ಎರಡು ಕಾರು ಮುಖಾಮುಖಿ ಡಿಕ್ಕಿ: ಐವರು ಸಾವು, ಇಬ್ಬರಿಗೆ ಗಂಭೀರ ಗಾಯ
ಯಾದಗಿರಿಯಿಂದ ತೆಲಂಗಾಣಕ್ಕೆ ಹೋಗಿದ್ದವರ ಕಾರು ಮುಕ್ತಲ್ ಗ್ರಾಮದ ಬಳಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಯಾದಗಿರಿಯ ಮೂವರು ಸೇರಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಯಾದಗಿರಿ (ಡಿ.24): ಯಾದಗಿರಿಯಿಂದ ತೆಲಂಗಾಣಕ್ಕೆ ಹೋದವರ ಕಾರು ಮುಕ್ತಲ್ ಎಂಬ ಗ್ರಾಮದ ಬಳಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಯಾದಗಿರಿಯ ಮೂವರು ಹಾಗೂ ಎದುರಿಗೆ ಬಂದ ಕಾರಿನೊಳಗಿದ್ದ ಮಹರಾಷ್ಟ್ರ ಮೂಲದ ತಾಯಿ-ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲೂಕಿನ ಜಕ್ಲೆರ್ ಗ್ರಾಮದ ಬಳಿ ಘಟನೆ ನಡೆದಿದೆ. ಎರಡು ಕಾರು ಮುಖಾಮುಖಿ ಡಿಕ್ಕಿ 5 ಜನ ಸಾವನ್ನಪ್ಪಿದ್ದಾರೆ. ಜೊತೆಗೆ, ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯ ಮಕ್ತಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರ ಪೈಕಿ ಮೂವರು ಯಾದಗಿರಿ ಜಿಲ್ಲೆಯವರಾಗಿದ್ದಾರೆ. ಯಾದಗಿರಿ ತಾಲೂಕಿನ ಸೈದಾಪುರ ಗ್ರಾಮದ ಮೌಲಾಲಿ, ಖಲೀಲ್ ಹಾಗೂ ಬಸಮ್ಮ ಮೃತರಾಗಿದ್ದಾರೆ. ಎದುರುಗಡೆಯಿಂದ ಬಂದು ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಮಹಾರಾಷ್ಟ್ರ ಮೂಲದ ತಾಯಿ ಪ್ರಬೀತಾ ಹಾಗೂ ಆಕೆಯ ಮಗಳು ಅಸ್ಮಿತಾ (7) ಮೃತಪಟ್ಟಿದ್ದಾರೆ.
ಹವಾಮಾನ ಮುನ್ಸೂಚನೆ: ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಳಿದ ತಾಪಮಾನ, ಬೆಂಗಳೂರು ಎಷ್ಟಿದೆ ಗೊತ್ತಾ?
ಇನ್ನು ಘಟನಾ ಸ್ಥಳಕ್ಕೆ ತೇಲಂಗಾಣದ ಮಕ್ತಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಾರುಗಳು ಡಿಕ್ಕಿ ಹೊಡೆದ ರಭಸಕ್ಕೆ ಸಂಪೂರ್ಣ ಜಖಂ ಆಗಿದ್ದವು. ಇನ್ನು ಕಾರಿನಲ್ಲಿದ್ದವರ ದೇಹಗಳು ಕೂಡ ಚಿದ್ರಗೊಂಡಿದ್ದು, ಅವರನ್ನು ಕಾರಿನಿಂದ ಹೊರಗೆ ತೆಗೆಯುವ ಮೊದಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇನ್ನು ತೀವ್ರ ಗಾಯಗೊಂಡು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಮನಿ ಡಬ್ಲಿಂಗ್ ಮೋಸದ ಜಾಲಕ್ಕೆ ಸಿಲುಕಿ 21 ಲಕ್ಷ ಕಳ್ಕೊಂಡ ಮಹಿಳೆ:
ದಕ್ಷಿಣ ಕನ್ನಡ (ಡಿ.24): ಹಣ ದ್ವಿಗುಣಗೊಳಿಸುವ ಆ್ಯಪ್‌ಗೆ 21 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿ ವಂಚನೆಗೊಳಗಾಗಿ ಬಂಟ್ವಾಳದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶಗಳನ್ನು ನಂಬಿಕೊಂಡು ಮೋಸ ಹೋಗುವವರ ಸಂಖ್ಯೆ ತೀವ್ರ ಹೆಚ್ಚಾಗುತ್ತಿದೆ. ಸೈಬರ್ ಕ್ರೈಂ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನರು ಮೋಸಕ್ಕೆ ಸಿಲುಕಿ ಹಣ ಕಳೆದುಕೊಳ್ಳುವ ಜೊತೆಗೆ ಕೆಲವರು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ಬ ಮಹಿಳೆಯೂ ಕೂಡ ಹಣ ದ್ವಿಗುಣಗೊಳಿಸುವ ಆ್ಯಪ್‌ಗೆ ಹಣ ಹಾಕಿ ವಂಚನೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮನುವಾದಿ ರಾಜಕಾರಣಿ, ಅವರು ಪ್ರಧಾನಿಯಾಗುವುದನ್ನು ತಿರಸ್ಕರಿಸಿ: ನಟ ಅಹಿಂಸಾ ಚೇತನ್!
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಪುಚ್ಚಮೊಗರು ಎಂಬಲ್ಲಿ ಘಟನೆ ನಡೆದಿದೆ. ಆ್ಯಪ್‌ವೊಂದಕ್ಕೆ ಬರೋಬ್ಬರಿ 21 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ ಮಹಿಳೆ ತಾನು ಮೋಸ ಹೋಗಿರುವುದಾಗಿ ತಿಳಿದಾಗ, ಅಷ್ಟೊಂದು ಹಣವನ್ನು ಪುನಃ ಸಂಪಾದನೆ ಮಾಡಲು ಸಾಧ್ಯವಿಲ್ಲವೆಂದು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಲೆ ಎಂದು ತಿಳಿದುಬಂದಿದೆ.