ಚಿತ್ರದುರ್ಗ: ಕೃಷ್ಣನ ಹೆಸರಲ್ಲಿ ಸರ್ಕಲ್ ನಿರ್ಮಿಸಲು ಯಾದವಾನಂದ ಸ್ವಾಮೀಜಿ ಆಗ್ರಹ
ಶ್ರೀಗಳ ಹೋರಾಟಕ್ಕೆ ಯಾದವ ಸಮಾಜದ ಮುಖಂಡರು ಹಾಗೂ ಸ್ಥಳೀಯರು ಸಾಥ್ ನೀಡಿದ್ದಾರೆ. ಈ ಪ್ರತಿಮೆಯನ್ನು ತೆರವುಗೊಳಿಸಿದ್ರೆ, ಉಗ್ರ ಹೋರಾಟ ನಡೆಸಲಾಗುವುದು ಹಾಗು ರಾಜ್ಯಾದ್ಯಂತ ಅಪಾರ ಸಂಖ್ಯೆಯಲ್ಲಿರುವ ಯಾದವರು ಸಂಘಟಿತರಾಗಿ ಮುಂಬರುವ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.
ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಡಿ.14): ಈ ವರೆಗೆ ಮೀಸಲಾತಿಗಾಗಿ ಕೆಲ ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರು ಸರ್ಕಾರದ ವಿರುದ್ಧ ಪ್ರತಿಭಟಿಸ್ತಿದ್ರು. ಈಗ ಯಾದವ ಸಮುದಾಯದ ಯಾದವಾನಂದ ಸ್ವಾಮೀಜಿ ಯಾದವರ ಆರಾಧ್ಯ ದೈವ ಶ್ರೀ ಕೃಷ್ಣನ ಹೆಸರಲ್ಲಿ ಸರ್ಕಲ್ ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ಹೀಗೆ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಶ್ರೀ ಕೃಷ್ಣ ಯಾದವಾನಂದಶ್ರೀ. ಸ್ವಾಮೀಜಿಗೆ ಸಾಥ್ ನೀಡಿರುವ ಭಕ್ತವೃಂದ. ಇಷ್ಟಕ್ಕೆಲ್ಲ ಕಾರಣವಾಗಿದ್ದು, ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಶ್ರೀ ಕೃಷ್ಣ ಸರ್ಕಲ್.
ಹೌದು, ಹಲವು ದಿನಗಳಿಂದ ಚಿತ್ರದುರ್ಗದಲ್ಲಿ ಸರ್ವ ಜನಾಂಗದ ಆರಾಧ್ಯಧೈವ ಹಾಗು ಯಾದವರ ಪ್ರತೀಕ ಶ್ರೀಕೃಷ್ಣನ ಪ್ರತಿಮೆ ಅನಾವರಣ ಮಾಡಲು ಯಾದವ ಸಮುದಾಯದ ಮುಖಂಡರು ಸಂಘಟಿತರಾಗಿದ್ರು.ಆದ್ರೆ ನಗರದ ಪ್ರಮುಖ ರಸ್ತೆಯುದ್ದಕ್ಕು ವಿವಿಧ ಸಮುದಾಯಗಳ ಸಾಧಕರು ಹಾಗು ಹೋರಾಟಗಾರರ ಪ್ರತಿಮೆಗಳನ್ನು ಈಗಾಗಲೇ ಪ್ರತಿಷ್ಟಾಪಿಸಲಾಗಿದೆ. ಹೀಗಾಗಿ, ಸ್ಥಳವಕಾಶ ಹಾಗೂ ಸೂಕ್ತ ಸಮಯಕ್ಕಾಗಿ ಕಾದಿದ್ದಯಾದವ ಸಮಾಜದ ಮುಖಂಡರು, ಯಾದವಶ್ರೀ ನೇತೃತ್ವದಲ್ಲಿ ಚೋಳಗಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹೊಳಲ್ಕೆರೆ ರಸ್ತೆಯ ನೂತನ ರಿಂಗ್ ರೋಡಲ್ಲಿ ಶ್ರೀ ಕೃಷ್ಣನ ಪ್ರತಿಮೆಯನ್ನು ರಾತ್ರೋರಾತ್ರಿ ಪ್ರತಿಷ್ಟಾಪಿಸಿದ್ದಾರೆ. ಇದು ಕಂಚಿನ ಪ್ರತಿಮೆಯಾಗಿದ್ದು, ನಾಲ್ಕು ಅಡಿ ಎತ್ತರವಿದೆ. ಅಲ್ಲದೇ ಈ ಸರ್ಕಲ್ ಗೆ ಶ್ರೀಕೃಷ್ಣ ಯಾದವಾನಂದ ಶ್ರೀಗಳ ನೇತೃತ್ವದಲ್ಲಿ ಶ್ರೀಕೃಷ್ಣ ವೃತ್ತವೆಂದು ಸಹ ಘೋಷಿಸಿದ್ದು, ಇಲ್ಲಿನ ಪ್ರತಿಮೆಯನ್ನು ಜಿಲ್ಲಾಡಳಿತ ತೆರವುಗೊಳಿಸದೇ,ಸರ್ಕಲ್ ಅಭಿವೃದ್ಧಿಗೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಶ್ರೀಗಳು ಒತ್ತಾಯಿಸಿದ್ದಾರೆ.
ಉದ್ದಿಮೆಗಳ ಮಾರಾಟ ಮಾಡಿದ್ದು ಬಿಟ್ರೆ ಬಿಜೆಪಿ ಏನೂ ಮಾಡಿಲ್ಲ: ಎಚ್.ವಿ.ಕುಮಾರಸ್ವಾಮಿ
ಇನ್ನು ಶ್ರೀಗಳ ಹೋರಾಟಕ್ಕೆ ಯಾದವ ಸಮಾಜದ ಮುಖಂಡರು ಹಾಗೂ ಸ್ಥಳೀಯರು ಸಾಥ್ ನೀಡಿದ್ದಾರೆ. ಈ ಪ್ರತಿಮೆಯನ್ನು ತೆರವುಗೊಳಿಸಿದ್ರೆ, ಉಗ್ರ ಹೋರಾಟ ನಡೆಸಲಾಗುವುದು ಹಾಗು ರಾಜ್ಯಾದ್ಯಂತ ಅಪಾರ ಸಂಖ್ಯೆಯಲ್ಲಿರುವ ಯಾದವರು ಸಂಘಟಿತರಾಗಿ ಮುಂಬರುವ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ,ಯಾದವ ಸಮಾಜದ ಮುಖಂಡ. ನಾಗರಾಜ್ ಎಚ್ಚರಿಸಿದ್ದಾರೆ.
ಒಟ್ಟಾರೆ ಚಿತ್ರದುರ್ಗದಲ್ಲಿ ಯಾದವಾನಂದ ಶ್ರೀ ನೇತೃತ್ವದಲ್ಲಿ ಶ್ರೀಕೃಷ್ಣನ ಪ್ರತಿಮೆಯನ್ನು ಅನಧಿಕೃತವಾಗಿ ಪ್ರತಿಷ್ಟಾಪಿಸಲಾಗಿದೆ.ಇದು ಜಿಲ್ಲಾಡಳಿತಕ್ಕೆಬಾರಿ ತಲೆನೋವು ಎನಿಸಿದೆ.ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಯಾವ ನಡೆ ಅನುಸರಿಸಲಿದೆ ಅಂತ ಕಾದು ನೋಡಬೇಕಿದೆ.