ಹವಾಮಾನ ಮುನ್ಸೂಚನೆ: ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಳಿದ ತಾಪಮಾನ, ಬೆಂಗಳೂರು ಎಷ್ಟಿದೆ ಗೊತ್ತಾ?
ಕರ್ನಾಟಕದ ಬಯಲು ಸೀಮೆ ವಿಜಯಪುರದಲ್ಲಿ ಕಳೆದೆರಡು ದಿನಗಳಿಂದ 10 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು (ಡಿ.24): ರಾಜ್ಯದಲ್ಲಿ ಈ ವರ್ಷ ಮಳೆಗಾಲ ಮುಕ್ತಾಯವಾಗುತ್ತಿದ್ದಂತೆಯೇ ಭರ್ಜರಿ ಚಳಿಯೂ ಆರಂಭವಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಾದ ಉತ್ತರ ಕರ್ನಾಟಕದ ಬಯಲು ಸೀಮೆಗಳಲ್ಲಿ ಭಾರಿ ಚಳಿಯ ವಾತಾವರಣ ಬೀಳುತ್ತಿದೆ. ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಂದರೆ, ಸಾಮಾನ್ಯ ಜೀವನಕ್ಕೆ 27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅಗತ್ಯವಿದ್ದು, ಇದಕ್ಕಿಂತ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ತೀವ್ರ ಚಳಿಯಿಂದ ಬಳಲುವಂತಾಗಿದೆ.
ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಿಸಿಲಿನ ವಾತಾವರಣ ಇರಲಿದ್ದು ಶುಷ್ಕತೆಯೂ ಇರಲಿದೆ. ಆದರೆ, ಸಂಜೆಯಾಗುತ್ತಿದ್ದಂತೆ ಚಳಿ ಆರಂಭವಾಗಲಿದ್ದು, ಮಧ್ಯರಾತ್ರಿ 12 ಗಂಟೆಯಿಂದ ಚಳಿ ಹೆಚ್ಚಳವಾಗುತ್ತದೆ. ಬೆಳಗ್ಗಿನ ಜಾವ 3 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ತೀವ್ರ ಚಳಿಯ ಅನುಭವವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಎರಡು ದಿನಗಳಿಂದ ವಿಜಯಪುರದಲ್ಲಿ ಉಷ್ಣಾಂಶ ಭಾರಿ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ ಜನರು ಬೀದಿಗಳಲ್ಲಿ ಬೆಂಕಿಯನ್ನು ಹಾಕಿ ಕಾಯಿಸಿಕೊಳ್ಳಲು ಮುಂದಾಗಿದ್ದಾರೆ. ಇನ್ನು ಕೃಷಿ ಕಾರ್ಯಗಳಿಗೆ ಹೋಗುವ ರೈತರ ಸಮಯವೂ ತಡವಾಗುತ್ತಿದೆ.
ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯನ್ನು ತಿರಸ್ಕರಿಸಿ: ನಟ ಅಹಿಂಸಾ ಚೇತನ್!
ಮಳೆಯ ಮುನ್ಸೂಚನೆ ಇಲ್ಲ: 26ನೇ ಡಿಸೆಂಬರ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆಯನ್ನು ನೋಡಿದಾಗ ಮುಂದಿನ 48 ಗಂಟೆಗಳು ಅಂದರೆ ಎರಡು ದಿನಗಳ ಕಾಲ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಎಲ್ಲಿಯೂ ಮಳೆ ಮುನ್ನೆಚ್ಚರಿಕೆ ಕಂಡುಬಂದಿಲ್ಲ. ಮತ್ತೊಂದೊಡೆ ಮೀನುಗಾರರಿಗೂ ಯಾವುದೇ ಅಪಾಯಕರ ಮುನ್ಸೂಚನೆಯಿಲ್ಲ. ಉಳಿದಂತೆ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ಉಷ್ಣಾಂಶ 15 ಡಿ.ಸೆಲ್ಸಿಯಸ್‌ಗೆ ಇಳಿಕೆ: ಇನ್ನು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಹವಾಮಾನ ಮುನ್ಸೂಚನೆಯನ್ನು ನೋಡಿದಾಗ ಮುಂದಿನ ಎರಡಿ ದಿನಗಳು ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು/ ದಟ್ಟಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 29 ದಾಖಲಾಗಲಿದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು: ಹಣ ದ್ವಿಗುಣಗೊಳಿಸುವ ಆ್ಯಪ್‌ನಿಂದ 21 ಲಕ್ಷ ರೂ. ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು!
ಎರಡು ವರ್ಷಗಳ ಹಿಂದೆ ಬೀದರ್‌ನಲ್ಲಿ ಕಡಿಮೆ ತಾಪಮಾನ: ಕಳೆದ ಎರಡು ವರ್ಷಗಳ ಹಿಂದೆ 2021ರ ಡಿ.23ರಂದು ಬೀದರ್‌ನಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಸತತವಾಗಿ ಐದಾರು ದಿನಗಳ ಕಾಲ 9.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಇನ್ನು ಸದರಿ ವರ್ಷ ಉತ್ತರ ಭಾರತ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಉತ್ತಮವಾಗಿ ಮಳೆಯಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಬರಗಾಲದ ಛಾಯೆ ಆವರಿಸಿದೆ. ಈಗ ಚಳಿಯೂ ಹೆಚ್ಚಾಗಿದ್ದು, ಜನರು ಚಳಿಗೆ ತತ್ತರಿಸುತ್ತಿದ್ದಾರೆ. ಉತ್ತರ ಭಾರತದ ಚಳಿಗಾಳಿಯು ದಕ್ಷಿಣ ಭಾರತದತ್ತಲೂ ಬೀಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣ ಹೆಚ್ಚಾಗಿದ್ದು, ಮೂರ್ನಾಲ್ಕು ದಿನ ಚಳಿ ವಾತಾವರಣ ಮುಂದುವರೆಯುವ ಮುನ್ಸೂಚನೆಯಿದೆ.