ಗಾಯಕ ಕೆಕೆ ನಿಧನ
ನಿರ್ಮಾಪಕ ಆನೇಕಲ್ ಬಾಲರಾಜ್ ಇನ್ನಿಲ್ಲ: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ಇಂದು ಬೆಳಗ್ಗೆ ವಾಕಿಂಗ್‌ಗೆ ತೆರಳುವಾಗಿ ವಾಹನವೊಂದು ಹಿಂದಿನಿಂದ ತಾಕಿ ಪುಟ್ ಪಾತ್‌ಗೆ ತಲೆ ತಾಕಿದೆ. ತಕ್ಷಣವೇ ಹತ್ತಿರವಿದ್ದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾರೆ. 58 ವರ್ಷ ಆನೇಕಲ್ ಬಾಲರಾಜ್ ಅವರು ಜೆಪಿ ನಗರದಲ್ಲಿ ವಾಸವಿದ್ದರು. ದಿನ ಬೆಳಗ್ಗೆ ವಾಕಿಂಗ್ ಮಾಡುವ ಅಭ್ಯಾಸ ಇರುವುದರಿಂದ ಇಂದು ಕೂಡ ವಾಕಿಂಗ್‌ಗೆ ಹೋಗಿದರು. ಆದರೆ ಹಿಂದಿನಿಂದ ವಾಹನವೊಂದು ಡಿಕ್ಕೆ ಹೊಡೆದಿದೆ. ಬಾಲರಾಜ್ ಅವರು ಪುಟ್ ಪಾತ್ ಮೇಲೆ ಬಿದ್ದಿದ್ದಾರೆ, ತಲೆಗೆ ಪೆಟ್ಟು ಬಿದ್ದಿರುವ ಕಾರಣ ನಿಧನರಾಗಿದ್ದಾರೆ.